ಮೂಕ ಪ್ರಾಣಿಗಳಿಗೂ ಬದುಕುವ ಹಕ್ಕಿದೆ; ಅವುಗಳನ್ನು ಪ್ರೀತಿಸೋಣ..!

Upayuktha
0

 


ನುಷವೆನ್ನುವವನು ಸ್ವಾರ್ಥಿ ಎಂದು ಹೇಳುವ ಕಾಲದಲ್ಲಿ, ಕೆಲವರು ಪ್ರಾಣಿಗಳ ಬಗ್ಗೆ ಪ್ರೀತಿ ತೋರುವವರಿದ್ದಾರೆಮನುಷ್ಯನೊಬ್ಬನೇ ಜೀವ ಇರುವ ಪ್ರಾಣಿ ಎಂದು ಭಾವಿಸುವ ಮನುಷ್ಯರು  ಇತರೆ ಪ್ರಾಣಿಗಳು ಭೂಮಿಯಲ್ಲಿವೆ ಎಂಬುವುದನ್ನೇ ಮರೆತಿದ್ದಾರೆ. ಮೂಕ ಪ್ರಾಣಿಗಳಿಗೂ ನೋವಿದೆ, ಅವುಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಬುದ್ಧಿಜೀವಿ ಎನಿಸಿಕೊಂಡಿರುವ ಮನುಷ್ಯ ಎಲ್ಲೋ ಒಂದು ಕಡೆ ಮರೆತುಬಿಟ್ಟಿದ್ದಾನೆ.

 

ನಾವು ಸಾಕುವ ನಾಯಿ ಬೆಕ್ಕಿಗೆ ಮಾತ್ರ ಬದುಕನ್ನು ಆನಂದಿಸುವ ಹಕ್ಕಿದೆ ಎಂದು ತಿಳಿಯುವ ನಾವುಗಳು ಸುತ್ತಮುತ್ತ ಪ್ರಕೃತಿಯನ್ನು ದೇವರೆಂದು ನಂಬಿ ಹಾರುತ್ತಾ ಕುಣಿಯುತ್ತ ಇರುವ ಅದೆಷ್ಟೋ ಪ್ರಾಣಿಗಳು ಅದೆಷ್ಟೋ ಪಕ್ಷಿಗಳು , ಅದೆಷ್ಟು ಜಲಚರ ಜೀವಿಗಳು ಕ್ರಿಮಿ ಕೀಟಗಳು  ಮನುಷ್ಯನ ದೆಸೆಯಿಂದ ನರಳುತ್ತಿವೆ. ನಾವುಗಳು ಬುದ್ಧಿಜೀವಿಗಳಾಗಿ , ಬುದ್ಧಿ ಇರುವವರಂತೆ ವರ್ತಿಸಬೇಕು, ಅಲ್ಪ ಬುದ್ಧಿಯ ಮೂಕ ಪ್ರಾಣಿಗಳ ಜೊತೆ ಪ್ರೀತಿಯಿಂದ ವರ್ತಿಸಬೇಕು. ಕರುಣೆಯಿಂದ ಕಾಣಬೇಕು.

 

ಭೂಮಿಯಲ್ಲಿ ಎಷ್ಟೋ ಪ್ರಾಣಿಗಳಿದ್ದವು ಆದರೆ ಅದೆಷ್ಟೋ ಪ್ರಾಣಿಗಳು ಮಾನವನ ಅಮಾನವೀಯ ಚಟುವಟಿಕೆಗಳಿಗೆ ಸಿಲುಕಿ ಬಲಿಯಾಗಿವೆ ಅಲ್ಲದೆ ಎಷ್ಟೋ ಜೀವಿಗಳು ತಮ್ಮ ಸಂತತಿಯನ್ನು ಕಳೆದುಕೊಂಡು ಬಿಟ್ಟಿವೆ. ತಮ್ಮಷ್ಟಕ್ಕೆ ತಾವಿರುವ ಪ್ರಾಣಿಗಳಿಗೂ ಮನುಷ್ಯನೆಂಬ ಬುದ್ಧಿವಂತ ಬದುಕುವ  ಅವಕಾಶ ನೀಡುತ್ತಿಲ್ಲ. ಭೂಮಿಯಲ್ಲಿರುವ ಪ್ರತಿ ಜೀವಿಯು ಪ್ರಕೃತಿಯ ಕೊಡುಗೆ ಹಾಗಿರುವಾಗ ಅದರ ಅಳಿವು ಮತ್ತು ಉಳಿವನ್ನು ಮಾನವ ನಿರ್ಧರಿಸುವುದು ಸರಿಯಲ್ಲ.

 

ನಮ್ಮ ಪಾಲಿಗೆ ನಾವು ಸಾಕಿರುವ ನಾಯಿ ಬೆಕ್ಕು ಮಾತ್ರ  ಮೂಕ ಪ್ರಾಣಿಗಳು, ಮತ್ತು ಅವುಗಳ ಬಗ್ಗೆ  ಮಾತ್ರ  ಪ್ರೀತಿ ತೋರಬೇಕು  ಎಂದು ಭಾವಿಸುತ್ತೇವೆ. ಆದರೆ ಬೀದಿಯಲಿ ಅನಾಥವಾದ ಪ್ರಾಣಿಗಳು, ಪಂಜರದೊಳಗೆ  ಕೂಡಿಟ್ಟು   ಸಾಕುವ ಪಕ್ಷಿಗಳು ನಮ್ಮ ಕಣ್ಣಿಗೆ ಕಾಣದಾಗುತ್ತದೆ ಎಲ್ಲಾ ಜೀವಿಗಳಿಗೆ ಬದುಕುವ ಹಕ್ಕಿದೆ ನಾವು ಬದುಕೋಣ ,ಬದುಕಲು ಬಿಡೋಣ .ಪ್ರಾಣಿಗಳ ಬಗ್ಗೆ ದಯೆ ತೋರೋಣ. ಮೂಕ ಪ್ರಾಣಿಗಳಿಗೆ ಪ್ರೀತಿ ತೋರಿದರೆ. ಅದೊಂದು ಪುಣ್ಯವೇ ಸರಿ.

    


     ಹರ್ಷಿತ
ಶಿಶಿಲ 

     ಪತ್ರಿಕೋದ್ಯಮ ವಿಭಾಗ

     ಎಸ್ ಡಿ ಎಂ ಸಿ ಉಜಿರೆ 



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top