ಯಾವುದೇ ದೊಡ್ಡ ಸಾಧನೆಯ ಆರಂಭವು ಸಣ್ಣ ಒಂದು ಹೆಜ್ಜೆಯಿಂದಲೇ ಆಗುತ್ತದೆ. ಮೊದಲ ಹೆಜ್ಜೆಯು ಹೊಸದನ್ನು ಆರಂಭಿಸುವ ಧ್ಯರ್ಯ, ನಿರ್ದಾರ, ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಜೀವನದಲ್ಲಿ ನಾವು ಎದುರಿಸುವಂತಹ ಪ್ರತಿಯೊಂದು ಗುರಿಗಳನ್ನು ಸಾಧಿಸಲು ಹೆಜ್ಜೆ ಬಹಳ ಮುಖ್ಯ.
ಪ್ರತಿಯೊಬ್ಬರು ಹೊಸ ಕೆಲಸವನ್ನು ಆರಂಭಿಸಲು ಹೆದರುವ ಸಂದರ್ಭದಲ್ಲಿ ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ. ಆದರೆ ನಮ್ಮೆಲ್ಲ ಗುರಿಗಳಿಗೂ, ಸಾಧನೆಗಳಿಗೂ, ಪ್ರಯತ್ನವಿಲ್ಲದೆ ಯಶಸ್ಸಾಗಲೂ ಸಾಧ್ಯವಿಲ್ಲ. ಮೊದಲ ಹೆಜ್ಜೆ ಇಡುವುದೇ ನಮ್ಮ ಕನಸುಗಳನ್ನು ನನಸಾಗಿಸಲು ಸದಾ ನಮಗೆ ದಾರಿ ತೆರೆದಿರುತ್ತದೆ.
ಆದರೆ ಈಗ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಅಂಕಗಳನ್ನು ಪಡೆಯಲು ಪ್ರತಿದಿನ ಓದುವ, ಬರೆಯುವ ಹವ್ಯಾಸವನ್ನು ಮಾಡಿಕೊಂಡರೆ ಅದೇ ಅವರಿಗೂ ಮೊದಲ ಹೆಜ್ಜೆ.
ನಮ್ಮ ಮೊದಲ ಹೆಜ್ಜೆ ಚಿಕ್ಕದಾಗಿರಬಹುದು. ಆದರೆ ಅದು ನಮಗೆ ದೊಡ್ಡದಾಗಿ ಪ್ರತಿಫಲವನ್ನು ಕೊಡುತ್ತದೆ. ಅದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವುದೇ ಒಂದು ಕೆಲಸವನ್ನು ಪ್ರಾರಂಭಿಸುವಾಗ ನಾವು ಭಯವನ್ನು ಪಡದೆ ಧೖರ್ಯದಿಂದ ಮೊದಲ ಹೆಜ್ಜೆ ಇಡುವುದು ಯಶಸ್ಸಿನ ಮೊದಲ ಮೆಟ್ಟಿಲಾಗಿದೆ.
-ಶಿವಾನಿ ಕೊಡಂಗಾಯಿ
ಪ್ರಥಮ ಬಿ. ಎ ಪತ್ರೀಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



