ಮುಳಿಯ "ಸಿಲ್ವರ್ ಮ್ಯಾರಥಾನ್ 2026"ಗೆ ಚಾಲನೆ

Upayuktha
0

ಪುತ್ತೂರು/ಕೊಡಗು: ಮುಳಿಯ ಗೋಲ್ಡ್ & ಡೈಮಂಡ್ಸ್‌ನ ವಿಶೇಷ ಎಕ್ಸ್‌ಕ್ಲೂಸಿವ್ ಬೆಳ್ಳಿ ಆಭರಣಗಳ ಬ್ರ್ಯಾಂಡ್ "ಸಿಲ್ವೆರಿಯಾ" ವತಿಯಿಂದ "ಸಿಲ್ವರ್ ಮ್ಯಾರಥಾನ್ 2026" ಯೋಜನೆಗೆ ಇಂದು ಚಾಲನೆ ನೀಡಲಾಯಿತು.


ಈ 90 ದಿನಗಳ ವಿಶೇಷ ಯೋಜನೆಯು ಸೆಪ್ಟೆಂಬರ್ 14, 2026ರವರೆಗೆ ನಡೆಯಲಿದ್ದು, ಗ್ರಾಹಕರಿಗೆ ವೈವಿಧ್ಯಮಯ 92.5 ಶುದ್ಧತೆಯ ಸ್ಟರ್ಲಿಂಗ್ ಸಿಲ್ವರ್ ಆಭರಣಗಳನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.


92.5 ಶುದ್ಧತೆಯ ಬೆಳ್ಳಿ ಸರಗಳು, ನೆಕ್ಲೇಸ್‌ಗಳು, ಕಾಲ್ಗೆಜ್ಜೆ , ಮಕ್ಕಳ ಜ್ಯುವೆಲ್ಲರಿ, ಉಂಗುರಗಳು, ಬಳೆಗಳು, ಕಿವಿಯೋಲೆಗಳು ಹಾಗೂ ವಾಚ್‌ಗಳ ವಿಶೇಷ ಸಂಗ್ರಹವನ್ನು ಈ ಅವಧಿಯಲ್ಲಿ ಗ್ರಾಹಕರು ವೀಕ್ಷಿಸಿ ಖರೀದಿಸಬಹುದಾಗಿದೆ. ಚಿನ್ನಾಭರಣಗಳಲ್ಲಿ ಲಭ್ಯವಿರುವ ಬಹುತೇಕ ಎಲ್ಲಾ ವಿನ್ಯಾಸಗಳು ಮತ್ತು ವೈವಿಧ್ಯತೆಗಳು ಈಗ ಬೆಳ್ಳಿ ಆಭರಣಗಳಲ್ಲಿಯೂ ಲಭ್ಯವಿವೆ.


ಈ 90 ದಿನಗಳ ಅವಧಿಯಲ್ಲಿ ಪ್ರತಿ ಖರೀದಿಯಲ್ಲಿ ₹5,000 ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಸಿಲ್ವರ್ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟರ್, ಫ್ರಿಜ್, ಏರ್ ಫ್ರೈಯರ್ ಸೇರಿದಂತೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಹಳೆಯ ಬೆಳ್ಳಿ ಆಭರಣಗಳನ್ನು ಹೊಸ ಸಿಲ್ವೆರಿಯಾ ಆಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ವಿಶೇಷ ಸೌಲಭ್ಯವೂ ಲಭ್ಯವಿದೆ.


ಈ ಉತ್ಸವದ ಅಂಗವಾಗಿ ಪ್ರತಿ ಶಾಖೆಯಲ್ಲೂ ಬೆಳ್ಳಿ ಆಭರಣಗಳ ಕುರಿತ ವಿಚಾರ ಸಂಕಿರಣ, ಫ್ಯಾಷನ್ ಶೋ, ನಿತ್ಯೋಪಯೋಗಿ ಬೆಳ್ಳಿ ಪಾತ್ರೆ ಪಗಡಿಗಳ ಪ್ರದರ್ಶನ ಮಾರಾಟ, ಸೆಲ್ಫಿ ಸ್ಪರ್ಧೆ ಹಾಗೂ ಶಾಲಾ-ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ ಬ್ಯೂಟಿಷಿಯನ್‌ಗಳು ಮತ್ತು ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳೂ ನಡೆಯಲಿವೆ.


ವಿಶೇಷ ಅಭಿಪ್ರಾಯ


"ಈಗ ಮದುವೆ ಇನ್ನಿತರ ಸಮಾರಂಭಗಳಲ್ಲಿ  ಮ್ಯಾಚಿಂಗ್ ಜ್ಯುವೆಲ್ಲರಿಗಳ ಟ್ರೆಂಡ್ ಹೆಚ್ಚಾಗುತ್ತಿದೆ. ಮದುವೆಯ ದಿನ ವಧು ಮತ್ತು ಕುಟುಂಬದವರು ಚಿನ್ನಾಭರಣಗಳನ್ನು ಧರಿಸುತ್ತಾರೆ. 


ಹಾಗೆಯೇ ವಿದೇಶಿ ವಿನಿಮಯ ಉಳಿಸುವ ನಿಟ್ಟಿನಲ್ಲಿ ಮೆಹಂದಿ, ಸಂಗೀತ ಅಥವಾ ರಿಸೆಪ್ಷನ್ ಕಾರ್ಯಕ್ರಮಗಳಲ್ಲಿ ಬೆಳ್ಳಿ ಆಭರಣಗಳನ್ನು ಧರಿಸುವ ಹೊಸ ಫ್ಯಾಷನ್ ಆರಂಭ ಯಾಕೆ ಮಾಡಬಾರದು?" ಎಂದು ಕೇಶವಪ್ರಸಾದ್ ಮುಳಿಯ ಪ್ರಶ್ನಿಸುತ್ತಾರೆ.


"ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ 4 ಪಟ್ಟು ಗಣನೀಯವಾಗಿ ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿಯೂ ಉತ್ತಮ ಬೆಳವಣಿಗೆ ಕಂಡುಬಂದಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಇರುವ ಬೆಳ್ಳಿ ವಸ್ತು ಗಳ ಆಭರಣಗಳ ಮೌಲ್ಯ ಮಾಪನ ಮಾಡಿ ಹಳೆಯದಾಗಿರುವ ಅಥವಾ ಕಪ್ಪಾಗಿರುವ ಆಭರಣಗಳನ್ನು ವಿನಿಮಯದ ಮೂಲಕ ಹೊಸ ವಿನ್ಯಾಸದ ಆಭರಣಗಳಾಗಿ ಬದಲಿಸಿಕೊಳ್ಳಬಹುದು" ಎಂದು ಕೃಷ್ಣನಾರಾಯಣ ಮುಳಿಯ ತಿಳಿಸಿದರು.


ಮುಳಿಯ ಸಿಲ್ವೆರಿಯಾದಲ್ಲಿ ವಿವಿಧ ವಿನ್ಯಾಸಗಳ ನೆಕ್ಲೇಸ್‌ಗಳು, ಕಾಲ್ಗೆಜ್ಜೆಗಳು, ಉಂಗುರಗಳು ಹಾಗೂ ವೈವಿಧ್ಯಮಯ ಬೆಳ್ಳಿ ಆಭರಣಗಳ ವಿಶೇಷ ಸಂಗ್ರಹ ಲಭ್ಯವಿದೆ. "ಒಮ್ಮೆ ನಮ್ಮ ಶೋರೂಮ್‌ಗೆ ಭೇಟಿ ನೀಡಿ ಸಿಲ್ವರ್ ಕೌಂಟರ್ ವೀಕ್ಷಿಸಿದರೆ ಅದರ ವೈವಿಧ್ಯತೆ ಮತ್ತು ವಿನ್ಯಾಸಗಳು ನಿಮ್ಮನ್ನು ಖಂಡಿತವಾಗಿಯೂ ಆಶ್ಚರ್ಯಗೊಳಿಸುತ್ತವೆ" ಎಂದು ಸಿಲ್ವೆರಿಯಾ ಬ್ರ್ಯಾಂಡ್‌ನ ನೇತೃತ್ವ ವಹಿಸಿರುವ ಕೇಶವಪ್ರಸಾದ್ ಮುಳಿಯ ಹೇಳಿದರು.


ಈ ಸಿಲ್ವರ್ ಮ್ಯಾರಥಾನ್ ಸಂಭ್ರಮಾಚರಣೆ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪ ಮತ್ತು ಬೆಂಗಳೂರು ಸೇರಿದಂತೆ ಎಲ್ಲಾ ಮುಳಿಯ ಶಾಖೆಗಳಲ್ಲಿ ನಡೆಯಲಿದ್ದು, ನೆಲ್ಯಾಡಿ ಹಾಗೂ ಕೊಡಗಿನ ಸೋಮವಾರಪೇಟೆಯಲ್ಲಿರುವ ವಿಶೇಷ "ಸಿಲ್ವೆರಿಯಾ" ಶಾಖೆಗಳಲ್ಲಿಯೂ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top