ಹವ್ಯಕ ಸಭಾ(ರಿ) ವತಿಯಿಂದ 12ನೇ ವಿಶ್ವ ಯೋಗ ದಿನಾಚರಣೆ

Upayuktha
0

 


ಮಂಗಳೂರು: ಇಂದು ಮಂಗಳೂರು ಹವ್ಯಕ ಸಭಾ(ರಿ) ವತಿಯಿಂದ ನಂತೂರಿನ ಶಂಕರಶ್ರೀ ಸಭಾಭವನದಲ್ಲಿ ಬೆಳಿಗ್ಗೆ 7:00 ರಿಂದ 8:00 ಗಂಟೆಯವರೆಗೆ 12ನೇ ವಿಶ್ವ ಯೋಗ ದಿನಾಚರಣೆ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ 18 ಮಂದಿ ಸದಸ್ಯರು ಭಾಗವಹಿಸಿದರು.


ಯೋಗಾಭ್ಯಾಸವನ್ನು ಯೋಗ ಗುರುಗಳಾದ ಸುಬ್ರಮಣ್ಯ ಭಟ್ ಕಾಟಿಪಳ್ಳ ಹಾಗೂ ವಿದ್ಯಾ ಕಾವೇರಿ ಅವರು ನಡೆಸಿಕೊಟ್ಟರು. ಯೋಗ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ, ಆಗಮಿಸಿದ್ದ ಸದಸ್ಯರನ್ನು ಸಭಾದ ಮಾಜಿ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರು ಸ್ವಾಗತಿಸಿದರು.


ಯೋಗಾಭ್ಯಾಸದ ಬಳಿಕ ಯೋಗ ಗುರುಗಳಾದ ಸುಬ್ರಮಣ್ಯ ಭಟ್ ಕಾಟಿಪಳ್ಳ ಹಾಗೂ ವಿದ್ಯಾ ಕಾವೇರಿ ಅವರನ್ನು ಡಾ. ರಾಜೇಂದ್ರ ಪ್ರಸಾದ್ ಹಾಗೂ ಸಭಾದ ಉಪಾಧ್ಯಕ್ಷೆ ಅನುಪಮಾ ಎಸ್. ಅವರು ಶಾಲು ಹೊದಿಸಿ ಗೌರವಿಸಿದರು.


ಕಾರ್ಯಕ್ರಮದ ಅಂತ್ಯದಲ್ಲಿ ಇತ್ತೀಚೆಗೆ ನಿಧನರಾದ ಸಾವಿತ್ರಿ ಮುಳಿಯ ಅವರ ಕುರಿತು ಸಭಾದ ಮಾಜಿ ಅಧ್ಯಕ್ಷೆಯಾಗಿದ್ದ ವಸಂತಿ ಎಸ್. ಭಟ್ ಮಾತನಾಡಿದರು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಸಭಾದ ವತಿಯಿಂದ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಯೋಗ ಪ್ರಾತ್ಯಕ್ಷಿಕೆ ಹಾಗೂ ಯೋಗಾಭ್ಯಾಸವನ್ನು ನಡೆಸಿಕೊಟ್ಟ ಯೋಗ ಗುರುಗಳಿಗೂ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೂ ಸಭಾದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top