ಸುರತ್ಕಲ್:
ಅದ್ಭುತವಾದ ಪಾಂಡಿತ್ಯ, ತಾಳ ಪ್ರಜ್ಞೆ ಮತ್ತು
ವಿನಯ ಶೀಲ ವ್ಯಕ್ತಿತ್ವದ ಶ್ರೇಷ್ಟ
ಸಂಗೀತ ಗುರು ಪಡುಬಿದ್ರೆ ಮಾಣಿ
ಸುಬ್ರಾಯ ಭಾಗವತರ ನೆನಪು ಸದಾ ನಮ್ಮಲ್ಲಿರಬೇಕು. ಶ್ರೇಷ್ಠ
ಗಾಯಕ ಚೆಂಬೈ ವೈದ್ಯನಾಥ ಭಾಗವತರ್ ಅವರ ನೇರ ಶಿಷ್ಯರಾದ
ಮಾಣಿ ಭಾಗವತರ್ ದಕ್ಷಿಣ ಕನ್ನಡದ ಚೆಂಬೈ ಎಂದೇ ಪ್ರಖ್ಯಾತರಾಗಿದ್ದು ಕರಾವಳಿ
ಕರ್ನಾಟಕದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲಿಕೆ ಮತ್ತು ಪ್ರಸರಣಕ್ಕೆ ಶ್ರಮಿಸಿದವರು ಎಂದು ಉಡುಪಿಯ ರಂಜಿನಿ
ಮೆಮೋರಿಯಲ್ ಟ್ರಸ್ಟ್ ನ ಸ್ಥಾಪಕ ಹಾಗೂ
ಸಂಗೀತ ವಿಮರ್ಶಕ ಪ್ರೊ. ವಿ. ಅರವಿಂದ ಹೆಬ್ಬಾರ್
ನುಡಿದರು.
ಅವರು
ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ವತಿಯಿಂದ
ಸುರತ್ಕಲ್ ನ ಅನುಪಲ್ಲವಿಯ ಶ್ರೀ
ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಪಡುಬಿದ್ರೆ ಸುಬ್ರಾಯ ಮಾಣಿ ಭಾಗವತರ್ ನೆನಪಿನ
ಸಂಗೀತ ಕಛೇರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಶ್ರೀ
ನಾಟ್ಯಾಂಜಲಿ ಅಕಾಡೆಮಿ ಯ ನಿರ್ದೇಶಕ ವಿದ್ವಾನ್
ಚಂದ್ರಶೇಖರ ನಾವಡ ಮಾತನಾಡಿ ಮಾಣಿ
ಭಾಗವತರ್ ಪಾರಂಪರಿಕ ಗುರುಕುಲ ಕ್ರಮದ ಶಿಸ್ತುಬದ್ಧ ಗುರುಗಳಾಗಿದ್ದರು ಎಂದರು.
ಪಿ.
ನಿತ್ಯಾನಂದ ರಾವ್ ಅವರಿಂದ ನಾಮ
ಸಂಕೀರ್ತನ, ದೇವರ ನಾಮ, ಯಕ್ಷಗಾನ
ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು. ಚಿನ್ಮಯ ಕೃಷ್ಣ, ಅಭಿಷೇಕ್, ವಿದ್ವತ್ ರಾವ್, ಕೃಷ್ಣಾಕುಮಾರಿ ಸಹ ಗಾಯಕರಾಗಿ ಮತ್ತು
ವಯಲಿನ್ ನಲ್ಲಿ ಸುಪ್ರಿತಾ ಪಿ.ಎಸ್. ಪುತ್ತೂರು,
ಮೃದಂಗದಲ್ಲಿ ಸಂದೀಪ್ ರಾಮಮೂರ್ತಿ, ಎನ್.ಐ.ಟಿ.ಕೆ, ಸುರತ್ಕಲ್, ಮದ್ದಳೆಯಲ್ಲಿ
ಅಚಿಂತ್ಯ ಕೃಷ್ಣ ಪುತ್ತೂರು, ತಂಬೂರದಲ್ಲಿ ಸುಜಾತ ಎಸ್. ಭಟ್, ಸುರತ್ಕಲ್
ಸಹಕರಿಸಿದರು.
ವಿದುಷಿ
ವಿದ್ಯಾ ಮನೋಜ್ ಕಲ್ಲಡ್ಕ ಅವರ ಶಿಷ್ಯೆ ಪ್ರಣಮ್ಯ,
ಬಿ.ಸಿ. ರೋಡ್ ಅವರಿಂದ
ಭರತನಾಟ್ಯ ಪ್ರದರ್ಶನ ನಡೆಯಿತು.
ಹಿರಿಯ
ನಾದಸ್ವರ ಕಲಾವಿದ ನಾಗೇಶ್ ಎ. ಬಪ್ಪನಾಡು, ಶ್ರೀ
ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ವಿದುಷಿ ಶಾರದಾ ಮಣಿ ಶೇಖರ್, ಡಾ.
ಸತೀಶ್ ರಾವ್, ಶ್ರೀನಿವಾಸ ಭಾಗವತರ್, ಪಡುಬಿದ್ರೆ, ಆನಂದ ರಾವ್, ವಿಭು
ರಾವ್, ನಮ್ಮ ಟಿ. ವಿ.
ನಿರೂಪಕ ಪ್ರಕಾಶ್ ಪುತ್ತೂರು ಉಪಸ್ಥಿತರಿದ್ದರು.
ಕೃಷ್ಣಮೂರ್ತಿ
ಸ್ವಾಗತಿಸಿದರು. ಪುಷ್ಪ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪಿ.
ನಿತ್ಯಾನಂದ ರಾವ್ ಮತ್ತು ಕೃಷ್ಣಾಕುಮಾರಿ
ಯವರನ್ನು ಸನ್ಮಾನಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


