ಈ ಸಂದರ್ಭದಲ್ಲಿ
ಮಾತನಾಡಿದ ಕಲಾಕುಂಚ ಕೇರಳದ
ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ವಿ.ಬಿ.ಕುಳಮರ್ವ, ಕಾಸರಗೋಡಿನಲ್ಲಿ
ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಗಮಕಗಳ ಪರಂಪರೆಯ ಬೆಳವಣಿಗೆ ಆಗಬೇಕಾಗಿದೆ. ಮಲಯಾಳಂ ಭಾಷೆಯಲ್ಲಿ ಗಮಕ ಸಾಹಿತ್ಯ ಪ್ರಚಲಿತವಿದೆ.
ದಾವಣಗೆರೆಯ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಪ್ರೌಢಶಾಲೆಯ ಮೆಟ್ಟಿಲೇರದೇ ಕಳೆದ 35 ವರ್ಷಗಳಿಂದ ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ
ನಗರಿಯಾಗಿ ಬೆಳೆಸಿದ್ದು ಶ್ಲಾಘನೀಯ ಎಂದು ಉಪನ್ಯಾಸ ನೀಡಿದರು.
ಗಮಕ
ಸಾಹಿತ್ಯ ಸಂಘದ ಅಧ್ಯಕ್ಷರಾದ ತೆಕ್ಕೆಕರೆ
ಶಂಕರನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿ
ಈ ಸಾಂಸ್ಕೃತಿಕ ಚಟುವಟಿಕೆಗಳು ಮಾನವನ ಜೀವನಕ್ಕೆ ನಾಂದಿ ಎಂದರು.
ದಿವ್ಯಾ
ಚಂದನ್ ಕಾರಂತ್ ಪ್ರಾರ್ಥಿಸಿದರು. ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸಂಸ್ಥಾಪಕರಾದ ಜಯಲಕ್ಷ್ಮಿ ಕಾರಂತ್ ಸ್ವಾಗತಿಸಿ, ಪ್ರಸ್ತಾವನೆ ನುಡಿಗಳನ್ನು ವ್ಯಕ್ತಪಡಿಸಿದರು. ರಾಧಾಕೃಷ್ಣ ಉಳಿಯತ್ತಡ್ಕ, ರಾಜಾರಾಮರಾವ್, ಶಿಕ್ಷಕಿ ಶ್ರೀಮತಿ ಶಶಿಕಲಾ ಮುಂತಾದವರು ತಮ್ಮ ತಮ್ಮ ಅನಿಸಿಕೆಗಳನ್ನು
ಹಂಚಿಕೊಂಡರು.
ವೇದಾಂತ್
ಕಾರಂತ್, ಶ್ರೀಮತಿ ದಿವ್ಯಾ ಕಾರಂತ್, ಶ್ರೀಮತಿ ಚೇತನಾ ಹೆಬ್ಬಾರ್, ಸಂಪ್ರದಾಯಕ ಸಂಗೀತ ಕಾರ್ಯಕ್ರಮದೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು. ಶ್ರೀಮತಿ ಜಯಲಕ್ಷ್ಮಿ ರಾಮಚಂದ್ರ
ಹೊಳ್ಳ ನಿರೂಪಿಸಿ, ರಾಜಾರಾಮರಾವ್
ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


