ಹಾಸನ: ಹಾಸನದ ರಂಗಭೂಮಿ ನಿರ್ದೇಶಕಿ ಶ್ರೀಮತಿ ಮಂಗಳ ವೆಂಕಟೇಶ್ ಅವರು ಹಲವಾರು ಜಿಲ್ಲಾ ಲೇಖಕರ ನಾಟಕಕಾರರ ನಾಟಕಗಳನ್ನು ರಂಗದ ಮೇಲೆ ತಂದವರು. ಸೃಜನ ಸಿರಿ ಮಹಿಳಾ
ಸಂಘದಿಂದ ಹಲವು ಮಹಿಳಾ ಕಲಾವಿದರನ್ನು ರಂಗಮಂಚವೇರಿಸಿದ ನಿರ್ದೇಶಕಿ. ಇವರು ಕರೋನ ಸಂದರ್ಭ ನಿಧನರಾದರು. ಇವರ ಕಲಾ ಸೇವೆಯ ಸ್ಮರಣೆ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕದಂಬ ಸೈನ್ಯ, ಶ್ರೀ ಬೆನಕ ಕಲಾ ಸೌರಭ ಮತ್ತು ಶ್ರೀ ಶಾರದಾ ಕಲಾಸಂಘ ವತಿಯಿಂದ ಅವರ ಸಗೃಹದಲ್ಲಿ ಏರ್ಪಡಿಸಲಾಗಿತ್ತು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಶ್ರೀಮತಿ ಮಂಗಳ ವೆಂಕಟೇಶ್ ರವರು ಹಾಸನದ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು. ತಮ್ಮದೇ ಮಹಿಳಾ ತಂಡ ಕಟ್ಟಿ ಹಲವಾರು ಹೊಸ ನಾಟಕಗಳನ್ನು ಪ್ರಯೋಗಿಸಿದ್ದರು. ಇವರು ಕಸಾಪ ಹಾಸನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿದ್ದರು. ತಾವೇ ನಾಟಕ ಬರೆದು ರಂಗದ ಮೇಲೆ ತಂದಿದ್ದಾರೆ. ಇವರ ಕಲಾಸೇವೆ ಸ್ಮರಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾವಿದೆ ಶ್ವೇತಾಮೋಹನ್ ಶ್ರೀಮತಿ ಮಂಗಳ ಅವರೊಂದಿಗಿನ ತಮ್ಮ ಒಡನಾಟ, ನಟನೆಗೆ ನೀಡಿದ ಸ್ಪೂರ್ತಿ, ಮನೆಯಲ್ಲಿಯೇ ನಾಟಕ ಅಭ್ಯಾಸ ಮಾಡುತ್ತಿದ್ದ ದಿನಗಳನ್ನು ನೆನೆದರು.
ಮಂಗಳ ಅವರ ಒಡನಾಟದಲ್ಲಿದ್ದ ಶಿಕ್ಷಕಿ ರಾಣಿ ಚರಾಶ್ರೀ ಅವರ ನಿರ್ದೇಶನದಲ್ಲಿ ನಟಿಸಿದ ನಾಟಕಗಳ ಪಾತ್ರ, ಅವು ತಂದುಕೊಟ್ಟ ಹೆಸರು ಅದು ಇಂದಿಗೂ ಸ್ಫೂರ್ತಿಯಾಗಿ ಮುಂದುವರಿದು ಬಂದಿರುವುದನ್ನು ಸ್ಮರಿಸಿದರು.
ಪತ್ರಕರ್ತೆ ಶ್ರೀಮತಿ ಲೀಲಾವತಿ ತಮ್ಮ ಬಾಲ್ಯದ ಗೆಳತಿ ಮಂಗಳಾರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿ ತಾವು ಎಲೆಮರೆಕಾಯಂತೆ ಇದ್ದು ಮಂಗಳಾ ಮತ್ತು ಇತರ ಹೆಣ್ಣುಮಕ್ಕಳಿಗೆ ಸಹಾಯ ಮಾಡುತ್ತಿದ್ದ ಬಗೆಯನ್ನು ತಿಳಿಸಿದರು.
ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್ ಅವರ ಮನಸ್ಸು ಪುಸ್ತಕವನ್ನು ಇದೇ ಸಂದರ್ಭ ಗೊರೂರು ಅನಂತರಾಜು ಲೋಕಾರ್ಪಣಿ ಮಾಡಿದರು.
ಕೃತಿಯ ಕರ್ತೃ ಸೀತಮ್ಮ ಮಾತನಾಡಿ ನಾನು
ಶ್ರೀಯುತ ಗೊರೂರು ಅನಂತರಾಜು ಅವರ ಸಾಗುತಾ ಇದೆ ದೋಣಿ ನದಿಯ ನೀರನು ಸೀಳುತಾ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದೆನು. ಸಾಹಿತ್ಯದ ತವರೂರು ಎನಿಸಿಕೊಂಡ ಹಾಸನವೇ ತಮ್ಮ ಈ ಎಲ್ಲ ಸಾಹಿತ್ಯ ಕೃಷಿಗೆ ಪ್ರೇರಣೆ. ಕೊಡಗಿನ ಆದಿಕವಿ ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಸಂಗೀತ ಸಾಹಿತ್ಯ, ನಾಟಕ ಸೇವೆಗಳನ್ನು ವಿವರಿಸಿದರು. ತಾವು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಾರ್ತಿಯಾಗಿದ್ದು ಇತಿಹಾಸ, ನಿಘಂಟು, ಕವನ ಸಂಕಲನಗಳಲ್ಲದೆ ಇಂತಹ ವಿವೇಕ ಜ್ಞಾನ ಕೃತಿ ಹೊರತಂದಿದ್ದು ಮನಸ್ಸಿನ ಆಳವಾದ ವಿಷಯಗಳನ್ನು ಪ್ರಸ್ತುತ ಪಡಿಸಿರುವಂತಹ ಕೃತಿ ಇದಾಗಿದೆ ಎಂದರು.
ಕದಂಬ ಸೇನೆ
ಜಿಲ್ಲಾ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲರು ಪ್ರೊ. ಎ.ಎಚ್ ಗಣೇಶ್ ಅಂಕಪುರ ಮಾತನಾಡಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ದಿಸೆಯಲ್ಲಿ ನಮ್ಮ ಸಂಘವು ಕಾರ್ಯಪ್ರವೃತ್ತವಾಗಿದೆ. ತಾವು ಓದುವ ಹವ್ಯಾಸವನ್ನು ಮೈಗೂಡಿಸಿಕೊಡು,1994 ರಿಂದಲೇ ಪೌರಾಣಿಕ ನಾಟಕಗಳಲ್ಲಿ ನಟಿಸುತ್ತಾ, ಬಂದಿರುವುದಾಗಿ ತಿಳಿಸಿದರು.
ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್, ಗಾಯಕಿ
ಕಲಾವತಿ ಮಧುಸೂಧನ್, ಕಲಾವಿದರು ಶ್ರೀ ಶಾರದ ಕಲಾ ಸಂಘದ ಅಧ್ಯಕ್ಷರು ಹೆಚ್. ಜಿ. ಗಂಗಾಧರ್, ಹಾಸನ ಎಂ.ಸಿ.ಇ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಡಾ.ಸಿ. ವಿ. ವೆಂಕಟೇಶ್, ಕದಂಬ ಸೈನ್ಯ ಹಾಸನ ತಾಲೂಕು ಅಧ್ಯಕ್ಷ ಕುಮಾರ್, ಆಲೂರು ತಾ ಅಧ್ಯಕ್ಷ ಪಟ್ನ ವೆಂಕಟೇಗೌಡರು ಉಪಸ್ಥಿತರಿದ್ದರು. ಜೆ.ಆರ್.ಶ್ರೀಕಾಂತ್ ಪ್ರಾರ್ಥಿಸಿದರು. ಶ್ರೀಮತಿ ಧನಲಕ್ಷ್ಮಿ,ಶ್ರೀ ಶಾರದ ಕಲಾಸಂಘ ಮತ್ತು ಶ್ರೀ ಬೆನಕ ಕಲಾಸಂಘದ ಮಹಿಳೆಯರು ಭಕ್ತಿಗೀತೆ, ಜಾನಪದ ಗೀತೆ ಹಾಡಿ ರಂಜಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


