ಕೊಂಚಾಡಿ: ನಿಷ್ಕ ಲೇಔಟ್‌ನಲ್ಲಿ ವಿಶ್ವ ಯೋಗ ದಿನಾಚರಣೆ

Upayuktha
0


ಮಂಗಳೂರು: ಮಂಗಳೂರಿನ ಕೊಂಚಾಡಿಯಲ್ಲಿರುವ ನಿಷ್ಕ ಲೇಔಟ್ ನಲ್ಲಿ ವಿಶ್ವ ಯೋಗ ದಿನಾಚರಣೆಯ ದಿನವಾದ ಇಂದು (ಭಾನುವಾರ) ಪ್ರಾತಃ ಕಾಲದಲ್ಲಿ ದೀಪ ಬೆಳಗಿ ಸಮೂಹ ಯೋಗಾಭ್ಯಾಸಕ್ಕೆ ಚಾಲನೆ ನೀಡಲಾಯಿತು.


ಯೋಗ ಶಿಕ್ಷಕರಾದ ಶ್ರೀ ಯೋಗೀಶ್ ಜೆ. ಅವರು ದೀಪ ಪ್ರಜ್ವಲನೆ ಮಾಡಿ ಬಡಾವಣೆಯ ನಿವಾಸಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಯೋಗ ಮತ್ತು ಪ್ರಾಣಾಯಾಮಗಳನ್ನು ಪರಿಚಯಿಸಿದರು. ಮಾಡಿದ ಪ್ರತಿಯೊಂದು ಆಸನದಿಂದಲೂ ಶರೀರದ ವಿಭಿನ್ನ ಅಂಗಾಗಗಳಿಗೆ ಯಾವ ಯಾವ ರೀತಿಯಲ್ಲಿ ಪ್ರಯೋಜನವಾಗುವುದೆಂದು ವಿವರಿಸಿ ಹೇಳಿದರು.


ನುರಿತ ಯೋಗ ಪಟುವಾದ ಇವರು spyss ಉಚಿತ ಯೋಗ ಶಿಕ್ಷಣ ಸಮಿತಿಯಲ್ಲಿ ಕಳೆದ 26 ವರ್ಷಗಳಿಂದ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 



ಇಂದಿನ ಈ ವಿಶ್ವ ಯೋಗ ದಿನಾಚರಣೆಯಲ್ಲಿ ನಿಷ್ಕ ಬಡಾವಣೆಯ ಹಿರಿಯ ನಿವಾಸಿ, 87 ವರ್ಷ ವಯಸ್ಸಿನ ಶ್ರೀ ತಿರುಮಲೇಶ್ವರ ಭಟ್ ಸಕ್ರಿಯವಾಗಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು. ಬಡಾವಣೆಯ ಚಿಲ್ಡ್ರನ್ ಕೌನ್ಸಿಲ್ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಕು. ಶ್ರೀವತ್ಸ ಜೋಶಿ ಹಾಗೂ ಇತರ ಮಕ್ಕಳು, ಅತ್ಯಂತ ಕಿರಿಯ  ವಯಸ್ಸಿನ 8 ವರ್ಷದ ಸಂವಿದ್ ಭಟ್ ಸಹಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿಯನ್ನು ಹಂಚಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top