ಜೂ.14: ಬೆಂಗಳೂರು ಹೆರಿಟೇಜ್ ಹಬ್ಬ, ಅದ್ದೂರಿ ಸಿದ್ದತೆ

Upayuktha
0


ಬೆಂಗಳೂರು: ಇದೇ ಭಾನುವಾರ ಜೂನ್ 14 ರಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ 'ಬೆಂಗಳೂರು ಹೆರಿಟೇಜ್ ಹಬ್ಬ' ನಡೆಯಲಿದೆ.


ಬೆಳಿಗ್ಗೆ ಐದು ಗಂಟೆಗೆ ಶಂಖನಾದ, ಗಂಗಾರತಿ, ಮ್ಯಾರಥಾನ್, ಜುಂಬಾ, ಯೋಗ ಪ್ರದರ್ಶನಗಳಿಂದ ಆರಂಭವಾಗುವ 'ಬೆಂಗಳೂರು ಹೆರಿಟೇಜ್ ಹಬ್ಬ'ಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಚಾಲನೆ ನೀಡಲಿದ್ದಾರೆ.


ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಯದುವೀರ್, ಚಲನಚಿತ್ರ ನಟ ಸಿಹಿ ಕಹಿ ಚಂದ್ರು, ಬೆಂಗಳೂರು ನಗರ ಗಣ್ಯರ ರಕ್ಷಣಾ ವಿಭಾಗದ ಉಪ ಪೊಲೀಸ್ ಆಯುಕ್ತ ಮಂಜುನಾಥ್ ಬಾಬು, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಗರುಡ ಪ್ರತಿಷ್ಠಾನದ ಮೇದಿನಿ ಗರುಡಾಚಾರ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ಡಾ.ಸಿ ಎ ಕಿಶೋರ್, ಮಾಜಿ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ಪ್ರತಿಷ್ಠಿತ ಬಿ ಎನ್ ಎಂ ಐ ಟಿ ಶಿಕ್ಷಣ ಸಂಸ್ಥೆ ಛೇರ್ಮನ್ ನಾರಾಯಣ ರಾವ್ ಮಾನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ ಎನ್ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ವಿಕಸನ ಪ್ರತಿಷ್ಠಾನದ ಸಹಯೋಗದಲ್ಲಿ ಈ ಬೆಂಗಳೂರು ಹೆರಿಟೇಜ್ ಹಬ್ಬ ಕಾರ್ಯಕ್ರಮ ಆಯೋಜಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top