ಉಜಿರೆ ಶ್ರೀ ಧ.ಮಂ.ಪ ಪೂ.ಕಾಲೇಜು: ವಿಶ್ವ ಯೋಗ ದಿನಾಚರಣೆ

Upayuktha
0

  


      

ಉಜಿರೆ:  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ  ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ 12ನೇ ವಿಶ್ವ  ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು  ಉಜಿರೆ ಎಸ್ ಡಿ ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಹಾಯಕ  ಪ್ರಾಧ್ಯಾಪಕಿ ಡಾ. ಹರ್ಷಿಣಿ  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯೋಗ ಮನಸ್ಸನ್ನು ಹತೋಟಿಯಲ್ಲಿ ಇಡಲು ಸಹಕಾರಿ.ವಿದ್ಯಾರ್ಥಿಗಳು ದಿನ ನಿತ್ಯ ಯೋಗ ಮಾಡುವುದರಿಂದ ಏಕಾಗ್ರತೆ ಮೂಡಿಸಿ ಓದಿನಲ್ಲೂ ಯಶಸ್ವಿಯಾಗಲು ಸಾಧ್ಯ. ಜೊತೆಗೆ  ಉತ್ತಮ ಅರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ ಮಾತನಾಡಿ ಯೋಗ ದಿನ ಯೋಗದ ಮಹತ್ವ ತಿಳಿಸುವ ದಿನ ಮಾತ್ರ. ಪ್ರತಿ ನಿತ್ಯ ಯೋಗ ಮಾಡಿದಾಗ ಅದರ ನಿಜವಾದ ಮಹತ್ವದ ಅನುಭವ ಆಗಲು ಸಾಧ್ಯ.ಏಕೆಂದರೆ ಅರೋಗ್ಯವಂತ ಜೀವನಕ್ಕೆ ಯೋಗ ಅತ್ಯಮೂಲ್ಯವಾದುದು." ಎಂದು ಹೇಳಿದರು.

     

ಸ್ವಯಂ ಸೇವಕ ಸಾಕೇತ್ ಯೋಗ ದಿನದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.  ವೇದಿಕೆಯಲ್ಲಿ ಕಾಲೇಜಿನ ಎನ್ ಎಸ್ ಎಸ್  ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ  ಶೋಭಾ ಪಿ ಉಪಸ್ಥಿತರಿದ್ದರು.

     

ಉಜಿರೆ ಎಸ್ ಡಿ ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಡಾ. ಅತುಲಾ, ಡಾ. ಶಿವರಾಜ್, ಡಾ. ವಿವೇಕ್ ಸ್ವಯಂ ಸೇವಕರಿಗೆ ಯೋಗ ಶಿಬಿರ ನಡೆಸಿಕೊಟ್ಟರು.

       

ಸ್ವಯಂ ಸೇವಕಿಯರಾದ ಸುಪೇಕ್ಷಾ  ನಿರೂಪಿಸಿ, ಶ್ರೇಯ   ಸ್ವಾಗತಿಸಿ, ಅನ್ವಿತಾ   ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top