ಪುತ್ತೂರು:
ಅಕ್ಷಯ ಪದವಿ ಕಾಲೇಜಿನ ರೆಡ್ ಕ್ರಾಸ್ ಘಟಕ, NSS ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಮತ್ತು ರೋಟರಿ ಬ್ಲಡ್ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ
ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಡಾ. ರಾಮಕೃಷ್ಣ ರಾವ್ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಇವರು ಒಂದು ಹನಿ ರಕ್ತವೂ ಎಷ್ಟು ಅಮೂಲ್ಯ ವೆಂಬುದು ಅದರ ಅವಶ್ಯಕತೆ ಬಲ್ಲವನಿಗೆ ಗೊತ್ತಿರುತ್ತದೆ ಹಾಗಾಗಿ ಇಂದು ರಕ್ತದಾನ ಮಾಡಲಿರುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಹಲವು ಜೀವಗಳನ್ನು ಉಳಿಸುವ ನಿಮ್ಮ ಮಹಾತ್ಕಾರ್ಯಕ್ಕೆ ಒಳಿತಾಗಲಿ ಎಂದು ಶುಭಹಾರೈಸಿದರು.
ಅತಿಥಿಗಳಾದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರೊ. ಶಶಿಧರ್ ಕಿನ್ನಿಮಜಲು ಮಾತನಾಡಿ ಪ್ರತಿ ರಕ್ತದಾನವು ತುರ್ತು ಪರಿಸ್ಥಿತಿಯಲ್ಲಿರುವ ಜೀವಗಳನ್ನು ಉಳಿಸಲು ನೆರವಾಗುತ್ತದೆ.ಇದು ದಾನಿಯ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಇಂದು ಅಕ್ಷಯ ಕಾಲೇಜಿನಲ್ಲಿ ನಡೆಯುತ್ತಿರುವ ಈ ರಕ್ತದಾನ ಶಿಬಿರವು ಅಕ್ಷಯ ವಿದ್ಯಾ ಸಂಸ್ಥೆಯು ಮಾಡುವ ಸಮಾಜಸೇವೆಯಾಗಿದೆ ಎನ್ನುತ್ತಾ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್. ಕೆ ಪಕ್ಕಳ ಮಾತನಾಡಿ ಜೀವವನ್ನು ಉಳಿಸಲು ನಾವು ವೈದ್ಯರಾಗಬೇಕಿಲ್ಲ, ರಕ್ತದಾನ ಮಾಡಿದರೆ ಸಾಕು, ರಕ್ತದಾನ ಮಾಡಿ ಜೀವ ಉಳಿಸಿದ ಸಂತೃಪ್ತಿ ಹೊಂದಬಹುದು. ಸ್ವಯಂಪ್ರೇರಿತ ರಕ್ತದಾನ ಆರೋಗ್ಯಕರ ಜೀವನಕ್ಕೆ ದಾರಿ. ಹಾಗಾಗಿ ಇಂದು ರಕ್ತದಾನ ಎಂಬ ಮಹಾದಾನದಲ್ಲಿ ನಾವು ಭಾಗಿಯಾಗಿದ್ದೇವೆ ಇದು ಪುಣ್ಯವೇ ಸರಿ. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಇಂತಹ ರಕ್ತದಾನದಲ್ಲಿ ಭಾಗಿಯಾಗುವಂತಾಗಲಿ ಎನ್ನುತ್ತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಅಕ್ಷಯ್, ಕಾಲೇಜಿನ ಆಡಳಿತ ಅಧಿಕಾರಿ ಅರ್ಪಿತ್ ಟಿ. ಎ ಮತ್ತು ಉಪಪ್ರಾಂಶುಪಾಲ ರಕ್ಷಣ ಟಿ. ಆರ್ , IQAC ನಿರ್ದೇಶಕಿ ರಶ್ಮಿ, NSS ನಿರ್ದೇಶಕರು ಉಪನ್ಯಾಸಕರು ಆಗಿರುವ ರಾಕೇಶ್ ಮತ್ತು ಮೇಘಶ್ರೀ ವಿದ್ಯಾರ್ಥಿ ಸಂಘದ ನಾಯಕನಾದ ತೃತೀಯ ಐಡಿ ವಿಭಾಗದ ರಾಕೇಶ್ ಉಪಸ್ಥಿತರಿದ್ದರು.
ರಕ್ತದಾನ ಶಿಬಿರದಲ್ಲಿ ಅಕ್ಷಯ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಬಿಸಿಎ ವಿಭಾಗದ ಮುಖ್ಯಸ್ಥೆ ದೀಕ್ಷಾ ಪ್ರಸ್ತಾವನೆ ಗೈದು, ಸ್ವಾಗತಿಸಿದರು, ಪ್ರಥಮ ಬಿಸಿಎ ವಿದ್ಯಾರ್ಥಿನಿ ವೀಕ್ಷ ಪ್ರಾರ್ಥಿಸಿ, ತೃತೀಯ ಐಡಿ ವಿದ್ಯಾರ್ಥಿ ರಾಕೇಶ್ ವಂದಿಸಿ, ಅಪೇಕ್ಷಾ ದ್ವಿತೀಯ ಬಿಎ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



