ವಿಜ್ಞಾನಿ ಡಾ.ರಾಮ ಬಿ. ಭಟ್ ನಿಧನ

Upayuktha
0

 


 

ಕುಂದಾಪುರ: ಕಾಸರಗೋಡಿನ ಧರ್ಮತ್ತಡ್ಕದಲ್ಲಿ ಜನಿಸಿ ಜಗತ್ತಿನ ಮಹಾನ್ ವಿಜ್ಞಾನಿಯಾಗಿ ಬೆಳಗಿದ ಡಾ. ರಾಮ ಬಿ. ಭಟ್ (ಲೇಖಕಿ ಪಾರ್ವತಿ ಜಿ.ಐತಾಳ್ ಅವರ ಅಣ್ಣ) ನಿನ್ನೆ ವಯೋಸಹಜ ಅಸ್ವಸ್ಥತೆಯಿಂದ ಕೆನಡಾದ ಟೊರೆಂಟೋದಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

 

ಸುರತ್ಕಲ್ ಕೆ.ಆರ್..ಸಿ.ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಬಿ.., ಮದರಾಸಿನ ..ಟಿ.ನಲ್ಲಿ ಎಂ.ಟೆಕ್ ಮತ್ತು 'ನಾದ ಮತ್ತು ಕಂಪನ' ವಿಷಯದಲ್ಲಿ ಡಾಕ್ಟರೇಟ್ ಪಡೆದ ಇವರು ತದನಂತರ ತಿರುವನಂತಪುರಂ ಸಮಿಪದ ತುಂಬಾ ರಾಕೆಟ್ ಸೆಂಟರ್ ನಲ್ಲೂ ಅಮೆರಿಕಾದ 'ನಾಸಾ'ದಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿ 1980ರಲ್ಲಿ ಕೆನಡಾದ ಮಾಂಟ್ರಿಯಲ್ ಕಾಂಕಾರ್ಡಿಯಾ ಯುನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡೀನ್ ಆಗಿ ಸೇರಿದರು.

 

ನೂರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ನೂರಾರು ಅಂತರ್ರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದರು. 'ನಾದ & ಕಂಪನ' ವಿಷಯದ ಮೇಲೆ ಇವರು ಬರೆದ ಇನ್ನೂರಕ್ಕೂ ಮಿಕ್ಕಿದ ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ.

 

ವಿಜ್ಞಾನ ಮಾತ್ರವಲ್ಲದೆ ಬಾಳಿಕೆ ರಾಮ ಭಟ್ ಅನ್ನುವ ಹೆಸರಿನಲ್ಲಿ ಓರ್ವ ಸಾಹಿತಿಯಾಗಿಯೂ ಆಗಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕವನ ಸಂಕಲನ 'ನಗೆಗೆ ಇರಲಿ ಬಾಳಿಕೆ'(ಪ್ರಕನ್ನಡ ಸಾಹಿತ್ಯ ಪರಿಷತ್ತುವಿಜ್ಞಾನ ಲೇಖನ 'ನಾದ' (ಪ್ರ:ನವಕರ್ನಾಟಕ ಪಬ್ಲಿಕೇಶನ್ಸ್) ಅನುಭವ ಕಥನ' ಬಾಳಿಕೆಯಿಂದ ಕೆನಡಾಕ್ಕೆ' (ಜನಪ್ರತಿನಿಧಿ ಪ್ರಕಾಶನ), ಇಂಗ್ಲಿಷ್ ನಲ್ಲಿ 'ದಿ ಡಿವೈನ್ ಆಂಜನೇಯ' ಮತ್ತು 'ಝುವಾಂಗ್ ಜಾಂಗ್ಸ್ ಜರ್ನಿ ಟು ವೆಸ್ಟ್' ಎಂಬ ಎರಡು ಕಾದಂಬರಿಗಳು (ಆದಿತ್ಯ ಪಬ್ಲಿಕೇಶನ್ಸ್, ಡೆಲ್ಲಿ) ಇವರ ಕೃತಿಗಳು.

 

ರಾಮ ಭಟ್ಟರು ಪತ್ನಿ ಪಾರ್ವತಿ ಮತ್ತು ಮಕ್ಕಳಾದ ಡಾ.ಮಮತಾ ಭಟ್ ಮತ್ತು ಡಾ.ಅಪರ್ಣಾ ಭಟ್, ಬಂಧುಗಳು ಮತ್ತು ಅಪಾರ ಶಿಷ್ಯವರ್ಗವನ್ನು ಬಿಟ್ಟು ಅಗಲಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top