RYMECಯಲ್ಲಿ “ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ಎ-ಬಿ-ಸಿ ಚೌಕಟ್ಟು” ಕಾರ್ಯಕ್ರಮ

Upayuktha
0

 


ಬಳ್ಳಾರಿ: ವೀ. ವಿ. ಸಂಘದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು, ಬಳ್ಳಾರಿ, ಮಾರ್ಗದರ್ಶನ ಮತ್ತು ಸಮಾಲೋಚನಾ ಕೋಶ (ಎಂ.ಸಿ.ಸಿ) ಮತ್ತು ...- ಆರ್.ವೈ.ಎಂ..ಸಿ ವಿದ್ಯಾರ್ಥಿ ಶಾಖೆ-ಎಸ್ಟಿಬಿ 99412 ಸಹಯೋಗದೊಂದಿಗೆ ಇತ್ತೀಚೆಗೆ "ಮಾನಸಿಕ ಆರೋಗ್ಯದ ಎಬಿಸಿ" ಕುರಿತು ಸಂವಾದ ನಡೆಯಿತು.


ಸಂಪನ್ಮೂಲ ವ್ಯಕ್ತಿ ಸೀತಾರಾಮ್ ಎಂ ಕಾಲಾಪುರ್, ಮನಶ್ಶಾಸ್ತ್ರಜ್ಞ, ಮನಸ್ವಿನಿ, ಬಳ್ಳಾರಿ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ -ಬಿ-ಸಿ ಚೌಕಟ್ಟಿನ ಕುರಿತು ವಿವರಿಸಿದರು. ತೀವ್ರ ಶೈಕ್ಷಣಿಕ ಒತ್ತಡ, ಹೆಚ್ಚಿನ ಕೆಲಸದ ಹೊರೆಗಳು ಮತ್ತು ಪ್ರತ್ಯೇಕತೆಯನ್ನು ನಿರ್ವಹಿಸಲು ಕೆಲವು ಹಂತಗಳನ್ನು ತಿಳಿಸಿದರು. ದೈಹಿಕ ಹಾಗೂ ಮಾನಸಿಕವಾಗಿ ಸಕ್ರಿಯರಾಗಿರುವುದು, ಸಹವರ್ತಿಗಳು ಮತ್ತು ಸಮುದಾಯದೊಂದಿಗೆ ಸಂಪರ್ಕದಲ್ಲಿರುವುದು ಹಾಗೂ ಅರ್ಥಪೂರ್ಣ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದು ಎಷ್ಟು ಮಹತ್ವದ್ದೆಂದು ತಿಳಿಸಿದರು.  


ಆರ್.ವೈ.ಎಂ..ಸಿ ಅಧ್ಯಕ್ಷರು ಹಾಗೂ ವೀ. ವಿ ಸಂಘ ಉಪಾಧ್ಯಕ್ಷರು ಜಾನೆಕುಂಟೆ ಬಸವರಾಜ್, ಆರ್ ವೈ ಎಂ ಸಿ, ಬಳ್ಳಾರಿ ಆಡಳಿತ ಮಂಡಳಿ ಸದಸ್ಯರು ಬಾಡದ ಪ್ರಕಾಶ್,ಪ್ರಭು ಸ್ವಾಮಿ ಎಸ್ ಎಂ ಶುಭ ಹಾರೈಸಿದರು. ಪ್ರಾಂಶುಪಾಲ ಡಾ. ಎಚ್. ಮಹಾಬಲೇಶ್ವರ, ಉಪ ಪ್ರಾಂಶುಪಾಲ ಡಾ. ಸವಿತಾ ಸೋನೋಲಿ,ಎಂಸಿಸಿ ಸೆಲ್ ಸಂಘಟಕರು ಮತ್ತು ಸದಸ್ಯರು ಡಾ. ಮಾನಸ ಕೆ.ಸಿ., ಶ್ರೀಮತಿ ಶೀಲಾ ಬಿ.ಪಿ., ಶ್ರೀಮತಿ ಸುನೀತಾ ಎಸ್, ಆರ್ವೈಎಂಇಸಿ ಎಂ.ಸಿ.ಸಿ ತಂಡ, ಬೋಧಕ, ಬೋಧಕೇತರ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿ ಎಚ್ ನಿರೂಪಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top