ಡಾ ಆರ್ ನಾಗರಾಜು ಇವರಿಗೆ ಕ್ರಿಯಾಶೀಲ ಲೇಖಕ ದತ್ತಿ ಪ್ರಶಸ್ತಿ

Upayuktha
0



ಬಾಗಲಕೋಟೆ: ತುಮಕೂರು ಜಿಲ್ಲೆ ಶಿರಾ ತಾಲೂಕು ಜೋಗಯ್ಯನಪಾಳ್ಯ ಗ್ರಾಮದ ವಾಸಿ ಪ್ರಸ್ತುತ ಕಳೆದ ಎರಡು ದಶಕಗಳಿಂದ  ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ವಿವಿಧ ಪದವಿ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ ಆರ್ ನಾಗರಾಜು ಇವರಿಗೆ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2025 ಸಾಲಿನ ಕ್ರಿಯಾಶೀಲ ಲೇಖಕ ದತ್ತಿ ಪ್ರಶಸ್ತಿಯನ್ನು ಕೊಡಮಾಡಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿಯವರು ತಿಳಿಸಿದ್ದಾರೆ.


ಡಾ ಆರ್ ನಾಗರಾಜು ಇವರು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 2000 ಕ್ಕೂ ಹೆಚ್ಚು ಅಂಕಣ ಬರಹಗಳನ್ನು ಬರೆಯುತ್ತಾ ಕ್ರಿಯಾಶೀಲರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇವರ ಅಂಕಣ ಬರಹಗಳ ಸಂಕಲನ "ಸುವರ್ಣಗದ್ದೆ" ಎಂಬ ಕೃತಿಯನ್ನು ಪ್ರಕಾಶನ ಮಾಡಲಾಗಿದೆ. ಹಾಗೆಯೇ ಇವರ ಕ್ರಿಯಾಶೀಲ ಬರಹವನ್ನು ಗುರುತಿಸಿ ಪ್ರಮೋದ ಶಂಕರ ತೆಗ್ಗಿ ಸೌಜನ್ಯ ತೆಗ್ಗಿ ಇವರ ಮದುವೆ ಸವಿ ನೆನಪಿನಲ್ಲಿ ಕೊಡ ಮಾಡಲಾಗುವ 2025 ನೇ ಸಾಲಿನ "ಕ್ರಿಯಾಶೀಲ ಲೇಖಕ ದತ್ತಿ ಪ್ರಶಸ್ತಿ" ಯನ್ನು ಸಹ ಇವರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಇವರು ಈಗಾಗಲೇ ಸೃಜನಶೀಲ ಮತ್ತು ಸಂಪಾದನಾ ಕ್ಷೇತ್ರದಲ್ಲಿ ಹತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಕೆಲಸವನ್ನು ಮಾಡುತ್ತಿದ್ದಾರೆ ಹಾಗಾಗಿ ಇಂಥವರನ್ನು ಗುರುತಿಸುತ್ತಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಮ್ಮೆ ಎಂದು ಅವರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top