ಒಲಿಂಪಿಕ್ ನಲ್ಲಿ ಬಳ್ಳಾರಿ ಮಕ್ಕಳು ಪ್ರಜ್ವಲಿಸಬೇಕು: ಸೋಮಶೇಖರ ರೆಡ್ಡಿ

Upayuktha
0

  


ಬಳ್ಳಾರಿ: ನಗರದ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಏ.8 ರಿಂದ 28 ವರೆಗೆ  22 ದಿನಗಳ ಕಾಲ ನಡೆದ  ಕ್ರೀಡಾ ಪ್ರತಿಭೆಗಳ ಹುಡುಕಾಟದ ಉಚಿತ ಅಥ್ಲೆಟಿಕ್ ತರಬೇತಿಯ ಬೇಸಿಕ್  ಶಿಬಿರದ ಸಮಾರೋಪ ಸಮಾರಂಭ ನಡೆಯಿತು.


ನಾಲ್ಕು ನೂರಕ್ಕೂ ಹೆಚ್ಚು ಮಕ್ಕಳಿಗೆ ಬೇಸಿಗೆಯ ರಜೆ ದಿನಗಳಲ್ಲಿ  ಪ್ರತಿದಿನ ಬೆಳಿಗ್ಗೆ 6.30 ರಿಂದ 8.30  ಹಾಗೂ ಸಂಜೆ  5 ರಿಂದ 7 ವರೆಗೆ ಫಿಜಿಕಲ್ ಫಿಟ್ ನೆಸ್,  ರನ್ನಿಂಗ್ ಮತ್ತು ಲಾಂಗ್ ಜಂಪ್ ತರಬೇತಿ ನೀಡಿದೆ. 400 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದ ಈ ತರಬೇತಿಯಲ್ಲಿ ಸ್ಪರ್ಧೆ ನಡೆಸಿ 92 ಮಕ್ಕಳನ್ನು ಆಯ್ಕೆ ಮಾಡಿದ್ದು ಇವರಿಗೆ ಮೇ 1 ರಿಂದ ಒಂದು ತಿಂಗಳ ಕಾಲ ತರಬೇತಿ ನೀಡಲಿದೆ.


ಮುಂದಿನ ತರಬೇತಿಗೆ ಆಯ್ಕೆ ಮಾಡಿದ ಮಕ್ಕಳಿಗೆ ನಗರದ ಮಾಜಿ ಶಾಸಕ .ಜಿ.ಸೋಮಶೇಖರ ರೆಡ್ಡಿ ಮೆಡಲ್ ಗಳನ್ನು ವಿತರಿಸಿ ಮಾತನಾಡಿ, ನಾವು ಸಹ ಚಿಕ್ಕ ಮಕ್ಕಳಿಂದಲೇ ತರಬೇತಿ ನೀಡಿದರೆ ಚೈನ, ರಷ್ಯಾ, ಜರ್ಮನಿ ಮೊದಲಾದ ದೇಶಗಳಂತೆ ನಮ್ಮ ದೇಶದ ಮಕ್ಕಳು ಒಲಂಪಿಕ್ ಮೆಡಲ್ ಗಳನ್ನು ತರಬಹುದು ಅದಕ್ಕೆ ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಒಲಂಪಿಕ್ ನಲ್ಲಿ ನಮ್ಮ ಮಕ್ಕಳು ಉತ್ತಮ ತರಬೇತಿ ಪಡೆದು ಪ್ರಜ್ವಲಿಸಬೇಕು ಎಂದರು.


ಬಳ್ಳಾರಿಯಲ್ಲಿ ಕ್ರೀಡಾಂಗಣಗಳು ಇವೆ ಆದರೆ ಕೋಚ್ ಗಳ ಕೊರತೆ ಇದೆ. ಕ್ರೀಡೆಯನ್ನು ಪ್ರೋತ್ಸಾಹಿಸಲು ಡಿಎಂಎಫ್ ಮತ್ತು ಕೆಎಂಇಆರ್ ಸಿ ನಿಧಿಯ ಹಣವನ್ನು ಬಳಸಿಕೊಂಡು ಉತ್ತಮ ಸೌಲಭ್ಯ ಒದಗಿಸಬೇಕಿದೆ. ಬಳ್ಳಾರಿಯಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಮಾಡುವ ಆಶಯ ಇದೆಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ರವಿಶಂಕರ್ , ಮಕ್ಕಳಲ್ಲಿ ಕ್ರೀಡಾ ಪ್ರತಿಭೆ ಇರುತ್ತೆ ಅದನ್ನು ಹುಡುಕಿ ಪ್ರೋತ್ಸಾಹಿಸಿದರೆ ಅವರು ಒಳ್ಳೆಯ ಕ್ರೀಡಾ ಸಾಧನೆ ಮಾಡಬಲ್ಲರು. ಅದಕ್ಕಾಗಿ ಶಿಬಿರ ಆಯೋಜಿಸಿತ್ತು ಎಂದರು.


ತರಬೇತುದಾರರಾದ  ಬಾಲು ಮತ್ತು ಸಂತೋಷ್ ಅವರು ಕೋಚಿಂಗ್ ನೀಡಿದ್ದಾರೆ. ಶ್ರಾವಣಿ ಅವರು ಕಾರ್ಯಕ್ರಮ ನಿರೂಪಿಸಿದರು. ಅಥ್ಲೆಟಿಕ್ ಅಸೋಸಿಯೇಷನ್ ಉಪಾಧ್ಯಕ್ಷೆ ಡಾ. ಅನುರಾಧ, ಪಾಲಿಕೆ ಸದಸ್ಯ ಗೋವಿಂದರಾಜುಲು, ಕಾಂಗ್ರೆಸ್ ಮುಖಂಡ ಪಿ. ಜಗನ್ನಾಥ, ವಿದ್ಯಾರ್ಥಿಗಳು, ಪೋಷಕರು ಇದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top