ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ

Upayuktha
0


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ನಾಟಕ ವಿಭಾಗ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ತಂಡಕ್ಕೆ ಕಲಾವಿದರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರತಿವರ್ಷವೂ ಹಲವು ಶ್ರೇಷ್ಠ ನಾಟಕಗಳನ್ನು ಕನ್ನಡ ರಂಗಭೂಮಿಗೆ ನೀಡಿದ ಕೀರ್ತಿ ಆಳ್ವಾಸ್ ರಂಗ ತಂಡದ್ದು.
ರಂಗಾಭಿನಯ , ಮಾತುಗಾರಿಕೆ ಹಾಗೂ ತಾಂತ್ರಿಕವಾಗಿಯೂ ತರಬೇತಿ ಪಡೆದು ಸಂಪೂರ್ಣ ವೃತ್ತಿಪರ ತಂಡದಂತೆ ತಿರುಗಾಟ ಮಾಡಲು ಆಸಕ್ತಿ ಇರುವ ರಂಗ ಕಲಾವಿದರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಒಂದು ವರ್ಷದ  ರಂಗ ಶಿಕ್ಷಣ ಪದವಿ  ಅಥವಾ ಕನಿಷ್ಠ ನಾಲ್ಕೈದು ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರಬೇಕು. ವಯೋಮಿತಿ 20 ರಿಂದ 35 ವರ್ಷದೊಳಗಿನವರು ಜೂನ್ 17 ರೊಳಗೆ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡುಬಿದಿರೆ ದ.ಕ. ಈ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಲು ಕೋರಲಾಗಿದೆ.

ಸಂದರ್ಶನದಲ್ಲಿ ಆಯ್ಕೆ ಆದವರಿಗೆ ಉಚಿತ ಊಟ, ವಸತಿ ಹಾಗೂ ಪ್ರತಿಭೆಗೆ ಅನುಸಾರ ತಿಂಗಳ ವೇತನ ನೀಡಲಾಗುವುದು. ಮಾಹಿತಿಗಾಗಿ ಡಾ| ಜೀವನ್ ರಾಂ ಸುಳ್ಯ, ನಿರ್ದೇಶಕರು, ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಇವರನ್ನು 9448215946 ಸಂಖ್ಯೆಯಲ್ಲಿ ಸಂಪರ್ಕಿಸಬಹುದೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top