ಲಿವ್ ಇನ್ ರಿಲೇಷನ್ಶಿಪ್..... ಒಂದು ವಾಸ್ತವ

Upayuktha
0

  


ತ್ತೀಚೆಗೆ ನಾನು ನೋಡಿದ ಹಾಗೂ ಕೇಳಿದ ಒಂದು ವಿಷಯ ನನ್ನ ಮನಸ್ಸನ್ನು ಅತ್ಯಂತ ಘಾಸಿಗೊಳಿಸಿತು.


ಮಹಾನಗರದಲ್ಲಿ ವಾಸಿಸುತ್ತಿದ್ದ ಮಹಿಳೆ ಕಳೆದ ಹತ್ತು ವರ್ಷಗಳಿಂದ ವ್ಯಕ್ತಿಯೊಬ್ಬನೊಂದಿಗೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇದ್ದಳು. ಆಕೆ ಸಂಬಂಧವನ್ನು ಅತ್ಯಂತ ನಂಬಿಕೆಯಿಂದ ನಿರ್ವಹಿಸಿದ್ದಳು. ಆಕೆಯ ಯೌವನ, ಸಮಯ, ಭಾವನೆಗಳು ಹಾಗೂ ದೇಹ ಎಲ್ಲವನ್ನು ಆಕೆ ಸಂಬಂಧಕ್ಕೆ ವಿನಿಯೋಗಿಸಿದಳು. ಆದರೆ ಅದೊಂದು ದಿನ ಆತ ಆಕೆಯ ಬದುಕಿನಿಂದ ದೂರ ನಡೆದುಹೋದ. ಹಾಗೆ ಹೋಗುವ ಮುನ್ನ ಆತ ಆಕೆಗೆ ಹೇಳಿದ್ದು ತಾನು ಬೇರೊಬ್ಬ ಹುಡುಗಿಯನ್ನು ಇಷ್ಟಪಡುತ್ತಿದ್ದು ಆಕೆಯನ್ನೇ ಮದುವೆಯಾಗುತ್ತೇನೆ ಎಂದು

 

ಆಕೆಗೆ ಒಮ್ಮಿಂದೊಮ್ಮೆಲೆ ಕಾಲ ಕೆಳಗಿನ ನೆಲ ಕುಸಿದಂತಾಯಿತು. ಆಕೆ ಕೂಡಲೇ ಪೊಲೀಸ್ ಸ್ಟೇಷನ್ ಗೆ ಹೋಗಿ ಆತನ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಇಚ್ಛಿಸಿದಳು. ಆತ ತನಗೆ ಮಾಡಿದ ಮೋಸಕ್ಕೆ ಕಾನೂನು ಆತನನ್ನು ಶಿಕ್ಷಿಸಲಿ ಎಂಬುದು ಆಕೆಯ ಬಯಕೆ ಯಾಗಿತ್ತು.  ಭಾವನಾತ್ಮಕ ನೋವಿಗೆ ಕಾನೂನಿನಲ್ಲಿ ಯಾವುದೇ ಶಿಕ್ಷೆ ಇಲ್ಲ ಎಂಬುದು ಆಕೆಗೆ ಗೊತ್ತಿರಲಿಲ್ಲ. ಅತ್ಯಂತ ಕಠಿಣವಾದ ಸತ್ಯ ಗೊತ್ತಿಲ್ಲದ ನೂರಾರು ಹೆಣ್ಣು ಮಕ್ಕಳು ಇದನ್ನು ಅರಿಯದೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಲಿವ್ ಇನ್ ರಿಲೇಷನ್ಶಿಪ್ ನ ಸುಳಿಯಲ್ಲಿ ಸಿಲುಕುತ್ತಾರೆ.

 

 ಲಿವ್ ಇನ್ ರಿಲೇಷನ್ಶಿಪ್ ಎಂಬುದು ಪರಸ್ಪರರಿಂದ ಕೆಲವು ವಿಷಯಗಳನ್ನು ಬಯಸುತ್ತದೆಯೇ ಹೊರತು ಯಾರು ಮತ್ತೊಬ್ಬರ ಮೇಲೆ ಯಾವುದೇ ರೀತಿಯ ಅಧಿಕಾರವನ್ನು ಹೊಂದಿರುವುದಿಲ್ಲಇತ್ತೀಚಿಗಿನ ದಿನಗಳಲ್ಲಿ ಸಾರ್ವಜನಿಕವಾಗಿ ಲಿವ್ ಇನ್ ರಿಲೇಷನ್ಶಿಪ್ ಗಳನ್ನು ನಮ್ಮ ಸ್ವಾತಂತ್ರ್ಯ ಆಯ್ಕೆ ಮತ್ತು ಆಧುನಿಕತೆಯ ಪರಿಭಾಷೆಯಾಗಿ ಭಾವಿಸುತ್ತಿದ್ದಾರೆ ಆದರೆ, ಬದುಕಿನ ಕಟಕಟೆಯಲ್ಲಿ ಚಿತ್ರಣ ಸಂಪೂರ್ಣ ವಿಭಿನ್ನವಾಗಿರುತ್ತದೆ. ಇಂತಹ ರಿಲೇಷನ ಶಿಪ್ ಗಳು ಕುಸಿದು ಬಿದ್ದಾಗ ಹೆಣ್ಣು ಮಕ್ಕಳು ಭಾವನಾತ್ಮಕವಾಗಿ ಕುಸಿದು ಹೋಗುತ್ತಾರೆ ಹಾಗೂ ವಿಷಯದಲ್ಲಿ ಕಾನೂನು ಕೂಡ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದಂತೆ ದುರ್ಬಲವಾಗಿದೆ.

 

ತಾರುಣ್ಯದ ಹುಮ್ಮಸಿನಲ್ಲಿ ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇರಲು ಬಯಸುವ, ಹಾಗೂ ಬದುಕನ್ನು ದೂರದಿಂದ ನೋಡಿ ಅಂತೆಯೇ ಬದುಕುವ ಆಸೆಯನ್ನು ಹೊಂದಿರುವ ಯುವ ಜನತೆಗೆ ತಿಳಿಸಲೇಬೇಕಾದ ಕೆಲವು ವಿಷಯಗಳು ಹೀಗಿದೆ.

 

ಇದು ಇಬ್ಬರು ವಯಸ್ಕರ ಮಧ್ಯದಲ್ಲಿ ಅವರಿಬ್ಬರ ಒಪ್ಪಿಗೆಯ ಮೇರೆಗೆ ನಡೆಯುವ ಕಾರಣ ಇಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಒಂದಾಗುವ ಜವಾಬ್ದಾರಿಗಳನ್ನು ಒಟ್ಟಾಗಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಜೊತೆಯಾಗಿ ಜೀವಿಸುತ್ತಾರೆ.... ಪರಸ್ಪರರ ಒಪ್ಪುಗೆಯ ಮೇಲೆ ಎಲ್ಲವೂ ನಡೆಯುವುದರಿಂದ ಎಲ್ಲ ರೀತಿಯ ರಿಲೇಶನ್ ಶಿಪ್ ನಲ್ಲಿ ಉಂಟಾಗುವ ಬ್ರೇಕ್ ಅಪ್ ಗಳು ಕ್ರಿಮಿನಲ್ ಅಪರಾಧಗಳಾಗಿರುವುದಿಲ್ಲ.

 

ಲಿವ್ ಇನ್ ರಿಲೇಷನ್ಶಿಪ್ ನಲ್ಲಿರುವವರ ನಡುವಿನ ಬ್ರೇಕ್ ಅಪ್ ಗಳ ನಂತರ ಅವರ ಸಂಬಂಧವನ್ನು ದೈಹಿಕ ಹಲ್ಲೆ ಅಥವಾ ರೇಪ್ ಎಂದು ಪರಿಗಣಿಸಲಾಗುವುದಿಲ್ಲ.  ಅವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಸಂಬಂಧವನ್ನು ಮುಂದುವರೆಸಿರುವ ಕಾರಣ ಇಲ್ಲಿ ಒಬ್ಬರು ಮೊದಲು ಬ್ರೇಕಪ್ ಮಾಡಿಕೊಂಡ ನಂತರ ಉಳಿದವರು ಇದನ್ನು ದೈಹಿಕ ಹಲ್ಲೆ ಅಥವಾ ರೇಪ್ ಎಂದು ಪರಿಗಣಿಸಿ ದೂರು ನೀಡಲು ಸಾಧ್ಯವಿಲ್ಲ.

 

 ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇರುವವರಲ್ಲಿ ಯಾರಾದರೂ ಒಬ್ಬರು ಬ್ರೇಕ್ ಅಪ್ ಮಾಡಿಕೊಳ್ಳುವುದನ್ನು ವಂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕಾರಣ ಆರಂಭದಿಂದಲೇ ವಂಚನೆ ಕುತಂತ್ರ ಮತ್ತು ಮುಂದೆ ಮದುವೆಯಾಗೋಣ ಎಂಬ ಸುಳ್ಳು ಭರವಸೆಗಳನ್ನು ನೀಡಲು ಕಾರಣ ದೈಹಿಕ ಸಂಬಂಧಕ್ಕೆ ಒಪ್ಪಿಗೆಯನ್ನು ನೀಡಲಿ ಎಂಬುದು. ಆದರೆ ಕಾನೂನಾತ್ಮಕ ಪರಿಸ್ಥಿತಿಗಳು ಸಂಪೂರ್ಣ ವಿಭಿನ್ನವಾಗಿದ್ದು, ಲಿವ್ ಇನ್ ರಿಲೇಷನ್ಶಿಪ್ ಗಳು ವೈವಾಹಿಕ ಬಂಧನದಲ್ಲಿ ದೊರೆಯುವ ಯಾವುದೇ ರೀತಿಯ ಕಾನೂನಾತ್ಮಕ ರಕ್ಷಣೆಯನ್ನು ನೀಡುವುದಿಲ್ಲ. ಮದುವೆಯು ಹೆಣ್ಣು ಮಕ್ಕಳಿಗೆ ಸಾಮಾಜಿಕ ಮತ್ತು ಕಾನೂನಾತ್ಮಕ ಸ್ಥಾನಮಾನವನ್ನು ನೀಡುತ್ತದೆ. ವೈವಾಹಿಕ ಬಂಧನವೂ ಹೆಣ್ಣು ಮಕ್ಕಳಿಗೆ ವಿವಾಹ ಕಾಯ್ದೆಯ ಅನ್ವಯದ ಹಕ್ಕುಗಳು ಮತ್ತು ಕೆಲವು ಒಪ್ಪಿಗೆಗಳನ್ನು ನೀಡುತ್ತದೆ

 

ಓರ್ವ ವಿವಾಹಿತ ಪತ್ನಿಯು ತನ್ನ ಪತಿಯಿಂದ ರಕ್ಷಣೆಯನ್ನು ಕೋರಬಹುದು. ಕುಟುಂಬದ ಎಲ್ಲಾ ವ್ಯವಹಾರಗಳಲ್ಲೂ ಆಕೆ ತನ್ನದೇ ಆದ ಸಹಭಾಗಿತ್ವವನ್ನು, ಹಕ್ಕು ಬಾಧ್ಯತೆಗಳನ್ನು ಹೊಂದಿರುತ್ತಾಳೆ. ಕೌಟುಂಬಿಕ ನಿರ್ವಹಣೆ ಕಾನೂನಾತ್ಮಕ ಪರಿಹಾರಗಳು ಸಾಮಾಜಿಕ ಸ್ಥಾನಮಾನ ಹಾಗೂ ಹೊಣೆಗಾರಿಕೆಯ ಚೌಕಟ್ಟು ವಿವಾಹಿತ ಹೆಣ್ಣು ಮಗಳಿಗೆ ಇರುತ್ತದೆ. ಆದರೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇದಾವುದೂ ಸಾಧ್ಯವಿಲ್ಲ. ಲಿವ್ ಇನ್ ರಿಲೇಷನ್ಶಿಪ್ ಗಳಲ್ಲಿ ಬಹಳಷ್ಟು ಬಾರಿ ರಕ್ಷಣೆ ಇರುವುದಿಲ್ಲ. ಕಾರಣ ಸಂಬಂಧಗಳು ಮದುವೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ.

 

ಕಾನೂನು ಕೆಲ ಸಂಬಂಧಗಳನ್ನು ರಕ್ಷಿಸಬಹುದು. ಮದುವೆಯ ರೀತಿ ನೀತಿಗಳಿಗೆ ಕಾನೂನಿನಲ್ಲಿ ತನ್ನದೇ ಆದ ಚೌಕಟ್ಟು ಇದ್ದು ವಿಷಯ ಆಧಾರಿತ ಹಾಗೂ ಸ್ವಯಂ ಚಾಲಿತವಾಗಿ ಅದು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಬಹಳಷ್ಟು ಬಾರಿ ಹೆಣ್ಣು ಮಕ್ಕಳು ನನ್ನ ದೇಹ ನನ್ನ ಆಯ್ಕೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ನಿಜ, ಅವರ ದೇಹದ ಮೇಲೆ ಅವರ ಹಕ್ಕು ಮತ್ತು ಅವರದ್ದೇ ಆಯ್ಕೆಗಳ ಸ್ವಾತಂತ್ರ್ಯ ಅವರಿಗೆ ಇದೆ ಆದರೆ ಇದನ್ನು ಹೆಣ್ಣು ಮಕ್ಕಳು ತಿಳುವಳಿಕೆಯುಳ್ಳ ಆಯ್ಕೆಯನ್ನಾಗಿ ಮಾಡಿಕೊಳ್ಳುವ ಜವಾಬ್ದಾರಿಯನ್ನು ಕೂಡ ಹೊಂದಿರಬೇಕು. ಕಾರಣ ಕಾನೂನು ಯಾವುದೇ ಸ್ಲೋಗನ್ ಗಳನ್ನು ರಕ್ಷಿಸುವುದಿಲ್ಲ ಕಾನೂನು ಹಕ್ಕುಗಳನ್ನು ಮಾತ್ರ ರಕ್ಷಿಸುತ್ತದೆ ಮತ್ತು ಕಾನೂನಿನ ಕಣ್ಣುಗಳಲ್ಲಿ ಭಾವನಾತ್ಮಕ ಒಳಗೊಳ್ಳುವಿಕೆಗೆ ಯಾವುದೇ ರೀತಿಯ ಮಾನ್ಯತೆ ಇರುವುದಿಲ್ಲ.

 

ಬಹಳಷ್ಟು ಲಿವ್ ಇನ್ ಸಂಬಂಧಗಳ ರಚನಾತ್ಮಕತೆಯಲ್ಲಿ ಹೆಣ್ಣು ಮಕ್ಕಳು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಇರುತ್ತಾರೆ. ಇಂತಹ ಸಂಬಂಧವನ್ನು ಪ್ರಾರಂಭಿಸುವ ಮುನ್ನ ಪ್ರತಿಯೊಂದು ಯುವತಿಯು ತನ್ನನ್ನು ತಾನು ಕೇಳಿಕೊಳ್ಳಲೇಬೇಕಾದ ಕೆಲ ಪ್ರಶ್ನೆಗಳು ಹೀಗಿವೆ. 

 ಇಂತಹ ಸಂಬಂಧದಲ್ಲಿ ಕಾನೂನಾತ್ಮಕವಾಗಿ ತನಗಿರುವ ಹಕ್ಕುಗಳು ಏನು? 

ಅಂತಹ ಸಂಬಂಧದಿಂದ ವ್ಯಕ್ತಿ ಹೊರಟು ಹೋದಾಗ ತನಗಿರುವ ರಕ್ಷಣೆ ಏನು?

 ನಾವಿಬ್ಬರೂ ಪರಸ್ಪರರಿಗೆ ಮಾಡಿಕೊಂಡಿರುವ ಪ್ರಮಾಣಕ್ಕೆ ಪರಿಹಾರವೇನು ? 

 ತನ್ನನ್ನು ತಾನು ತೀವ್ರವಾದ ಮಾನಸಿಕ ಹಾಗೂ ದೈಹಿಕವಾಗಿ ಸಂಬಂಧದಲ್ಲಿ ತೊಡಗಿಸಿಕೊಳ್ಳುವ ಪರಿಣಾಮವಾಗಿ ತಾನು ಪಡೆದುಕೊಳ್ಳುವ ಹಾಗೂ ಕಳೆದುಕೊಳ್ಳುವ ಸಂಗತಿಗಳು ಯಾವುವು ?

 ಮೇಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕು.

 

ನಿಜವಾದ ಮಹಿಳಾ ಸಬಲೀಕರಣವು ಪ್ರಾರಂಭವಾಗುವದು ಕಾನೂನು ತಿಳುವಳಿಕೆಯಿಂದಲೇ ಹೊರತು ಭ್ರಾಮಕ ಜಗತ್ತಿನ ರೋಮಾಂಚನ ಹುಟ್ಟಿಸುವ ಕಾಲ್ಪನಿಕ ಕಥೆಗಳ ಅನುಭವದಿಂದ ಅಲ್ಲ.

 

-         -  ವೀಣಾ ಹೇಮಂತಗೌಡ ಪಾಟೀಲ್

ಮುಂಡರಗಿ, ಗದಗ್

 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top