ಮುಂಬೈ:
ಪ್ರಸ್ತುತ ವಿಶ್ವದ ಮೇಲೆ ಮೂರನೇ ಮಹಾಯುದ್ಧದ
ಕಪ್ಪು ಛಾಯೆ ಆವರಿಸಿವೆ. ಇಂತಹ
ಸಮಯದಲ್ಲಿ ಕೇವಲ ರಾಜಕೀಯ ಅಥವಾ
ಬೌದ್ಧಿಕ ಮಟ್ಟದ ಪ್ರಯತ್ನಗಳು ಸಾಕಾಗುವುದಿಲ್ಲ, ಬದಲಾಗಿ ರಾಷ್ಟ್ರಕ್ಕೆ ಆಧ್ಯಾತ್ಮಿಕ ಆಧಾರದ ಅಗತ್ಯವೂ ಇದೆ. ಇದೇ ಉದಾತ್ತ
ಉದ್ದೇಶದಿಂದ ಭಾರತಕ್ಕೆ ಅಭೇದ್ಯ ಆಧ್ಯಾತ್ಮಿಕ ಸುರಕ್ಷಾ ಕವಚ ಲಭಿಸಲಿ ಮತ್ತು
ದೇಶದ ಸರ್ವಾಂಗೀಣ ಪ್ರಗತಿಯಾಗಿ ಮತ್ತೊಮ್ಮೆ ‘ರಾಮರಾಜ್ಯ’ ಸ್ಥಾಪನೆಯಾಗಲಿ ಎಂಬ ಸಂಕಲ್ಪದಿಂದ ಸನಾತನ
ಸಂಸ್ಥೆಯ ವತಿಯಿಂದ ಮುಂಬೈನಲ್ಲಿ ‘ಶ್ರೀ ರಾಜಮಾತಂಗಿ ಮಹಾಯಾಗ’ವನ್ನು ಆಯೋಜಿಸಲಾಗಿದೆ.
ಭಾನುವಾರ,
17 ಮೇ 2026 ರಂದು ಪ್ರಭಾದೇವಿಯ ಶ್ರೀ
ಸಿದ್ಧಿವಿನಾಯಕ ದೇವಸ್ಥಾನದ ಹಿಂಭಾಗದಲ್ಲಿರುವ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ 3.30 ರಿಂದ ಸಂಜೆ 7.30 ರವರೆಗೆ
ಈ ಯಜ್ಞ ಸಮಾರಂಭವು ಅತ್ಯಂತ
ಮಂಗಳಕರ ವಾತಾವರಣದಲ್ಲಿ ನಡೆಯಲಿದೆ. ಈ ಮಾಹಿತಿಯನ್ನು ಸನಾತನ
ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಅವರು
ಮುಂಬೈ ಮರಾಠಿ ಪತ್ರಕರ್ತ ಸಂಘದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ
ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ, ಪುರೋಹಿತ ಮತ್ತು ಜ್ಯೋತಿರ್ವಿದ ಶ್ರೀ. ಶ್ರೇಯಸ್ ಪಿಸೋಳ್ಕರ್ ಹಾಗೂ ಮಹಾರಾಷ್ಟ್ರ ಮಂದಿರ
ಮಹಾಸಂಘದ ನವ ಮುಂಬೈ ಸಂಯೋಜಕ
ಶ್ರೀ. ಕೈಲಾಸ್ ಪಾಟೀಲ್ ಉಪಸ್ಥಿತರಿದ್ದರು. ಈ ಮಹಾಯಾಗವು ಕೇವಲ
ಧಾರ್ಮಿಕ ಆಚರಣೆಯಲ್ಲ, ಬದಲಾಗಿ ರಾಷ್ಟ್ರ ರಕ್ಷಣೆಯ ಒಂದು ಆಧ್ಯಾತ್ಮಿಕ ಅಭಿಯಾನವಾಗಿದೆ
ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲಾಯಿತು.
ಈ ಯಜ್ಞದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸುತ್ತಾ ಶ್ರೀ. ಅಭಯ ವರ್ತಕ್ ಅವರು,
"ಆದಿಶಕ್ತಿ ದೇವಿ ಸತಿಯ ಕ್ರೋಧದಿಂದ
ಪ್ರಕಟವಾದ ‘ದಶಮಹಾವಿದ್ಯೆ’ಗಳಲ್ಲಿ ಮಾತಂಗಿ ದೇವಿಯ ಸ್ಥಾನವು ಅತ್ಯಂತ ವಿಶಿಷ್ಟವಾಗಿದೆ. ದೇವಿ ಮಾತಂಗಿಯನ್ನು ಆದಿಶಕ್ತಿಯ
‘ಪ್ರಧಾನ ಮಂತ್ರಿ’ ಅಂದರೆ ಪ್ರಮುಖ ಸಲಹೆಗಾರ್ತಿ ಎಂದು ಪರಿಗಣಿಸಲಾಗುತ್ತದೆ. ಶತ್ರುಗಳ ಮೇಲೆ
ವಿಜಯ ಸಾಧಿಸಲು ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ನಿಯಂತ್ರಿಸಲು ಈ ದೇವಿಯ ಉಪಾಸನೆಯು
ಅತ್ಯಂತ ಫಲದಾಯಕವಾಗಿದೆ. ಐತಿಹಾಸಿಕ ಸಂದರ್ಭವನ್ನು ನೀಡುತ್ತಾ, ತ್ರೇತಾಯುಗದಲ್ಲಿ ಪ್ರಭು ಶ್ರೀರಾಮರ ಅವತಾರ ಕಾಲದಲ್ಲಿಯೂ ರಾಜಮಾತಂಗಿ ದೇವಿಯ ತತ್ವವು ಕಾರ್ಯನಿರ್ವಹಿಸುತ್ತಿತ್ತು, ಇದರಿಂದಾಗಿ ಆದರ್ಶ ರಾಮರಾಜ್ಯದ ಸ್ಥಾಪನೆ ಸಾಧ್ಯವಾಯಿತು. ಪ್ರಸ್ತುತ ಕಾಲದಲ್ಲೂ ಇಂತಹ ದೈವೀ ಶಕ್ತಿಯ
ಆಶೀರ್ವಾದದಿಂದ ಭಾರತದ ರಕ್ಷಣೆಯಾಗಲಿ ಎಂಬುದೇ ಈ ಯಜ್ಞದ ಮುಖ್ಯ
ಉದ್ದೇಶವಾಗಿದೆ," ಎಂದು ಹೇಳಿದರು.
ಈ ಮಹಾಯಾಗದ ಅತಿದೊಡ್ಡ ಆಕರ್ಷಣೆಯೆಂದರೆ 1 ಸಾವಿರ ವರ್ಷಗಳ ಹಿಂದೆ ಆಕ್ರಮಣಕಾರಿ ಮಹಮೂದ್ ಗಜನವಿಯಿಂದ ಹಾನಿಗೊಳಗಾದ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ದರ್ಶನ! ಇತಿಹಾಸದ ಸಾಕ್ಷಿಯಾದ ಈ ಪವಿತ್ರ ಅವಶೇಷಗಳನ್ನು
ಇಲ್ಲಿ ದರ್ಶನಕ್ಕಾಗಿ ಇಡಲಾಗುವುದು, ಇದು ಭಕ್ತರಿಗೆ ಅತ್ಯಂತ
ಅಪರೂಪದ ಅವಕಾಶವಾಗಿರುತ್ತದೆ ಎಂದು ಶ್ರೀ. ಚೇತನ್
ರಾಜಹಂಸ ಅವರು ತಿಳಿಸಿದರು. ಯಜ್ಞವು
ಮಹಾಸಂಕಲ್ಪ, ಶ್ರೀ ಗಣೇಶ ಆವಾಹನೆ
ಮತ್ತು ಪುಣ್ಯಾಹವಾಚನದೊಂದಿಗೆ ಪ್ರಾರಂಭವಾಗಲಿದೆ ಹಾಗೂ ಶ್ರೀ ರಾಜಮಾತಂಗಿ
ದೇವಿಯ ಮೂಲ ಮಂತ್ರಗಳ ಜಯಘೋಷದ
ನಡುವೆ ಆಹುತಿಗಳನ್ನು ಅರ್ಪಿಸಲಾಗುವುದು. ಯಜ್ಞದ ಪೌರೋಹಿತ್ಯವನ್ನು ತಮಿಳುನಾಡಿನ ಈರೋಡ್ನ ಶಿವಾಗಮ ವಿದ್ಯಾನಿಧಿ
ಆಗಮಾಚಾರ್ಯ ಶ್ರೀ. ಅರುಣ್ಕುಮಾರ್ ಗುರುಮೂರ್ತಿ ಅವರು ನಿರ್ವಹಿಸಲಿದ್ದಾರೆ ಮತ್ತು
ಶಿವಾಚಾರ್ಯ ಶ್ರೀ ಗುರುಮೂರ್ತಿ ಅವರು
ಯಜ್ಞದ ಮುಖ್ಯ ಆಚಾರ್ಯರಾಗಿರುತ್ತಾರೆ ಎಂದು ಪುರೋಹಿತ ಮತ್ತು
ಜ್ಯೋತಿರ್ವಿದ ಶ್ರೀ. ಶ್ರೇಯಸ್ ಪಿಸೋಳ್ಕರ್ ತಿಳಿಸಿದರು. ಈ ಯಜ್ಞದಲ್ಲಿ ಮುಂಬೈ,
ಠಾಣೆ, ರಾಯಗಡ ಮತ್ತು ಪಾಲ್ಘರ್ ಜಿಲ್ಲೆಗಳ ಅನೇಕ ದೇವಾಲಯಗಳ ವಿಶ್ವಸ್ತರು
ಮತ್ತು ಅರ್ಚಕರು ಭಾಗವಹಿಸಲಿದ್ದಾರೆ ಎಂದು ಮಹಾರಾಷ್ಟ್ರ ಮಂದಿರ
ಮಹಾಸಂಘದ ನವಿ ಮುಂಬೈ ಸಂಯೋಜಕ
ಶ್ರೀ. ಕೈಲಾಸ್ ಪಾಟೀಲ್ ಮಾಹಿತಿ ನೀಡಿದರು.
ಸನಾತನ
ಸಂಸ್ಥೆಯು ಇದುವರೆಗೆ 750 ಕ್ಕೂ ಹೆಚ್ಚು ಯಜ್ಞ-ಅನುಷ್ಠಾನಗಳನ್ನು ಪೂರೈಸಿದೆ. ಈ ಯಜ್ಞ ಸಮಾರಂಭದಲ್ಲಿ
ವಿವಿಧ ಕ್ಷೇತ್ರಗಳ ಗಣ್ಯರು, ಸಂತ-ಮಹಂತರು, ರಾಜ್ಯ
ಸರ್ಕಾರದ ಸಚಿವರು, ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ವಿಚಾರವಂತರು, ನ್ಯಾಯವಾದಿಗಳು ಹಾಗೂ ಉದ್ಯಮಿಗಳು ಸೇರಿದಂತೆ
ಸುಮಾರು 5 ಸಾವಿರ ಭಕ್ತರ ಉಪಸ್ಥಿತಿಯನ್ನು ನಿರೀಕ್ಷಿಸಲಾಗಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಅವರು ಯಾವ ಮುಂಬಾಪುರಿಯಿಂದ ಧರ್ಮಕಾರ್ಯವನ್ನು
ಪ್ರಾರಂಭ ಮಾಡಿದರೋ, ಅದೇ ನಗರಿಯಲ್ಲಿ ಆಯೋಜಿಸಲಾದ
ಈ ಮಹಾಯಾಗವು ರಾಷ್ಟ್ರ ನಿರ್ಮಾಣದ ದಿಕ್ಕಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ
ಎಂದು ತಿಳಿಸಿದರು. ಎಲ್ಲಾ ಧರ್ಮಪ್ರೇಮಿ ಹಿಂದೂಗಳು ಕುಟುಂಬ ಸಮೇತ ಈ ಸಮಾರಂಭದಲ್ಲಿ
ಉಪಸ್ಥಿತರಿರಬೇಕೆಂದು ಶ್ರೀ. ಅಭಯ ವರ್ತಕ್ ಅವರು
ಕರೆ ನೀಡಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


