ಬಳ್ಳಾರಿ: 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಕೇಂದ್ರ ಸರ್ಕಾರ ಘೋಷಿಸಿರುವ 14 ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳವನ್ನು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಗುರುಲಿಂಗನ ಗೌಡ, ಹರ್ಷಭರಿತವಾಗಿ ಸ್ವಾಗತಿಸಿದ್ದಾರೆ.
ಪ್ರಧಾನಮಂತ್ರಿ
ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ರೈತರ ಬದುಕು ಸುಧಾರಿಸಲು
ಹಾಗೂ ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿಸಲು ನಿರಂತರವಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. 2026-27ನೇ ಸಾಲಿನ ಮುಂಗಾರು
ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ರೈತರ ಶ್ರಮಕ್ಕೆ ನೀಡಿರುವ
ಗೌರವವಾಗಿದೆ.
ಕೇಂದ್ರ
ಸರ್ಕಾರ ಘೋಷಿಸಿರುವ ಹೊಸ MSP ದರಗಳಿಂದ ಭತ್ತ, ಜೋಳ, ರಾಗಿ, ಸಜ್ಜೆ,
ಮೆಕ್ಕೆಜೋಳ, ತೊಗರಿಬೇಳೆ,ಉದ್ದು, ಹೆಸರಬೇಳೆ, ನೆಲಗಡಲೆ, ಸೂರ್ಯಕಾಂತಿ, ಸೋಯಾಬಿನ್, ಎಳ್ಳು ಹಾಗೂ ಹತ್ತಿ ಬೆಳೆಗಾರರಿಗೆ
ನೇರ ಲಾಭವಾಗಲಿದೆ. ವಿಶೇಷವಾಗಿ ತೊಗರಿಬೇಳೆ, ಹೆಸರಬೇಳೆ, ಉದ್ದು ಹಾಗೂ ಎಣ್ಣೆ ಬೀಜಗಳಿಗೆ
ಹೆಚ್ಚಿನ ಪ್ರಮಾಣದಲ್ಲಿ MSP ಹೆಚ್ಚಳ ಘೋಷಿಸಿರುವುದು ರೈತರಲ್ಲಿ ಹೊಸ ವಿಶ್ವಾಸ ಮೂಡಿಸಿದೆ.
ಕಳೆದ
ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ರೈತರ ಉತ್ಪಾದನಾ ವೆಚ್ಚವನ್ನು
ವೈಜ್ಞಾನಿಕವಾಗಿ ಪರಿಶೀಲಿಸಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಮೂಲಕ ಭದ್ರ ಆದಾಯ
ಒದಗಿಸುವ ಕೆಲಸ ಮಾಡುತ್ತಿದೆ. ರೈತರು
ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕಬೇಕು ಎಂಬುದು
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ
ಸ್ಪಷ್ಟ ಸಂಕಲ್ಪವಾಗಿದೆ. ಇದೇ ಕಾರಣಕ್ಕೆ ಒಖಕ
ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಕೃಷಿ ಉತ್ಪನ್ನಗಳ ಖರೀದಿ
ವ್ಯವಸ್ಥೆಯನ್ನೂ ವಿಸ್ತರಿಸಲಾಗುತ್ತಿದೆ.
ಭತ್ತದ
MSP ಅನ್ನು ₹2441ಕ್ಕೆ ಹಾಗೂ ಗ್ರೇಡ್
'ಎ' ಭತ್ತದ MSP ಅನ್ನು ₹2461ಕ್ಕೆ ಹೆಚ್ಚಿಸಿರುವುದು ಅಕ್ಕಿ
ಬೆಳೆಗಾರರಿಗೆ ನೆರವಾಗಲಿದೆ. ರಾಗಿ ಬೆಲೆಯನ್ನು ₹5205ಕ್ಕೆ
ಏರಿಸಿರುವುದು ಕರ್ನಾಟಕದ ರೈತರಿಗೆ ವಿಶೇಷ ಸಂತಸದ ವಿಚಾರವಾಗಿದೆ. ಜೋಳ, ಸಜ್ಜೆ ಮತ್ತು
ಮೆಕ್ಕೆಜೋಳ ಬೆಳೆಗಳಿಗೆ ಹೆಚ್ಚಳ ನೀಡಿರುವುದು ಬರ ಪ್ರದೇಶದ ರೈತರಿಗೆ
ಸಹಾಯಕವಾಗಲಿದೆ.
ಪಲ್ಸ್
ಹಾಗೂ ಎಣ್ಣೆ ಬೀಜ ಉತ್ಪಾದನೆಯನ್ನು ಉತ್ತೇಜಿಸಲು
ತೊಗರಿಬೇಳೆ ₹8450. ಹೆಸರಬೇಳೆ ₹8780, ಉದ್ದು ₹8200, ಸೋಯಾಬಿನ್ ₹5708, ಸೂರ್ಯಕಾಂತಿ ₹8343 ಹಾಗೂ ಎಳ್ಳು ₹10346 ಒಖಕ
ನಿಗದಿಪಡಿಸಿರುವುದು ದೇಶದ ಕೃಷಿ ಆತ್ಮನಿರ್ಭರತೆಗೆ
ಸಹಕಾರಿ ಆಗಲಿದೆ. ಹತ್ತಿ ಬೆಳೆಗಾರರ ಹಿತದೃಷ್ಟಿಯಿಂದ ಮಧ್ಯಮ ಎಳೆಯ ಹತ್ತಿಗೆ ₹8267 ಹಾಗೂ
ಉದ್ದ ಎಳೆಯ ಹತ್ತಿಗೆ ₹8667 MSP ಘೋಷಿಸಿರುವುದು ರೈತರಿಗೆ
ಹೆಚ್ಚಿನ ಪ್ರೋತ್ಸಾಹ ನೀಡಲಿದೆ.
ಕೇಂದ್ರ
ಸರ್ಕಾರ ಈಗಾಗಲೇ ಪಿಎಂ-ಕಿಸಾನ್ ಸಮ್ಮಾನ್
ನಿಧಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ.
ಮಣ್ಣಿನ ಆರೋಗ್ಯ ಕಾರ್ಡ್, ಸೂಕ್ಷ್ಮ ನೀರಾವರಿ ಯೋಜನೆಗಳು, ರಸಗೊಬ್ಬರ ಸಹಾಯಧನ ಸೇರಿದಂತೆ ಅನೇಕ ಯೋಜನೆಗಳ ಮೂಲಕ
ರೈತರ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. MSP ಹೆಚ್ಚಳದ ಈ ನಿರ್ಧಾರ ರೈತರ
ಆರ್ಥಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಲಿದೆ.
ರೈತರ
ಬೆವರು ವ್ಯರ್ಥವಾಗಬಾರದು. ಕೃಷಿ ಕ್ಷೇತ್ರ ಮತ್ತಷ್ಟು
ಅಭಿವೃದ್ಧಿಯಾಗಬೇಕು ಹಾಗೂ ಗ್ರಾಮೀಣ ಆರ್ಥಿಕತೆ
ಬಲವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ
ಸರ್ಕಾರ ಕೈಗೊಂಡಿರುವ ಈ ಐತಿಹಾಸಿಕ ನಿರ್ಧಾರವನ್ನು
ನಾನು ಅಭಿನಂದಿಸುತ್ತೇನೆ. ದೇಶದ ಅನ್ನದಾತರ ಕಲ್ಯಾಣವೇ
ಮೋದಿ ಸರ್ಕಾರದ ಮೊದಲ ಆದ್ಯತೆ ಎಂಬುದು
ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


