ಹಾಸನ
: ನಗರದ ಆರ್. ಸಿ. ರಸ್ತೆಯ
ಗಂಧದ ಕೋಠಿ ಆವರಣದಲ್ಲಿರುವ ಜಿಜಿಜೆಸಿ
(ಪ್ರಧಾನ) ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯರಾದ ಕುl ಸಾತ್ವಿಕ ಎಂ.ವಿ., ಹಾಗೂ ಕು|
ಫಾತೀಮಾ ರವರು ಇತ್ತೀಚಿಗೆ ನಡೆದ
ಎಸ್. ಎಸ್..ಎಲ್.ಸಿ.
ಪರೀಕ್ಷೆ -1 ರ ಫಲಿತಾಂಶದಲ್ಲಿ ಮರುಮೌಲ್ಯಮಾಪನಕ್ಕೆ
ಅರ್ಜಿ ಸಲ್ಲಿಸಿದ್ದರು.
ಏಪ್ರಿಲ್ 23 ರಂದು ಪ್ರಕಟವಾದ ಫಲಿತಾಂಶದಲ್ಲಿ ಕು| ಸಾತ್ವಿಕ ಎಂ. ವಿ. ರವರಿಗೆ 625 ಕ್ಕೆ 599 ಅಂಕಗಳು ಬಂದಿದ್ದವು. ಅಂತೆಯೇ ಕು| ಫಾತೀಮಾ ರವರಿಗೆ 625 ಕ್ಕೆ 589 ಅಂಕಗಳು ಬಂದಿದ್ದವು. ಇದೀಗ ಮರುಮೌಲ್ಯಮಾಪನ ನಂತರ ಕು| ಸಾತ್ವಿಕ ಎಂ. ವಿ. ರವರಿಗೆ 625 ಕ್ಕೆ 605 ಅಂಕಗಳು ಬಂದಿದ್ದು ಒಟ್ಟು 6 ಅಂಕಗಳು ಏರಿಕೆಯಾಗಿರುತ್ತವೆ. ಅದೇ ರೀತಿ ಕು| ಫಾತೀಮಾ ರವರಿಗೆ 625 ಕ್ಕೆ 591 ಅಂಕಗಳು ಬಂದಿದ್ದು ಒಟ್ಟು 2 ಅಂಕಗಳು ಏರಿಕೆಯಾಗಿರುತ್ತವೆ. ಕ್ರಮವಾಗಿ ಶಾಲಾ ಹಂತದಲ್ಲಿ ಈ ವಿದ್ಯಾರ್ಥಿನಿಯರು ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿದ್ದಾರೆ. ಎಂದು ಉಪಪ್ರಾಂಶುಪಾಲರಾದ ಮಂಜನಾಥ್ ರವರು ತಿಳಿಸಿರುತ್ತಾರೆ.
2025-26 ರ
ಎಸ್. ಎಸ್..ಎಲ್.ಸಿ.
ಪರೀಕ್ಷೆ-1 ಒಟ್ಟಾರೆ ಉತ್ತೀರ್ಣರಾದ 56 ವಿದ್ಯಾರ್ಥಿನಿಯರಲ್ಲಿ 12 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಇವರನ್ನು ಒಳಗೊಂಡಂತೆ 17 ವಿದ್ಯಾರ್ಥಿನಿಯರು 500 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ ಎಂದು ಹೇಳಿದರು. ತರಗತಿ
ಶಿಕ್ಷಕರಾದ ಚಿದಾನಂದ ಕೆ.ಎನ್. ಮತ್ತು
ಮಂಜುಳ ಹೆಚ್. ಪಿ. ಹಾಗೂ ವಿಷಯ
ಶಿಕ್ಷಕರಾದ ಗೀತಾರಾಣಿ ಎ.ವಿ., ರುದ್ರೇಶ್,
ರಂಗಾಮಣಿ ಎಂ.ಆರ್., ಪೂರ್ಣಿಮಾ
ಎಸ್. ಕೆ., ಮಧು ಪಿ.,
ಚಿದಾನಂದ, ತೈಬಾಕೌಸರ್, ಸತ್ಯನಾರಾಯಣ ಮುರಳಿ, ಎಸ್.ಡಿ.ಎಂ.
ಸಿ . ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಎಲ್ಲಾ ಪೋಷಕರು
ವಿದ್ಯಾರ್ಥಿನಿಯರಿಗೆ ಅಭಿನಂದಿಸಿರುತ್ತಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


