ಪುತ್ತೂರು:
ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮುಂದಿನ
ಭವಿಷ್ಯ ಅಡಗಿದೆ. ನಾವು ಸಮಾಜಕ್ಕೆ
ಹಾಗೂ ದೇಶಕ್ಕೆ ನಮ್ಮಿಂದಾದ ಕೊಡುಗೆಯನ್ನು
ನೀಡಬೇಕು. ಸಮಾಜದಲ್ಲಿ ವ್ಯಕ್ತಿ ಹೇಗಿರುತ್ತಾನೆ
ಎಂಬುದರ ಮೇಲೆ ಆತನ ವ್ಯಕ್ತಿತ್ವ
ನಿರ್ಮಾಣವಾಗುತ್ತದೆ. ನಾವು ಜೀವನದಲ್ಲಿ ಮುನ್ನಡೆ
ಸಾಧಿಸಿ ನಮ್ಮೊಂದಿಗೆ ಇರುವವರನ್ನೂ ಕೂಡಿಕೊಂಡು ಬೆಳೆಯಬೇಕು. ನಾವು
ಇಂದು ಸಮಾಜದಲ್ಲಿ ಸಾಧಕರು ಎಂದು
ಹೆಸರಿಸುವ ಎಲ್ಲರೂ ಕಷ್ಟ, ಸವಾಲುಗಳನ್ನು
ಎದುರಿಸಿ ಮುಂದೆ ಬಂದವರಾಗಿರುತ್ತಾರೆ. ಅವರ
ಜೀವನದಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ
ಹರೀಶ್ ಪೂಂಜ ನುಡಿದರು.
ಇವರು ವಿವೇಕಾನಂದ ಕಲಾ ವಿಜ್ಞಾನ
ವಾಣಿಜ್ಯ ಮಹಾವಿದ್ಯಾಲಯ ಸ್ವಾಯತ್ತ ಪುತ್ತೂರು ಇಲ್ಲಿ
ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ
ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ
ಡಾ. ಗಣೇಶ ಸಂಜೀವ
ಮಾತನಾಡಿ, ವಿದ್ಯಾರ್ಥಿಗಳು ಅವರ ಕನಸುಗಳನ್ನು ನನಸು
ಮಾಡುವುದನ್ನು ಮಾತ್ರ ಯೋಚಿಸದೇ ಹೆತ್ತವರ
ಆಶಯಗಳನ್ನೂ ತಿಳಿದು ಪೂರೈಸಬೇಕು. ಪೋಷಕರು
ತ್ಯಾಗ ಮಾಡಿ ಪರಿಶ್ರಮಪಟ್ಟು ಮಕ್ಕಳನ್ನು
ಬೆಳೆಸುತ್ತಾರೆ. ಪ್ರಮಾಣಪತ್ರ ಸಿಕ್ಕ ಮಾತ್ರಕ್ಕೆ ಸುಶಿಕ್ಷಿತ
ಎಂದಲ್ಲ, ಇತರರಿಗೆ ಗೌರವ ನೀಡಿ
ವಿನಮ್ರವಾಗಿ ನಡೆದುಕೊಳ್ಳುವುದೂ ಅತ್ಯಗತ್ಯ. ಶಿಕ್ಷಕರ ಹಾಗೂ
ಹೆತ್ತವರ ಕೊಡುಗೆಯನ್ನೂ ಸ್ಮರಿಸಿಕೊಳ್ಳಬೇಕು ಎಂದರು.
ವಾರ್ಷಿಕೋತ್ಸವದ
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್
ವಾರ್ಷಿಕೋತ್ಸವ ಎಂದರೆ ಸಂಭ್ರಮದ ಕ್ಷಣ.ಇದು ವಿದ್ಯಾರ್ಥಿಗಳ ಪ್ರತಿಭೆಗೆ
ಅವಕಾಶ ನೀಡುವ ವೇದಿಕೆಯಾಗಿದೆ. ನಾವು
ಮಾಡುವ ಕೆಲಸ ಸಮಾಜಕ್ಕೆ, ದೇಶಕ್ಕೆ
ಒಳ್ಳೆಯದನ್ನು ಮಾಡುತ್ತದೆಯೇ ಎಂದು ಚಿಂತಿಸಿ ಕಾರ್ಯಪ್ರವೃತ್ತರಾಗುವುದು
ಮುಖ್ಯ. ಹಾಗೆ ಚಿಂತಿಸಿದರೆ ನಮ್ಮ
ಬದುಕು ಸಾರ್ಥಕ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ
ಮುರಳಿ ಕೃಷ್ಣ ಕೆ.ಎನ್
ಹಾಗೂ ಅಧ್ಯಕ್ಷ ಡಾ. ಶ್ರೀಪತಿ
ಕಲ್ಲೂರಾಯ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ
ಶಾಸಕ ಹರೀಶ್ ಪೂಂಜ ಹಾಗೂ
ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಣೇಶ್
ಸಂಜೀವ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ದತ್ತಿನಿಧಿ ಬಹುಮಾನಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಯಿತು. ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಕ್ರಿಯವಾಗಿರುವ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ರಾಯಭಾರಿ ಎನ್ನುವ ಪುರಸ್ಕಾರವನ್ನು ನೀಡಲಾಯಿತು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಧಕ ಅಧ್ಯಾಪಕರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು
ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ
ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ
ಭಟ್ ಸ್ವಾಗತಿಸಿ ಕನ್ನಡ
ವಿಭಾಗದ ಮುಖ್ಯಸ್ಥ ಹಾಗೂ ಆಡಳಿತ
ವಿಭಾಗದ ವಿಶೇಷಾಧಿಕಾರಿ ಡಾ. ಮನಮೋಹನ.ಎಂ
ವಂದಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್
ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ
ಡಾ.ವಿಜಯ ಸರಸ್ವತಿ
ಸಹಕರಿಸಿದರು. ಕನ್ನಡ ವಿಭಾಗದ ಉಪನ್ಯಾಸಕ
ಮಧು ಕುಮಾರ್ ಕಾರ್ಯಕ್ರಮ
ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



