ಮಂಗಳೂರು: ಭಜನೆ ಹಾಡುಗಳನ್ನು ಯಕ್ಷಗಾನದ ಧಾಟಿಯಲ್ಲಿ ಶ್ರಾವ್ಯವಾಗಿ ತಾಳ-ಲಯ ಭರಿತವಾಗಿ ಹಾಡಲು ಸಾಧ್ಯ ಮತ್ತು ಅದು ಪ್ರೇಕ್ಷಕರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಯಕ್ಷಗಾನ ರಂಗದಲ್ಲಿ ಬೇರೆ ಬೇರೆ ರೀತಿಯಲ್ಲಿ ಆವಿಷ್ಕಾರಗಳು ನಡೆಯುತ್ತಿರುತ್ತವೆ. ಅಂತಹುದ್ದರಲ್ಲಿ ಈ ಯಕ್ಷ ಭಜನೆಯೂ ಒಂದು ಸಾಧ್ಯತೆ" ಎಂದು ವಿಪ್ರವೇದಿಕೆಯ ಉಪಾಧ್ಯಕ್ಷ ತೆಕ್ಕೆಕೆರೆ ವಿಶ್ವೇಶ್ವರ ಭಟ್ ರವರು ವಿಪ್ರ ವೇದಿಕೆಯ ತಿಂಗಳ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುತ್ತಾ ಹೇಳಿದರು.
ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯರು ಕಲಾವಿದರನ್ನು ಪರಿಚಯಿಸಿದರು. ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ, ವಿದ್ಯಾಗಣೇಶ ರಾವ್, ಪ್ರಭಾವತಿ ಮಡಿ, ಬಿ. ನೈನಾ ಹರೀಶ್ ಕಲಾವಿದರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಕಿಶೋರ ಕೃಷ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ನಿರ್ವಹಿಸಿ ವಂದಿಸಿದರು. ರೂಪಕಲಾ ಹಾಗೂ ರಾಮಚಂದ್ರ ಭಟ್ ಪ್ರಾಯೋಜಕರಾಗಿದ್ದರು.
ಬಳಿಕ ಗೋಪಾಲಕೃಷ್ಣ ಭಟ್ ಗುತ್ತಿಗಾರ್ ಮತ್ತು ಪಾವನಾ ಆರ್. ಅವರಿಂದ ಯಕ್ಷ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು. ಹಿಮ್ಮೇಳದಲ್ಲಿ ಗುತ್ತಿಗಾರ್ ಬಾಲಸುಬ್ರಹ್ಮಣ್ಯ ಭಟ್, ಶೈವಿನ್ ಗೋಳಿಜೋರ, ವರ್ಕಾಡಿ ಮಧುಸೂದನ ಅಲೆವೂರಾಯ ಸಹಕಾರವಿತ್ತರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

