ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ – ಗಣ್ಯರ ಸಮ್ಮಿಲನ
ಬೆಂಗಳೂರು:
ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧಗೊಳಿಸುವ ಉದ್ದೇಶದಿಂದ ಕರುನಾಡ ಮುಕುಟ ಕಲಾತಪಸ್ವಿ ಪ್ರತಿಷ್ಠಾನ ಟ್ರಸ್ಟ್ (ರಿ.) ವತಿಯಿಂದ ಖ್ಯಾತ ಕಲಾವಿದ ಡಾ. ರಾಜೇಶ್ ಅವರ
ಸ್ಮರಣಾರ್ಥ ಭಾವಪೂರ್ಣ “ಗೀತ-ನುಡಿ ನಮನ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಭವ್ಯ ಸಾಂಸ್ಕೃತಿಕ
ಸಂಭ್ರಮವು ಮೇ 10, ಭಾನುವಾರ ಸಂಜೆ 6.00 ಗಂಟೆಗೆ, ಬೆಂಗಳೂರಿನ ಶ್ರೀ ಶಿರಡಿ ಸಾಯಿಬಾಬಾ
ಮಂದಿರ, ಹಳೆ ಪೋಸ್ಟ್ ಆಫೀಸ್
ರಸ್ತೆ, ವಿದ್ಯಾರಣ್ಯಪುರದಲ್ಲಿ ನಡೆಯಲಿದೆ.
ಸಂಗೀತ
ಮತ್ತು ಸಂಸ್ಕೃತಿಯ ಸಂಗಮ
ಕಾರ್ಯಕ್ರಮದಲ್ಲಿ ಸ್ವಪ್ನ ಮತ್ತು ಮಂಜುನಾಥ್ ತಂಡದಿಂದ ಕನ್ನಡದ ಮಧುರ ಗೀತೆಗಳ ಗಾಯನ,
ಸಂಗೀತ ನಮನ ಹಾಗೂ ವೈವಿಧ್ಯಮಯ
ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ.
ಕಾರ್ಯಕ್ರಮವನ್ನು ಶ್ರೀ ಕೃಷ್ಣಬೈರೇಗೌಡರ, ಕಂದಾಯ ಸಚಿವರು, ಕರ್ನಾಟಕ
ಸರ್ಕಾರ ಉದ್ಘಾಟಿಸಲಿದ್ದು, ಡಾ. ಹಿರೇಮಠ್ ಬಿ.ಆರ್. ಅಧ್ಯಕ್ಷತೆ ವಹಿಸಲಿದ್ದಾರೆ. ಚಲನಚಿತ್ರ ನಟಿ ಹಾಗೂ ನಿರ್ದೇಶಕಿ ರಂಜನಿ ರಾಘವನ್ ಸೇರಿದಂತೆ ವೈದ್ಯಕೀಯ, ಸಿನೆಮಾ, ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರಗಳ ಹಲವು ಗಣ್ಯರು ವಿಶೇಷ
ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಾ.
ರಾಜೇಶ್ ಅವರ ಕಲಾ ಸೇವೆಯನ್ನು
ಸ್ಮರಿಸುವ ಈ ಕಾರ್ಯಕ್ರಮವು, ಹಂಸಜ್ಯೋತಿ
ಮುರಳೀಧರ್ ಅವರ
ಪ್ರಧಾನ ನಿರ್ವಹಣೆಯಲ್ಲಿ ನಡೆಯಲಿದ್ದು, ಯುವ ಪೀಳಿಗೆಗೆ ಸಾಂಸ್ಕೃತಿಕ
ಪ್ರೇರಣೆಯನ್ನು ನೀಡುವ ಮಹತ್ವದ ವೇದಿಕೆಯಾಗಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
