ಬದಿಯಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಜೂನ್ ತಿಂಗಳ ಸಭೆಯು 7/6/2026 ರಂದು ಸಂಜೆ 3.30 ಗಂಟೆಗೆ ಧರ್ಮತ್ತಡ್ಕದ ಗುಂಪೆ ವಲಯದ ಕಛೇರಿಯಲ್ಲಿ ನಡೆಯಿತು.
ಧ್ವಜಾರೋಹಣ, ಗುರುವಂದನೆ, ಗೋಸ್ತುತಿ, ಗುರುಪಾದುಕಾ ಸ್ತೋತ್ರ ಪಠನದೊಂದಿಗೆ ಸಭೆ ಆರಂಭವಾಯಿತು. ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕಾನ ಗತಸಭೆಯ ವರದಿಯನ್ನು ನೀಡಿದರು.
ಲೇಖ ವಿಭಾಗದ ಮುಖ್ಯಸ್ಥ ಹಳ್ಳಕೋಡ್ಲು ಗೋವಿಂದ ಭಟ್ ಅವರು ಲೆಕ್ಕ ಪತ್ರ ಮಂಡಿಸಿದರು. ಮಂಡಲದಿಂದ ಬಂದ ವಿವಿಧ ಸೂಚನೆಗಳನ್ನು ಕಾರ್ಯದರ್ಶಿ ವಾಚಿಸಿದರು.
ಪುತ್ತಿಗೆ ಕೃಷ್ಣ ಹೆಬ್ಬಾರರ ಕುಟುಂಬ ವಾಸವಿದ್ದ ಮನೆಯು ತೀರಾ ಜೀರ್ಣವಾಗಿ ಸೋರುತ್ತಿದ್ದಾಗ ಶ್ರೀಮಠದ ಆಶ್ರಯದಲ್ಲಿ ಸೋರುಗೊಂದು ಸೂರು ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ದಾನಿಗಳೆಲ್ಲರ ಸಹಕಾರದಿಂದ 02.05.2026 ರಂದು ಶ್ರೀ ಗುರುಪೀಠದ ಆಶೀರ್ವಾದದಿಂದಾಗಿ ಮಳೆಬರುವ ಮೊದಲೇ ಕಾಮಗಾರಿಯೂ ಮುಗಿಯಿತು.
ದಾನಿಗಳಾದ ಎಡಕ್ಕಾನ ಮಹಾಬಲೇಶ್ವರ ಭಟ್ಟ ಹಾಗೂ ಮಹಾಮಂಡಲದ ಪ್ರಮುಖರ ಉಪಸ್ಥಿತಿಯಲ್ಲಿ ಪ್ರವೇಶೋತ್ಸವವನ್ನು ನೆರವೇರಿಸಿ ಆಯಿತು. ಸಹಕರಿಸಿದ ಎಲ್ಲರನ್ನೂ ಕೃತಜ್ಞತಾ ಪೂರ್ವಕ ಅಭಿನಂದಿಸಲಾಯಿತು.
ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ನಡೆದ 'ಶನಿ ನಮನ, ತಾಪ ಶಮನ' ಕಾರ್ಯಕ್ರಮ ಅದ್ಬುತ ಯಶಸ್ಸು ಕಂಡಿದೆ. ಸಹಕರಿಸಿದ ವೈದಿಕರು, ಪಾರಾಯಣ ಕರ್ತರು ಹಾಗೂ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳು. ಕಾರ್ಯಕ್ರಮ ಆಯೋಜಿಸಿ ನಿರ್ವಹಿಸಿದ ಸಮಿತಿಯವರಿಗೂ, ಸುವಸ್ತು ಸಂಗ್ರಹದ ಕಾರ್ಯಕರ್ತರು ಕುಂಕುಮಾರ್ಚನೆ,ಶ್ರೀಗುರುಪಾದುಕಾ ಸ್ತೋತ್ರ,ಅರ್ಧನಾರೀಶ್ವರ ಸ್ತೋತ್ರ ಇತ್ಯಾದಿ ಪಾರಾಯಣಗಳನ್ನು ನಡೆಸಿಕೊಟ್ಟು, ಪ್ರಸಾದ ವಿತರಣೆಯಲ್ಲೂ ಸಹಕರಿಸಿದ ಮಾತೆಯರು ಹಾಗೂ ವಿವಿಧ ಪೂಜಾಹವನ ಸೇವೆಗಳಲ್ಲಿ ಪಾಲ್ಗೊಂಡ, ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಶ್ರೀಗುರುಭಕ್ತವೃಂದಕ್ಕೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಅರ್ಧನಾರೀಶ್ವರ ಸ್ತೋತ್ರ ಪಠಣದ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲರೂ ಹೆಚ್ಚಿನ ಸಂಖ್ಯೆಯ ಪಠಣ ಮಾಡಲು ಸೂಚಿಸಲಾಯಿತು.
ಶ್ರೀ ಸುವರ್ಣ ಪಾದುಕಾ 3ನೇ ಆವೃತ್ತಿಯ ಸವಾರಿಯು ಮಡ್ವ ಘಟಕ ಶ್ರಾವಣಕೆರೆ ಕೇಶವ ಹೆಬ್ಬಾರರ ಮನೆ 08.07.2026 ರಂದು ಆಗಮಿಸಿ 09.07.2026 ಮನೆ ಮನೆ ಸಂಚಾರ, ಗುರು ಪಾದುಕಾ ಭಿಕ್ಷಾ ಸೇವೆ ನಡೆಸುವ ಬಗ್ಗೆ ಸಮಾಲೋಚಿಸಿ ತೀರ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ 2025-26
2025-26ನೇ ಸಾಲಿನಲ್ಲಿ ಮುಳ್ಳೇರಿಯ ಮಂಡಲ ಗುಂಪೆ ವಲಯ ಘಟಕದ ವ್ಯಾಪ್ತಿಗೆ ಒಳಪಟ್ಟ ಈ ಕೆಳಗಿನ 8 ಮಂದಿ ವಿದ್ಯಾರ್ಥಿಗಳ 'ಪ್ರತಿಭಾ ಪುರಸ್ಕಾರ' ನಡೆಸಿ ಗೌರವಿಸಲಾಯಿತು.
1. ಕು. ಆತ್ಮೀಕಾ, ಗುಂಪೆ
2. ಕು. ಮನೋಜ್ಞ, ಮೇಪೋಡು
3. ಕು. ಅಪರ್ಣ, ನೆರಿಯ
4. ಚಿ. ಮನೀಶ್, ಗುಂಪೆ
5. ಕು. ಅಪೂರ್ವ, ಎಡಕ್ಕಾನ
6. ಆದರ್ಶ ನಾರಾಯಣ ಪಿ ಎ ಪುತ್ತಿಗೆ
7. ತನುಷ್ ಕುಮಾರ್ ಎನ್, ನೇರೋಳು
8. ಸಿಂಜಿತ ಕೆ, ನೆಕ್ಕಿಗುಳಿ
ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠ ಶಾಲೆಯಲ್ಲಿ ಮಧ್ಯಾಹ್ನದ ಮಕ್ಕಳ ಭೋಜನ ವ್ಯವಸ್ಥೆಗೆ ದಾನಿಗಳಿಂದ ಸಹಾಯ ಅಪೇಕ್ಷೆಪಟ್ಟಿದ್ದು ಒಂದು ದಿನದ ವ್ಯವಸ್ಥೆಗೆ 4000/-; ಪಾಯಸ ಸಹಿತ ಆದರೆ 6000/- ಕೊಟ್ಟು ಸಹಕರಿಸಬೇಕು ಎಂದು ಆಡಳಿತ ಸಮಿತಿ ಪರವಾಗಿ ಕೇಳಿಕೊಂಡಿರುತ್ತಾರೆ. ಅದಲ್ಲದಿದ್ದರೆ ಯಥಾಶಕ್ತಿ ಭೋಜನ ನಿಧಿಗೆ ಸಮರ್ಪಣೆ ಮಾಡಬೇಕಾಗಿ ಸಭೆಯಲ್ಲಿ ಕೇಳಿಕೊಳ್ಳಲಾಯಿತು. ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


