ಒತ್ತಡ ನಿವಾರಿಸುವ ಸ್ಮೈಲ್ ಬಾಲ್‌ಗಳು

Upayuktha
0


ಸಂಪೂರ್ಣವಾಗಿ ಹಳದಿ ಬಣ್ಣದಿಂದ ಕೂಡಿದ್ದು ಸ್ಮೈಲ್ ಎಮೊಜಿಯಂತೆ ಕಾಣುವ ಸ್ಮೈಲಿ ಬಾಲ್ ಗಳು ಕೇವಲ ಆಟಿಕೆಗಳಲ್ಲ. ಎಲ್ಲರ ಮನ ಗೆದ್ದಿರುವ  ಇವು ಒತ್ತಡ ನಿವಾರಕ ಎಂದೆ ಜನಪ್ರಿಯವಾಗಿವೆ. ಮೃದುವಾದ ಸ್ಪಾಂಜ್ ನಿಂದ ತಯಾರಿಸಲಾಗುವ ಇವುಗಳು ಸ್ಮೈಲ್ ಬಾಲ್, ಎಮೋಜಿ ಬಾಲ್ ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುತ್ತವೆ. 

       

ತನ್ನ ಮೇಲೆ ಒತ್ತಡ ಹೇರಲು ಬಂದವರ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತ ಗೊಳಿಸುವುದರ ಜೊತೆಗೆ ತನ್ನತನವನ್ನು ಬಿಟ್ಟುಕೊಡದೆ ಇರುವ ಸ್ವಭಾವ ಇವುಗಳ ಶ್ರೇಷ್ಠ ಗುಣ. ತನ್ನ ಮೃದು ಸ್ವಭಾವದಿಂದಲೇ ಇತರರ ಶಕ್ತಿಯನ್ನು ಹೆಚ್ಚಿಸುವ ಸುಂದರ ಸೃಷ್ಟಿ ಈ ಎಮೋಜಿ ಬಾಲ್‌ಗಳು.  


ಈ ಚೆಂಡುಗಳು ಮಕ್ಕಳ ಕೈಯಲ್ಲಿ ಆಟಿಕೆಗಳಾಗಿ ನಲಿದಾಡುತ್ತವೆ. ಆದರೆ ವಯಸ್ಕರ ಪಾಲಿಗೆ ಅತ್ಯುತ್ತಮ ಸ್ಟ್ರೆಸ್ ರಿಲೀಫ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಮನಸ್ಸು ಗೊಂದಲಕ್ಕೆ ಒಳಗಾದಾಗ ಇವುಗಳನ್ನು ಕೈಯಲ್ಲಿ ಹಿಡಿದುಕೊಂಡು ಹಿಸುಕುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ. ಇಷ್ಟೇ ಅಲ್ಲದೆ ಓದುವಾಗ ಅಥವಾ ಕೆಲಸ ಮಾಡುವಾಗ ಇವುಗಳನ್ನು ಹಿಡಿದುಕೊಂಡು ಪ್ರೆಸ್ ಮಾಡುತ್ತಿದ್ದರೆ ಏಕಾಗ್ರತೆ ಹೆಚ್ಚಾಗಿ ಕೆಲಸದ ಕಡೆಗೆ ಗಮನವು ಹರಿಯುತ್ತದೆ. ಇನ್ನು ರಕ್ತದಾನ ಶಿಬಿರಗಳಲ್ಲಿ, ಆಸ್ಪತ್ರೆಗಳಲ್ಲಿ ರಕ್ತದಾನಿಗಳಿಗೆ ಇವುಗಳನ್ನು ಕೈಯಲ್ಲಿ ಪ್ರೆಸ್ ಮಾಡಲು ಎಂದು ಕೊಡುತ್ತಾರೆ. ಇದರಿಂದಾಗಿ ರಕ್ತವು ಸರಾಗವಾಗಿ ಮತ್ತು ವೇಗವಾಗಿ ಹರಿದು ಬ್ಲಡ್ ಬ್ಯಾಗ್ ಗೆ ತುಂಬುತ್ತದೆ. ಅಲ್ಲದೇ ಸೂಜಿ ಚುಚ್ಚಿದಾಗ ಆಗುವ ನೋವು ಮತ್ತು ಆತಂಕವನ್ನು ಮರೆಸಿ ಗಮನವನ್ನು ಬೇರೆ ಕಡೆ ಕೇಂದ್ರೀಕರಿಸಲು ಇವು ಸಹಕಾರಿಯಾಗಿವೆ. 


ಇವು ಕೈಗಳಿಗೆ ಉತ್ತಮವಾದ ವ್ಯಾಯಾಮವನ್ನು ನೀಡುತ್ತವೆ. ನಮ್ಮ ಅಂಗೈಯಲ್ಲಿಯೇ ದೇಹದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ನರಗಳ ತುದಿಗಳು ಇರುವುದರಿಂದ ಇವುಗಳ ಬಳಕೆ ದೇಹಕ್ಕೆ ಉಲ್ಲಾಸ ಮತ್ತು ಹೊಸ ಹುರುಪನ್ನು ತಂದುಕೊಡುತ್ತವೆ. ಇವು ಕೈಗಳ ಬಲವರ್ಧನೆಯ ಜೊತೆಗೆ ಬುದ್ಧಿ ಮತ್ತು ಮನಸ್ಸನ್ನು ಬಲಗೊಳಿಸುತ್ತವೆ.

       

- ಪ್ರಿಯಾ ಶ್ರೀ ವಿಧಿ 

ದ್ವಿತೀಯ ಪತ್ರಿಕೋದ್ಯಮ ವಿಭಾಗ 

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top