ಮೇ.29 ಆಳ್ವಾಸ್ ನಲ್ಲಿ ಶಿವಮೊಗ್ಗ ರಂಗಾಯಣ ಕಲಾವಿದರಿಂದ ಬೊಳುವಾರರ "ಸ್ವಾತಂತ್ರ‍್ಯದ ಓಟ" ನಾಟಕ

Upayuktha
0


ಮೂಡುಬಿದಿರೆಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮೇ 29 ರಂದು ಸಂಜೆ 6.30 ರಿಂದ ರಾತ್ರಿ 9.30ರವರೆಗೆ  ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನೀನಾಸಂ ನಟರಾಜ ಹೊನ್ನವಳ್ಳಿ ನಿರ್ದೇಶನದ ರಂಗಾಯಣ ಶಿವಮೊಗ್ಗ ಪ್ರಸ್ತುತ ಪಡಿಸುವ ಸ್ವಾತಂತ್ರ‍್ಯದ ಓಟ ಎಂಬ ನಾಟಕವನ್ನು ಏರ್ಪಡಿಸಲಾಗಿದೆ.


ತನ್ನ ಸೃಜನಶೀಲ ಗದ್ಯಕೃತಿಗಳಿಗಾಗಿ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಂಞ ಇವರ ಕಾದಂಬರಿಯನ್ನು ಆಧರಿಸಿದ ನಾಟಕವು ವಿಭಜನೆಯ ಕರಾಳ ದಿನಗಳನ್ನು ಅನಾವರಣಗೊಳಿಸುತ್ತದೆ. ನೆಲೆ ಕಳೆದುಕೊಂಡ ಜನರ ನೋವು, ನಿರಾಶ್ರಿತ ಜೀವನ, ಪರಸ್ಪರ ಸೋದರರಂತೆ ಬದುಕುತ್ತಿದ್ದ ಜನಗಳಲ್ಲಿ ಎದುರಾಗುವ ಜನ್ಮಭೂಮಿ ಮತ್ತು ಕರ್ಮಭೂಮಿಯ ನಡುವಿನ ಅಂತರಂಗದ ಸಂಘರ್ಷವನ್ನು ಆಳವಾಗಿ ಬಿಂಬಿಸುತ್ತದೆ. ಭಿನ್ನತೆಗಳ ನಡುವೆ ಸಾಮರಸ್ಯ ಸಹಬಾಳ್ವೆ ಮತ್ತು ಮಾನವೀಯತೆ ಹೇಗೆ ಸೇತುವೆಯಾಗುತ್ತದೆ ಎಂಬ ಸಂದೇಶವನ್ನು ನಾಟಕ ತೋರಿಸುತ್ತದೆ.


ಸರ್ವ ಜಾತಿ ಧರ್ಮದ ಪ್ರತಿಯೊಬ್ಬರೂ ನೋಡಬೇಕಾದ ವಿಶೇಷ ನಾಟಕವಾಗಿದ್ದು, 1111 ಪುಟಗಳ ಬೃಹತ್  ಕಾದಂಬರಿಯನ್ನು 3 ಗಂಟೆಯ ಪ್ರಯೋಗವನ್ನಾಗಿ ಮಾಡಲಾಗಿದೆ. ಕಲಾವಿದರ ಭಾವನಾತ್ಮಕ ಅಭಿನಯ, ಕವ್ವಾಲಿ, ಗಝಲ್ ಮುಂತಾಗಿ ಭಾರತೀಯ ಸಂಗೀತದಿಂದ ಕೂಡಿದ ಸ್ವಾತಂತ್ರ‍್ಯದ ಓಟವು ಪ್ರತಿಕ್ಷಣವೂ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.


ಪ್ರವೇಶ ಉಚಿತವಾಗಿರುವ ಕಾರ್ಯಕ್ರಮದಲ್ಲಿ  ಯಾವುದೇ ಸಭಾ ಕಾರ್ಯಕ್ರಮ ಇರದೆ ಸಮಯಕ್ಕೆ ಸರಿಯಾಗಿ ನಾಟಕ ಆರಂಭವಾಗಲಿದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top