ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಕಾಸರಗೋಡು- ದಶಮಾನ ಸಂಭ್ರಮ ಸಂಪನ್ನ

Upayuktha
0


ಕಾಸರಗೋಡು: ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಕಾಸರಗೋಡು ವತಿಯಿಂದ ದಶಮಾನ ಸಂಭ್ರಮ ಕಾರ್ಯಕ್ರಮ ಭಾನುವಾರ (ಏ.19) ಸ್ಕಂದ ಪ್ಲಾಸ್ಟಿಕ್ಸ್ ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಎಡನೀರು ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶಿಷ್ಯ ಶ್ರೀ ತೋಟಕಾಚಾರ್ಯ ಪರಂಪರಾಗತ ಶ್ರೀ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.


ಯಕ್ಷತೂಣೀರ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆಗೈದು, ಸಮಾಜಕ್ಕೆ ಮಾದರಿಯಾದವರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಶ್ರೀಗಳು, ಯಕ್ಷತೂಣೀರ ಸಂಸ್ಥೆ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವ ಕಾರ್ಯ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಇದೇ ಸಂದರ್ಭದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ "ಅಪರಂಜಿ" ಅನಾವರಣಗೊಳಿಸಿದರು.

ಸಾಧನಾ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿಗೆ ಪೂಜ್ಯ ಶ್ರೀಗಳು ಯಕ್ಷತೂಣೀರ ಸಂಪ್ರತಿಷ್ಠಾನದ ದಶಮಾನದ ಸಂಭ್ರಮದ ಶುಭಸಂದರ್ಭದಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯು ಫಲಪುಷ್ಪ, ಹಾರ, ಪ್ರಶಸ್ತಿ ಫಲಕ, ಪುಸ್ತಕಗೌರವ ಹಾಗೂ ಗೌರವಧನಗಳನ್ನೊಳಗೊಂಡಿತ್ತು,


ಗೋಪಾಲಕೃಷ್ಣ ಭಟ್ ತುಪ್ಪೆಕಲ್ಲು ವೈದಿಕ ಕ್ಷೇತ್ರ, ತೆಕ್ಕೆಕರೆ ಶಂಕರನಾರಾಯಣ ಭಟ್- ಕನ್ನಡ ನಾಡು ಸಮಗ್ರಸೇವೆ, ವಿಷ್ಣು ಭಟ್ ಬಜೆ ಪಾಕಶಾಸ್ತ್ರ,  ಡಾ. ಕೆ.ಎಂ.ಕೆ. ಭಟ್ ಕಾಟಿಪಳ್ಳ- ವೈದ್ಯಕೀಯ, ಯತೀಶ್ ಕುಮಾರ್ ರೈ- ಶಿಕ್ಷಣ ಹಾಗೂ ಕಲೆ, ಗಣಪತಿ ಭಟ್ ಮಧುರಕಾನನ- ಕೃಷಿ ಮತ್ತು ಸಾಹಿತ್ಯ, ಹರೀಶ್ ಆದೂರು- ಪತ್ರಿಕೋದ್ಯಮ ಮತ್ತು ಸಾಹಿತ್ಯ, ಅನುಪಮಾ ರಾಘವೇಂದ್ರ ಉಡುಪುಮೂಲೆ- ಭರತನಾಟ್ಯ ಮತ್ತು ಸಾಹಿತ್ಯ, ರಾಕೇಶ್ ಗೋಳಿಯಡ್ಕ- ಪ್ರಸಾದನ ಕಲೆ, ಶ್ರೀಲಕ್ಷ್ಮೀ ಕುಳೂರು- ಚಿತ್ರಕಲೆ ಈ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.


ಪೆರಡಂಜಿ ಸ್ಮರಣೆಯನ್ನು ವ್ಯಂಗ್ಯಚಿತ್ರಗಾರ ವೆಂಕಟ್ ಭಟ್ ಎಡನೀರು, ಅಪರಂಜಿ ಕೃತಿ ಪರಿಚಯವನ್ನು ನಾ. ಕಾರಂತ ಪೆರಾಜೆ ನಡೆಸಿದರು. ಇದೇ ಸಂದರ್ಭ ಯಕ್ಷಗಾನದ ಭಾಗವತರಾದ ವೆಂಕಟ್ರಮಣ ಭಟ್ ತಲ್ಪಣಾಜೆ ಅವರಿಗೆ ಪೆರಡಂಜಿ ಪ್ರಶಸ್ತಿ, ಯಕ್ಷಗಾನ ಕಲಾವಿದ ವಿಶ್ವನಾಥ ಭಟ್ ಬಜೆ, ರಾಜೇಶ್ವರಿ ಈಶ್ವರ ಭಟ್ ಅವರಿಗೆ ಯಕ್ಷತೂಣೀರ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಯಕ್ಷತೂಣೀರ ಸಂಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲ ಎಂ. ನಾರಾಯಣ ಭಟ್ ಉಪಸ್ಥಿತರಿದ್ದು ಶುಭಾಶಂಸನೆಯಿತ್ತರು. ಕಾರ್ಯದರ್ಶಿ ಮುರಳೀಕೃಷ್ಣ ಸ್ಕಂದ ಸ್ವಾಗತಿಸಿದರು. ಗೀತಾ ಪ್ರಾರ್ಥನೆ ಹಾಡಿದರು. ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮಮೂರ್ತಿ, ಹರಿಕೃಷ್ಣ ಭಟ್, ಗೋವಿಂದ ಭಟ್ ಬಳ್ಳಮೂಲೆ ಸನ್ಮಾನ ಪತ್ರ ವಾಚಿಸಿದರು. ಕೃಷ್ಣ ಭಟ್ ಅಡ್ಕ ವಂದಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಧ್ವಿ ಕೃಷ್ಣ ವಯನಾಡು, ಅನ್ವಿತಾ ಪೆರಡಂಜಿ ಅವರಿಂದ 'ನೃತ್ಯಾರ್ಪಣ' ಕಾರ್ಯಕ್ರಮಮತ್ತು ಚಿತ್ರಲಕ್ಷ್ಮಿ ಅವರಿಂದ ಪ್ರತ್ಯಕ್ಷ ದಾರಚಿತ್ರ ಪ್ರಸ್ತುತಿಯೂ ಜನಮನ ಸೆಳೆಯಿತು. ಬಳಿಕ ಪ್ರತಿಷ್ಠಾನದ ಹಾಗೂ ಅತಿಥಿ ಕಲಾವಿದರಿಂದ 'ಮೇದಿನಿ ನಿರ್ಮಾಣ-ಮಹಿಷ ವಧೆ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top