ಪಣಿಯಾಡಿ ನೆನಪು: ಬೋಳೂರಿನಲ್ಲೊಂದು ಚಿಂತನೆ, ಕವಿಗೋಷ್ಟಿ

Upayuktha
0


ಮಂಗಳೂರು: ತುಳುವರು ತಮ್ಮ ನಾಡು ನುಡಿ, ಸಾಹಿತ್ಯ ಸಂಸ್ಕೃತಿಗಳ ಕುರಿತಾಗಿ ಎಸ್. ಯು. ಪಣಿಯಾಡಿ ಹಾಕಿಕೊಟ್ಟ ತುಳುವ ನಾಡು ನುಡಿಯ ಬಗ್ಗೆ ಚಳುವಳಿಯ ಆಶಯಗಳನ್ನು ಅರಿತು ಕೊಳ್ಳಬೇಕು ಎಂದು ಹಿರಿಯ ತುಳು ಅಕಾಡೆಮಿ ಪ್ರಶಸ್ತಿ ವಿಜೇತ ಹಾಗೂ ಕನ್ನಡ ಸಾಹಿತಿ ಮತ್ತು ಪತ್ರಕರ್ತ ಯಶವಂತ ಬೋಳುರು ನುಡಿದರು. ಅವರು ತುಳು ಚಳುವಳದ ನೇತಾರ ಸಾಹಿತಿ ಎಸ್. ಯು. ಪಣಿಯಾಡಿಯವರ ಜನ್ಮದಿನದ ನೆನಪಿನಲ್ಲಿ ಮಂಗಳೂರಿನ ಕವಿ ಮಿತ್ರರು ಸುಲ್ತಾನ ಬತ್ತೇರಿಯ ಬೋಳೂರು ಬೇ ನಲ್ಲಿ ನಡೆದ ಪಣಿಯಾಡಿ ನೆನಪು ಮತ್ತು ತುಳು ಕವಿಗೋಷ್ಠಿಯಲ್ಲಿ ಮಾತನಾಡಿದರು.


ಪಣಿಯಾಡಿ ಅವರ ಬದುಕು ಮತ್ತು ಬರಹಗಳು ಹಾಗೂ ಅವರ ಕಾಲಮಾನದ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊಫೆಸರ್ ಕೃಷ್ಣಮೂರ್ತಿ ಅವರು ಸವಿವರವಾಗಿ ಮಾತನಾಡಿದರು.


ತುಳು ಚಳುವಳಿಗಾರ ಎಸ್ ಯು ಪಣಿಯಾಡಿ ಅವರ ನೆನಪನ್ನು ಬಿಚ್ಚಿದ ಸುರತ್ಕಲ್ ನ ಪ್ರೊಫೆಸರ್ ಕೃಷ್ಣ ಮೂರ್ತಿಯವರು ಪಣಿಯಾಡಿಯವರ ಅಮೂಲಾಗ್ರ ಜೀವನ ಗಾಥೆಯನ್ನು ವಿವರಿಸಿ ಸಂಚಲನ ಮೂಡಿಸಿದರು. ಪಣಿಯಾಡಿ ಅವರ ಹೆಸರಿನಲ್ಲಿ ಇಂದಿಗೂ ದತ್ತಿ ಪ್ರಶಸ್ತಿ ಕೊಡುತ್ತಾ ಇರುವುದು ಶ್ಲಾಘನೀಯ ಎಂದರು.


ಸಾಹಿತಿ ರಘು ಇಡ್ಕಿದು ಅವರು ತುಳುವ ಸಾಹಿತ್ಯ ಮಾಲೆ ಯಲ್ಲಿ ಪ್ರಕಟವಾಗಿದ್ದ ನಾರಾಯಣ ಕಿಲ್ಲೆ ಯವರ ಕಾನಿಗೆ ಕವನ ಸಂಕಲನದ ತುಳುನಾಡ್ ಕವನ ಹಾಗು ಮಾಧವ ತಿಂಗಳಾಯರ ಜನ ಮರ್ಲ್ ನಾಟಕದ ಮಂಗಲ ಪದ್ಯ ವಾಚಿಸಿ ಪಣಿ ಯಾಡಿ ಯವರ ಕಾಲಘಟ್ಟದ ಸ್ವಾತಂತ್ರ್ಯ ಪೂರ್ವದ ತುಳು ಸಾಹಿತ್ಯದ ರುಚಿಯನ್ನು ಸಾಹಿತ್ಯ ಆಸಕ್ತರಿಗೆ ಉಣ ಬಡಿಸಿದರು.


ಯಶವಂತ ಬೋಳೂರ್ ಅವರು ‘ತುಳುನಾಡು’, ರೇಮಂಡ್ ಡಿಕೂನಾ ತಾಕೊಡೆ ‘ದೂರುನ ಅಭ್ಯಾಸ’ , ಸುಧಾನಾಗೇಶ್ ‘ಮದೆಕ್ ಪೋತುoಡು’, ವೆಂಕಟೇಶ್ ಗಟ್ಟಿ ‘ ನಮ ತುಳುವೆರ್ ‘, ಗೀತಾ ಲಕ್ಷ್ಮೀಶ್ ಅವರು ಎಸ್ ಯು ಪನಿಯಾಡಿ ಕುರಿತ ‘ಕನ ನನ ಆವೊಡು’, ಮಾಲತಿ ಶೆಟ್ಟಿ ಮಾಣೂರು ‘ ಪೆರ್ಮೆ’, ಎನ್ ಸುಬ್ರಾಯ ಭಟ್’ ಉಲ್ಲೆರಪ್ಪಾ ಉಲ್ಲೆರ್‘, ರಘು ಇಡ್ಕಿದು ಪಣಿಯಾಡಿ ಕಾಲದಲ್ಲಿ ಮುದ್ರಣ ಗೊಂಡ ನಾರಾಯಣ ಶೆಟ್ಟಿ ಕಿಲ್ಲೆ ಅವರ ‘ಕಾನಿಗೆ’ಕವನ ಸಂಕಲನದಿಂದ ಆಯ್ದ ಕವಿತೆಗಳನ್ನು ಪ್ರಸ್ತುತಪಡಿಸಿದರು. 


ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ತಜ್ಞ ಗಜಲ್ ಖ್ಯಾತಿಯ ಡಾ.ಸುರೇಶ್ ನೆಗಳಗುಳಿಯವರು ಆಶಯ ಭಾಷಣ ಮಾಡುತ್ತಾ ಪಣಿಯಾಡಿ ಅವರು ಮಾಡಿದ ಸ್ವತಂತ್ರ ಪೂರ್ವ ಚಟುವಟಿಕೆಗಳು ಸಂಚಲನ ಮೂಡಿಸುತ್ತವೆ. ತುಳು ಭಾಷೆಗೆ ಶಕ್ತಿ ತುಂಬಿದ ಅವರು ಸದಾ ಸ್ಮರಣೀಯರು ಎಂದು ಪಣಿಯಾಡಿಯವರ ಕುರಿತು ಬರೆದ ಕವನ ಹಾಗೂ ತುಳು ಗಜಲ್ ವಾಚಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top