ಉಡುಪಿ: ಸಮಯದ
ಕೊರತೆಯನ್ನು ಅನುಭವಿಸುತ್ತಿರುವ ಇಂದಿನ ಜನಾಂಗಕ್ಕೆ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಅಲ್ಪಾವಧಿಯಲ್ಲಿ ಅಪಾರ
ಸಾಧನೆಯ ಬದುಕು ಕಟ್ಟಿಕೊಳ್ಳುವ ಮಾರ್ಗ ಸೂಚಿಸಿದ್ದಾನೆ ಎಂದು ಶೀರೂರು ಮಠದ
ವಿದ್ವಾನ್ ರಾಧೇಶ ಆಚಾರ್ಯ ಹೇಳಿದರು.
ಪರ್ಯಾಯ
ಶೀರೂರು ಶ್ರೀಕೃಷ್ಣಮಠ ಆಶ್ರಯದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಮೇ 24 ಭಾನುವಾರ ರಾಜಾಂಗಣದಲ್ಲಿ ನಡೆದ ಭಗವದ್ಗೀತೆ-ಒಂದು
ವಿಶ್ಲೇಷಣೆ' ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಒತ್ತಡದ ಬದುಕಿನಲ್ಲಿ ಸಮಯದ ಕೊರತೆ ಕಾಡುತ್ತಿದ್ದು
ಅದರ ನಿವಾರಣೆಗೆ ಸಾಹಿತ್ಯಾಸಕ್ತರು ಚುಟುಕು ಸಾಹಿತ್ಯವನ್ನು ಅಳವಡಿಸಿಕೊಳ್ಳಬೇಕಾಗಿದೆ. ಚುಟುಕು ಸಾಹಿತ್ಯಕ್ಕೆ ಗೀತೆಯೇ ಮೂಲ ಎಂದವರು ಅಭಿಪ್ರಾಯ
ವ್ಯಕ್ತಪಡಿಸಿದರು.
ಮಂಗಳೂರಿನ
ಡಾ. ಸುರೇಶ ನೆಗಳಗುಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಭಗವದ್ಗೀತೆ ಬರಿಯ ಅಕ್ಷರ ಪುಂಜವಲ್ಲ
ಅದೊಂದು ಜೀವನ ನಿರ್ವಹಣೆಯ ಮಾರ್ಗದರ್ಶಿ
ಎಂದು ಸ್ವರಚಿತ ಗೀತೆಯ ಮಹತ್ವ ಸಾರುವ ಗಜಲ್ ವಾಚಿಸಿದರು.
ಹಿರಿಯ
ಚಿಂತಕರಾದ ಶಿರಸಿಯ ಗಣಪತಿಭಟ್ಟ ವರ್ಗೀಸರ ಮತ್ತು ಕೊಳ್ಳಪ್ರ ಗೋವಿಂದ ಭಟ್ಟ ಉಪನ್ಯಾಸ ನೀಡಿದರು.
ಕಚುಸಾಪ ಕೇಂದ್ರ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷ ಪ್ರೊ.ಜಿ.ವಿ.
ನಾಯಕ ಸ್ವಾಗತಿಸಿದರು. ಗ್ರಾಮೀಣ ಘಟಕ ಅಧ್ಯಕ್ಷ ರಾಜು
ಎನ್.ಆಚಾರ್ಯ ಪರಿಚಯಿಸಿದರು. ಮಂಗಳೂರು ಘಟಕದ ಜಯಾನಂದ ಪೆರಾಜೆ,
ಡಾ.ಶಾಂತಾ ಪುತ್ತೂರು. ರೇಖಾ ಸುದೀಪ ರಾವ್,
ಸೋಮಶೇಖರ ಶೆಟ್ಟಿ, ಡಾ.ಸಿದ್ದಕುಮಾರ ಘಂಟಿ,
ಶೇಖರ ಗೌಡ ಪಾಟೀಲ, ಶ್ರೀಕಾಂತ
ಕೆ.ವಿ. ಮೊದಲಾದವರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


