ಹವ್ಯಕ ಭಾಷೆಯ ಕವನ: ವಿಷು ವಿಶೇಷ

Upayuktha
0


ಅಂದೆಲ್ಲ ಇದ್ದತ್ತು ವಿಷುವಿಂಗೆ ಗಮ್ಮತ್ತು                                 

ಇಂದಿಲ್ಲಿ ಬಯಿಂದು ಅದಕ್ಕೆ ಆಪತ್ತು || 

                          

ಚಾಂದ್ರಯುಗಾದಿಗೆ ಸಂವತ್ಸರ ಹೊಸತ್ತೊಂದು ಬತ್ತು  

ಹೊಸ ಪರಾಭವ ಆನಂದವನ್ನೇ ಕೈ ಹಿಡುದು ತಪ್ಪಾಗ |

ಪಂಚಾಂಗದ ಪುಟಪುಟವೂ ಮೊಗಚ್ಚಲೆ ಸುರುವಾವುತ್ತು 

ಆದರೂ ನವಗೆ ಸುಖ ಸೌರಯುಗಾದಿಯೇ ಬಪ್ಪಾಗ || 


ಆ ದಿನವೇ ವಿಷು ಅದುವೇ  ನವಗೆಲ್ಲ ದೊಡ್ಡ ಹಬ್ಬ 

ಉದೆಕಾಲಕ್ಕೆ ಎದ್ದು ನೋಡುವ ಕಣಿ ಎಷ್ಟು ಚೆಂದ | 

ದೇವರಿಂಗೆ ಹೊಡಾಡುವಾಗ ಅದೆಂಥ ಸಂತೋಷ 

ಕಣಿ ಯ ಕಣ್ತುಂಬ ನೋಡಿದವಕ್ಕೆ ವರ್ಷವಿಡೀ ಸುಖದ ಬಂಧ ||

   

ನೆಡುವಿರುಳೆ ದೇವರೊಳ ಪೀಠ ಶುಚಿಮಾಡಿ 

ತೊಳದು ಮಡಿ ಮಾಡಿದ ಕೆಂಪು ಪಟ್ಟೆಯ ಹಸೆಲಿ |

ಚಿನ್ನ ಬೆಳ್ಳಿ ನಾಣ್ಯಂಗಳೊಟ್ಟಿಂಗೆ ಮಾಲೆ ಬಳೆಗಳ ಮಡುಗಿ

ಹಣ್ಣು ಕಾಯಿ ತರಕಾರಿ ಫಲಪುಷ್ಪ ಎಲೆ ಅಡಕ್ಕೆ ಜೆತೆಲಿ || 


ಅಜ್ಜನ ಜೆನಿವಾರಲ್ಲಿ ನೇತೊಂಡಿಪ್ಪ ಉಂಗಿಲಿನ ಹುಡುಕ್ಕಿರೆ 

ಕಣಿಯ ನೆಡುಸರೆಯೇ ಎದ್ದುಕಾಂಗು ಪಯ್ಯನ್ನೂರ ಪವಿತ್ರ |

ಗುಟ್ಟದೀಪದ ಸುತ್ತ ಮುತ್ತಿಕೊಂಡಿಪ್ಪ ಶಕುನದ ಕಣಿ 

ಮನೆವಕ್ಕೆ ಒಕ್ಕಲುಗೊಕ್ಕೆ ನೆರೆಕರೆವಕ್ಕೆ ಸುಖದ ಸೂತ್ರ ||  


ಎಲ್ಲೋರು ಉದಿನಸ್ಕಿಂಗೆ ಬೇಗ ಎದ್ದು ಮಿಂದು ಹೊಡಾಡಿ  

ಕಣಿನೋಡಿ ಶುದ್ಧ ಮನಸ್ಸಿಂದ ನಿಜಕ್ಕೂ ಮಡಿಯಕ್ಕು | 

ಅಜ್ಜಂಗೆ ಮದಲು ಅಭಿವಾದ್ಯ ಮಾಡಿ ದೊಡ್ಡವರ ಕಾಲ್ಹಿಡಿದು    

ಮಕ್ಕೊಗೆಲ್ಲ ಹರಸಿ ಕೊಟ್ಟಿಗೆ ರಸಾಯನದ ಸೇವನೆಯಕ್ಕು ||  


ಕಣಿ ತಂದು ಕಾಲ್ಹಿಡಿದ ಆಳುಗೊಕ್ಕೆ ಕೊಡುಗು ತೆಂಗಿನಕಾಯಿ 

ಹೊಟ್ಟೆತುಂಬ ಕೊಟ್ಟಿಗೆ ಸೇಮಗೆಯೊಟ್ಟಿಂಗೆ ಮತ್ತೆ ಕಾಯಲುದೆ | 

ರಾಜ ವಸಂತನ ಕಾಲವೇ ಸಮೃದ್ಧಿ, ವಿಷುವಿಂಗೆ ಎಲ್ಲ ಸಿದ್ಧಿ 

ಇಂದೆಲ್ಲವೂ ಆಂಜಿಹೋದ ಕತೆಯಾಗಿ ಬಹುದೂರ ಹೋತನ್ನೆ || 


ಇಂದು ವಿಷುವಿಂಗೆ ರಜೆಯಿಲ್ಲೆ, ರಜವೂ ಪುರುಸೊತ್ತಿಲ್ಲೆ  

ಗತಕಾಲದ ವೈಭವವಿಲ್ಲೆ, ಕಣಿ ಮಡಗುವ ಅಜ್ಜನೂ ಇಲ್ಲೆ | 

ಇದೆಲ್ಲ ಬೆಗುಡು ಹೇದು ಗೇಲಿ ಮಾಡುವ ನಮ್ಮ ಮಕ್ಕೊ 

ಅಂತರ್ಜಾಲಲ್ಲಿ ಹುಡುಕ್ಕಿ ಕಣಿ ತೋರುಸುಗು ನಿಲ್ಲಿ || 



ರಚನೆ: ವಿ.ಬಿ.ಕುಳಮರ್ವ, ಕುಂಬ್ಳೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top