ಭಗವಂತನನ್ನು ಒಲಿಯಲು ಭಕ್ತಿ ಮತ್ತು ಭಜನೆಯಿಂದ ಮಾತ್ರ ಸಾಧ್ಯ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Upayuktha
0


ಬಂಟ್ವಾಳ: ಮನುಷ್ಯನಲ್ಲಿ ಎಷ್ಟು ಆಸ್ತಿ,ಹಣ ಅಂತಸ್ತು ಇದ್ರೂ ಸಹ ಭಕ್ತಿಯನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಸಾಧ್ಯವಿಲ್ಲ ಮನುಷ್ಯನ ಭಕ್ತಿಗೆ ಶ್ರೇಷ್ಠ ಶಕ್ತಿ ಇದೆ ಹಾಗಾಗಿ ಭಕ್ತಿಯಿಂದ ಮಾತ್ರ ಭಗವಂತನನ್ನು ಒಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಪ್ರತಿಯೊಬ್ಬನಲ್ಲಿ ಭಕ್ತಿ ಮೂಡಬೇಕಾದರೆ ನಿತ್ಯ ನಿರಂತರ ಭಜನೆ ಮಾಡಬೇಕು. ಭಜನೆಯಿಂದ ಸಿಗುವ ಭಕ್ತಿ ದೇವರ ಅನುಗ್ರಹಕ್ಕೆ ಪಾತ್ರವಾಗುತ್ತೆ. ಇಂತಹ ಧಾರ್ಮಿಕ ಕಾರ್ಯಗಳಿಂದ ಸೇರಿರುವ ಎಲ್ಲಾ ಭಕ್ತರಿಗೆ ದೇವರ ಅನುಗ್ರಹ ಪ್ರಾಪ್ತಿಯಗುವುದರೊಂದಿಗೆ ಜೀವನ ಪರಮ ಪಾವನವಾಗುತ್ತದೆ ಎಂದೂ ಪೇಜಾವರ ಅಧೋಕ್ಷಜ ಮಠ ಜಗದ್ಗುರು ಶ್ರೀ ಮಧ್ವಚಾರ್ಯ ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಭಿಪ್ರಾಯ ಪಡಿಸಿದರು.


ಅವರು ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಕೋರ್ಯಾರು ಶ್ರೀ ದುರ್ಗಾ ಮಹಾಮ್ಮಾಯೀ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನೂತನ ಪಂಚಲೋಹದ ಶ್ರೀದೇವಿಯ ಬಿಂಬ ಪ್ರತಿಷ್ಠೆ ದಿನದಂದು ದೇವಸ್ಥಾನಕ್ಕೆ ಬೇಟಿ ನೀಡಿ ಸೇರಿರುವ ಭಕ್ತರಿಗೆ ಆಶೀವರ್ಚನ ನೀಡಿದರು.


ಕುಡುಬಿ ಸಮುದಾಯದ ಒಗ್ಗಟ್ಟು, ಸಂಘಟನೆ ಹಾಗೂ ಧಾರ್ಮಿಕತೆಯ ಮೇಲಿನ ನಂಬಿಕೆಗಳ ಬಗ್ಗೆ ಮತ್ತು ದೇವಸ್ಥಾನ ವಠಾರದಲ್ಲಿ ಸಂಪ್ರದಾಯ ಪ್ರಕಾರವಾಗಿ ಮಾಡಿರುವ ಅಲಂಕಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಪೂಂಜಾ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ್ ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಗುರಿಕಾರರಾದ ಗೋಪಾಲ ಗೌಡ ಕೋರ್ಯಾರು, ಎರಡೆನೇ ಗುರಿಕಾರ ಓಬಯ್ಯ ಗೌಡ, ಆಡಳಿತ ಮೊಕ್ತೇಸರ ಯಶೋಧರ ಗೌಡ ಕೋರ್ಯಾರು, ಆಡಳಿತ ಮಂಡಳಿ ಕಾರ್ಯದರ್ಶಿ ಲೋಕಯ್ಯ ಬಚ್ಚಿರಪಲ್ಕೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಕುಕ್ಕೇಡಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಹೇಮಚಂದ್ರ ಸಿದ್ದಕಟ್ಟೆ,ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸಂಜೀವ ಎಲ್ಪೇಲು, ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷರುಗಳಾದ ದುರ್ಗಾದಾಸ್ ಶೆಟ್ಟಿ ಕರಿಂಕಿಜೆ, ಪ್ರಭಾಕರ ಪ್ರಭು,  ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಗಣೇಶ್ ಕಣಿಯೂರು, ಹಾಗೂ ಮಹಿಳಾ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top