ಅರ್ಹರನ್ನು ಅಭಿನಂದಿಸಿದಾಗ ಬದುಕು ಸಾರ್ಥಕ: ರೇವಣ್ಕರ್

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮತ್ತು ಇತರ ಅನೇಕ ಸಂಘಟನೆಗಳ ಮೂಲಕ ಕನ್ನಡ ನಾಡು ನುಡಿಗೆ ಜೀವ ತೇಯುತ್ತಿರುವ ಶ್ರೀಗಂಧ ಸದೃಶ ವ್ಯಕ್ತಿತ್ವಗಳು- ಆದರ್ಶ ದಂಪತಿ ಸಾವಿತ್ರಿ ರಾವ್, ಬಿ. ಶ್ರೀನಿವಾಸ ರಾವ್ ಅವರನ್ನು ಗೌರವಿಸಿರುವುದು ಜೀವನದ ಸಾರ್ಥಕ ಕ್ಷಣ ಎಂದು ಕ ಸಾ ಪ ಮಂಗಳೂರು ತಾ. ಘಟಕದ ಅಧ್ಯಕ್ಷ ಡಾ| ಮಂಜುನಾಥ ರೇವಣ್ಕರ್ ಹೇಳಿದರು. ತಾಲೂಕು ಘಟಕವು ಹಿರಿಯ ಸಂಘಟಕರ ಮನೆ ಭೇಟಿ ಕಾರ್ಯಕ್ರಮದಡಿಯಲ್ಲಿ ದಂಪತಿಯನ್ನು ಭೇಟಿಯಾಗಿ ಸಂಮಾನಿಸಿತು. ಇಂತಹ ಸಾಧಕರನ್ನು ಮಕ್ಕಳಿಗೆ ಪರಿಚಯಿಸಿ, ಪ್ರೇರಣೆ ನೀಡಬೇಕಾಗಿದೆ ಎಂದು ತಿಳಿಸಿದರು.


ಗೌ. ಕಾರ್ಯದರ್ಶಿ ಡಾ. ಮುರಲೀಮೋಹನ್ ಚೂಂತಾರು ಮಾತನಾಡಿ, ಸಾವಿತ್ರಿ ರಾವ್ ಹಾಗೂ ಶ್ರೀನಿವಾಸ ರಾವ್ ಮಕ್ಕಳ ಸಾಹಿತ್ಯ ಸಂಗಮವನ್ನು  ಕಟ್ಟಿ ಬೆಳೆಸಿದ ಪರಿಯನ್ನು ಶ್ಲಾಘಿಸಿ, ಅವರ ಸಂಪನ್ಮೂಲ ಮತ್ತು ಸಾಧನೆಯ ಹಾದಿ ಯಾವತ್ತೂ ಮಾದರಿ ಎನ್ನುತ್ತಾ ಅಭಿನಂದನೆಯ ಮಾತುಗಳನ್ನಾಡಿದರು. ಜಿಲ್ಲಾ ಸಮಿತಿಯ ಅರುಣಾ ನಾಗರಾಜ್ ಸನ್ಮಾನಿತರನ್ನು ಪರಿಚಯಿಸಿದರು.


ಬಿ. ಶ್ರೀನಿವಾಸ ರಾವ್ ಸನ್ಮಾನಕ್ಕೆ ಉತ್ತರಿಸುತ್ತಾ ಇಂದಿನ ಕನ್ನಡ ಶಾಲೆಗಳ ದುಃಸ್ಥಿತಿಗೆ ಮರುಗಿ, ಸರಕಾರ ಕೂಡಲೇ ಒಂದು ತರಗತಿಗೆ ಒಬ್ಬ ಶಿಕ್ಷಕರನ್ನು ನೇಮಕ ಮಾಡಲೇಬೇಕು ಎಂದು ಆಗ್ರಹಿಸಿದರು. ಸಾವಿತ್ರಿ ರಾವ್ ತಾವು ಸಾಗಿ ಬಂದ ಹಾದಿಯನ್ನು ನೆನಪಿಸುತ್ತಾ ಎಲ್ಲರ ಪ್ರೀತಿಯೇ ತಮ್ಮ ಸಂಪತ್ತು ಎಂದು ಹೇಳಿದರು.


ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು. ಸಮಿತಿಯ ರವೀಂದ್ರನಾಥ್ ಕೆ.ಪಿ., ಅನಂತ ಪದ್ಮನಾಭ ರಾವ್ ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top