ಸೇವಾ ಭಾರತಿಯ ದಿವ್ಯ ಚೇತನಾ ಸಂವಹನ ವಿಕಸನ ಕೇಂದ್ರದ ಉದ್ಘಾಟನೆ

Upayuktha
0

 


ಮಂಗಳೂರು: ಸೇವಾ ಭಾರತಿ(ರಿ) ಮಂಗಳೂರು ಇವರು , ನರಿಂಗಾನ ಮೊಂಟೆಪದವು ಮಾಧವ ವನದಲ್ಲಿ ನಿರ್ಮಿಸಿದ ‘ಅಂಕುರ’ ಸೌಧದಲ್ಲಿ ದಿವ್ಯ ಚೇತನಾ ಸಂವಹನ ವಿಕಸನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ ಜೂನ್ 26 ರಂದು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.


ಕರ್ಣಾಟಕ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನಿರ್ಮಾಣವಾದ ಈ ಆಟಿಸಂ ಕೇಂದ್ರವನ್ನು ಬ್ಯಾಂಕಿನ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾಧ ಶ್ರೀ ರಾಘವೇಂದ್ರ ಎಸ್.ಭಟ್ ಅವರು ತೆಂಗಿನ ಸಸಿಗೆ ನೀರು ಹಾಕುವುದರ ಮೂಲಕ ಮತ್ತು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.


ಈ ಕಾರ್ಯಕ್ರಮಕ್ಕೆ ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಹಾಗೂ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಅಯೋಧ್ಯೆಯ ವಿಶ್ವಸ್ಥರಾದ ಶ್ರೀ ಶ್ರೀ  ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಆಗಮಿಸಿ, ಶ್ರೀಗಂಧ ಸಸಿ ನೆಟ್ಟು, ಸೇವಾ ಭಾರತಿಯ ಅಂಕುರ ಕಟ್ಟಡದಲ್ಲಿ ದಿವ್ಯಾಂಗರನ್ನು ಸಬಲರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಎಲ್ಲಾ ರೀತಿಯ ಸೌಕರ್ಯಗಳನ್ನು ವೀಕ್ಷಿಸಿದರು. ತದನಂತರ ತಮ್ಮ ದಿವ್ಯ ಆಶೀರ್ವಚನವನ್ನು ಮತ್ತು ಆಶೀರ್ವಾದವನ್ನು ನೆರೆದ ಸಭಿಕರಿಗೆ ನೀಡಿ ಹರಸಿದರು. ಕಳೆದ 3 ದಶಕದಿಂದ ದಿವ್ಯಾಂಗರಿಗಾಗಿ ಸೇವಾ ಭಾರತಿಯು ಸಡೆಸುತ್ತಿರುವ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು.


ಸಮಾರಂಭದಲ್ಲಿ ಸೇವಾ ಭಾರತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ನಾಗರಾಜ್ ಭಟ್, ಖಜಾಂಚಿ ಶ್ರೀ ವಿನೋದ್ ಶೆಣೈ, ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ಶ್ರೀ ಪೃಥ್ವಿಪಾಲ.ಕೆ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾದ ಶ್ರೀಮತಿ ಸುಮನ್ ಘಾಟೆ, ದಿವ್ಯ ಚೇತನಾ ಸಂವಹನ ವಿಕಸನ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ರವಿಕಲಾ, ಅದಮ್ಯ ಚೇತನಾ ವಸತಿಯುತ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವರ್ಷ, ಸಂಸ್ಥೆಯ ವಿಶ್ವಸ್ಥರು, ಸ್ವಯಂಸೇವಕರು, ಮಕ್ಕಳು, ಪೋಷಕರು, ಶಾಲಾ ಸಿಬ್ಬಂದಿ ವರ್ಗದವರು, ಹಿತೈಷಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top