ಮಂಗಳೂರು: ಕಲಾವಿದರು ಬವಣೆ ಪಟ್ಟು, ಪರಿಶ್ರಮದಿಂದ, ತಮ್ಮನ್ನೇ ಕಲೆಗಾಗಿ ಮುಡಿಪಾಗಿರಿಸಿಕೊಳ್ಳುತ್ತಾರೆ. ಆಗ ಅವರನ್ನು ಸಮಾಜ ಗುರುತಿಸಿದರೆ ಇನ್ನೂ ಹುಮ್ಮಸಿನಿಂದ ಕಲೆಯೊಳಗೆ ಒಂದಾಗುತ್ತಾರೆ. ಯಕ್ಷಗಾನವು ಒಂದು ಶಕ್ತಿಯನ್ನು ಬಯಸುವ ಕಲೆಯಾಗಿದೆ. ಪ್ರಾದೇಶಿಕವಾಗಿ ಶ್ರೀಮಂತ ಕಲೆಯೆನಿಸಿದರೂ ಇಂದು ಅದರ ವ್ಯಾಪ್ತಿ ವಿಶ್ವವನ್ನು ತಲುಪಿದೆ. ಎಳೆಯರು, ಮಹಿಳೆಯರಾದಿಯಾಗಿ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ಅವರನ್ನು ಬೆಳೆಸುವ ಹೊಣೆ ನಮಗಿದೆ. ಅದನ್ನು ನಾವು ಸಹಕರಿಸಿ ಬೆಂಬಲಿಸೋಣ. ಕಲೆ ಕಲಾವಿದರನ್ನು ಪ್ರೋತ್ಸಾಹಿಸೋಣ ಎ೦ದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹೆಚ್.ವಿ. ರಾಘವೇಂದ್ರ ರಾವ್ ಕದ್ರಿಯ ಸರಯೂ ಅಷ್ಠಾಹದಲ್ಲಿ ಹೇಳಿದರು.
ಸರಯೂ ಸಂಸ್ಥೆ ಕಲೆಗಾಗಿ ಶ್ರಮಿಸುತ್ತಾ ಸಂಸ್ಥೆ ಎಂದ ಅವರು ಹಾಸ್ಯಗಾರ ಮಹೇಶ್ ಮಣಿಯಾಣಿ ದೊಡ್ತೋಟ ಹಾಗೂ ಯಕ್ಷಕಲಾ ಸುರತ್ಕಲ್ ನ ಸಂಚಾಲಕಿ ಕಲಾವತಿ ಟೀಚರ್ ರವರನ್ನು ಯಕ್ಷ ಸರಯೂ ಬಿರುದಿತ್ತು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ತುಳುಕೂಟದ ಉಪಾಧ್ಯಕ್ಷ ರೊ. ಜೆ.ವಿ.ಶೆಟ್ಟಿ, ಸಾಹಿತಿ ಗೀತಾ ಲಕ್ಷ್ಮೀಶ್, ದೀಪಕ್ ಶರ್ಮಾ. ಗುರುಪ್ರಸಾದ್, ಕಡಂಬಾರ್, ಗಿರೀಶ್ ರೈ ಕಕ್ಕೆಪದವು, ಲ. ಸಂಜಯ ಕುಮಾರ್ ಶೆಟ್ಟಿ, ಗೋಣಿಬೀಡು, ಸೀತಾರಾಂ ಕುಮಾರ್, ವರ್ಕಾಡಿ ಮಧುಸೂದನ ಎ. ಉಪಸ್ಥಿತರಿದ್ದರು. ಸನ್ಮಾನ ಪತ್ರಗಳನ್ನು ಪೂರ್ಣಿಮಾ ಪ್ರಭಾಕರ ರಾವ್, ಹಾಗೂ ವರ್ಕಾಡಿ ರವಿ ಅಲೆವೂರಾಯ ವಾಚಿಸಿದರು. ನಿರೂಪಕ ಸುಧಾಕರ ರಾವ್ ನಿರ್ವಹಿಸಿ, ಧನ್ಯವಾದವಿತ್ತರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


