ಮಂಜೇಶ್ವರದಲ್ಲಿ ಸಂಶೋಧನ ಕಮ್ಮಟ: ಆಕರಗಳ ವಿಶ್ಲೇಷಣೆಯ ಮೂಲಕ ಅರಿವಿನ ದಾರಿ

Upayuktha
0

  


ಮಂಜೇಶ್ವರ: ಆಕರಗಳ ವಿಶ್ಲೇಷಣೆಯ ಮೂಲಕ ಅರಿವಿನ ದಾರಿಯನ್ನು ಕಂಡುಕೊಳ್ಳುವುದು ಸಂಶೋಧನೆಯಲ್ಲಿ ಅಗತ್ಯಸಮಾಜದಲ್ಲಿ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ಗುರುತಿಸಿ ಸಮಕಾಲೀನ ಸಮಾಜಕ್ಕೆ ಉಪಯೋಗವಾಗುವಂತೆ ಒದಗಿಸ ಬೇಕಾದುದು ಸಂಶೋಧಕರ ಹೊಣೆಗಾರಿಕೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಪ್ರಾಧ್ಯಾಪಕ ಡಾ.ಮೋಹನ ಕೃಷ್ಣ ರೈ ಹೇಳಿದರು.

ಅವರು ಕಾಸರಗೋಡು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಮಹಾವಿದ್ಯಾಲಯದಲ್ಲಿ  ಕನ್ನಡ ಸಂಶೋಧನಾ ಕೇಂದ್ರ ಕಾಸರಗೋಡು ಇವರು ಹಮ್ಮಿಕೊಂಡಿದ್ದ ಸಂಶೋಧನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

'ವಸ್ತುನಿಷ್ಠವಾಗಿ ಪುನರಾವಲೋಕನ ಮಾಡುತ್ತಲೇ ಆಕರಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಬಹುದು. ಯಾವುದೇ ಪೂರ್ವಾಗ್ರಹಗಳಿಲ್ಲದೆ ಪ್ರಾಮಾಣಿಕವಾಗಿ ವರ್ತಿಸುವುದು ಸಂಶೋಧಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದೂ ಅವರು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಮಾತನಾಡುತ್ತ ಹಿರಿಯ ತಲೆಮಾರುಗಳೊಡನೆ ನಾಶವಾಗುವ ಸ್ಥಳೀಯ  ಮೌಖಿಕ ಆಕರಗಳನ್ನು ಕ್ಷೇತ್ರಕಾರ್ಯದ ಮೂಲಕ ಇನ್ನಾದರೂ ಸಂಗ್ರಹಿಸಿ ಸಂರಕ್ಷಿಸಬೇಕು.ಅವು ನಮ್ಮ ಹಿರಿಯರ ಬದುಕಿನ ವಿಧಾನ ಹಾಗೂ ಚಿಂತನೆಗಳ ಅಗಾಧತೆಗಳನ್ನು ತಿಳಿದುಕೊಳ್ಳಲು ನೆರವಾಗಬಹುದು ಎಂದು ಹೇಳಿದರು.



ಕೇಂದ್ರದ ನಿರ್ದೇಶಕ ಡಾ.ಮೋಹನ ಕುಂಟಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾಸರಗೋಡಿನ ಆಕರಗಳನ್ನು ಬಳಸಿ ಸಂಶೋಧನೆ ಮಾಡುವವರಿಗೆ ಉತ್ತೇಜನ ನೀಡುವ ಕೇಂದ್ರದ ಕಾರ್ಯಯೋಜನೆಗಳನ್ನು   ತಿಳಿಯಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಮಹಮ್ಮದಾಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಶಿವಶಂಕರ್ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ರೇಣುಕಾ ಸುಧೀರ್ ಪ್ರಾರ್ಥಿಸಿಕಾರ್ಯಕ್ರಮ ನಿರೂಪಿಸಿದರು. ವಿವಿಧ ಪ್ರದೇಶಗಳಿಂದ ಬಂದ ಹತ್ತು ಜನ ಸಂಶೋಧನಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಮ್ಮಟವನ್ನು ಅರ್ಥಪೂರ್ಣಗೊಳಿಸಿದರು.

ಡಾ. ಮೋಹನ ಕೃಷ್ಣ ರೈ, ಡಾ. ಮೋಹನ ಕುಂಟಾರ್‌  ಹಾಗೂ ಡಾ. ರತ್ನಾಕರ ಮಲ್ಲಮೂಲೆ ಸಂಶೋಧನೆಯ ವಿಧಾನ ಹಾಗೂ ಸಂಶೋಧನೆಯ ಇಂದಿನ ವಲಯಗಳ ಬಗ್ಗೆ ಮಾತನಾಡಿದರು. ಅನಂತರ ಮುಕ್ತ ಸಂವಾದ ನಡೆಯಿತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 


Post a Comment

0 Comments
Post a Comment (0)
To Top