ಸುರತ್ಕಲ್: ಸರಕಾರಿ ಪ್ರೌಢ ಶಾಲೆ ಚೇಳ್ಯಾರುನ ಪ್ರಕೃತಿ ಇಕೋ ಕ್ಲಬ್, ಇಂಟರಾಕ್ಟ್ ಕ್ಲಬ್ ಮತ್ತು ಸುರತ್ಕಲ್ ರೋಟರಿ ಕ್ಲಬ್ ಸಹಯೋಗದಲ್ಲಿ ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯಿಂದ ಪ್ರೇರಣೆ ಪಡೆಯೋಣ ಎಂಬ ಆಶಯದೊಂದಿಗೆ ಪರಿಸರ ದಿವಸ ಹಾಗೂ ವಿದ್ಯಾರ್ಥಿಗಳಿಂದ ಹಣ್ಣಿನ ಗಿಡಗಳ ನೆಡುವಿಕೆ ನಡೆಯಿತು.
ರೋಟರಿ ಕ್ಲಬ್ ಕಾರ್ಯದರ್ಶಿ ರೊ. ರಾಮಮೋಹನ್ ವೈ. ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತಾಗಿ ಆಸಕ್ತಿ ಮೂಡಿ ಬರಬೇಕು. ನೆಟ್ಟ ಗಿಡವನ್ನು ಜೋಪಾನವಾಗಿ ಬೆಳೆಸಿ ಮುಂದೆ ಬರುವ ವಿದ್ಯಾರ್ಥಿಗಳಿಗೆ ಬೆಳೆಸಲು ನೀಡುವ ಪದ್ಧತಿ ಬರಬೇಕು ಎಂದರು.
ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್, ನಿರ್ದೇಶಕ ಕೃಷ್ಣಮೂರ್ತಿ, ಶಾಲಾ ಮುಖ್ಯ ಶಿಕ್ಷಕಿ ಕಿಶೋರಿ, ಶಿಕ್ಷಕಿಯರಾದ ಮರೀನಾ, ಸ್ಮಿತಾ, ಜೂಲೇಟ, ನಯನ, ಗುಣಲಕ್ಷ್ಮಿ, ಅಪೇಕ್ಷಾ ಸುಧೀರ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


