ಜೀವನದಲ್ಲಿ ಸದಾ ಪ್ರೀತಿಸುವ ಮಾಣಿಕ್ಯ ತಾಯಿ

Upayuktha
0

  




ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಎಂಬ ಹಿರಿಯರ ಗಾದೆಯೇ ಇದೆ, ಇದು ನಿಜವೂ ಕೂಡ ಏಕೆಂದರೆ ನಮ್ಮ ಜೀವನದಲ್ಲಿ ಮೊದಲ ಗುರುವೇ ನಮ್ಮ ತಾಯಿ. ಅಂದರೆ, ಬರಿ , , , ಕಲಿತ ತಕ್ಷಣ ನಾವು ಜೀವನದಲ್ಲಿ ವಿದ್ಯೆ ಕಲಿಯುವುದಿಲ್ಲ, ನಮ್ಮ ವಿದ್ಯೆಯ ಜೊತೆ ಜೊತೆಗೆ ಸಂಸ್ಕೃತಿ, ಸಂಸ್ಕಾರ ಕೂಡ ಇದ್ದರೆ, ವಿದ್ಯೆಗೆ ಒಂದು ಹೆಸರು. ಎಲ್ಲಾ ರೀತಿಯ ಸಂಸ್ಕಾರವನ್ನು ನಮ್ಮ ಅಮ್ಮ ನಾವು ಚಿಕ್ಕವರಿರುವಾಗಲೇ ಕಲಿಸುತ್ತ ಬಂದಿರುತ್ತಾಳೆ.

 

ತಾಯಿಯ ಮುಂದೆ ಎಲ್ಲವೂ ಶೂನ್ಯ, ತಾಯಿಯ ಪ್ರೀತಿಯ ಮುಂದೆ ಯಾವ ಪ್ರೀತಿಯು ಶಾಶ್ವತ ಅಲ್ಲ. ಎಲ್ಲವನ್ನು ಕಳೆದುಕೊಂಡರು ತನ್ನ ಪ್ರೀತಿಯನ್ನು ಸದಾ ನಿರಾಳವಾಗಿ ನೀಡುವ ಏಕೈಕ ಜೀವಿ ಎಂದರೆ ಅಮ್ಮ. ಎಷ್ಟೇ ಕಷ್ಟ ಬಂದರೂ ತನಗೆ ಏನು ಆಗಿಲ್ಲ ಎಂದು ತೋರಿಸುವ ಜೀವಿ. ಎಷ್ಟೇ ಕೆಲಸದಲ್ಲೂ ಮಗ್ನಳಾದರೂ ತನ್ನ ಮಕ್ಕಳ ಕೆಲಸವನ್ನು ಮೊದಲು ಮಾಡಿ ಮುಗಿಸುವವಳೇ ಹೆತ್ತ ತಾಯಿ.

 

ಪ್ರೀತಿ ಎಂಬುದು ತಾನಾಗಿ ಬರಬೇಕೇ ಹೊರತು, ಯಾವುದೇ ರೀತಿಯ ಬಲವಂತದಿಂದ ಪಡೆಯಲಾಗದು, ಅಂತಹ ಪ್ರೀತಿಯನ್ನು ತೋರಿಸುವವಳೇ ನಮ್ಮ ಅಮ್ಮ. ಅವಳಿಗೆ ನಾವು ಎಂದಿಗೂ ಚಿರಋಣಿ. ಯಾರ ಋಣ ಬೇಕಾದರೂ ತೀರಿಸಬಹುದು ಆದರೆ ಹೆತ್ತ ತಾಯಿಯ ಋಣವನ್ನು ತೀರಿಸಲು ಅಸಾಧ್ಯ. ಹಾಗಾಗಿ ತಮ್ಮ ತಂದೆ - ತಾಯಿಯನ್ನು ತಲೆ ತಗ್ಗಿಸದಂತೆ ನೋಡಿಕೊಂಡು ತಲೆ ಎತ್ತಿಕೊಂಡು ನಡೆಯುವಂತ ಸಂಸ್ಕೃತಿಯನ್ನು ಜೀವನದಲ್ಲಿಯೇ ಅಳವಡಿಸಿಕೊಳ್ಳೋಣ.



 

ಸಹನಾ ಪೂಜಾರಿ 

ಎಸ್. ಡಿ. ಎಮ್ ಕಾಲೇಜು

ಉಜಿರೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top