ಮಹಾಬಲೇಶ್ವರ ಪ್ರಮೋಟರ್ಸ್ ಅಂಡ್‌ ಬಿಲ್ಡರ್ಸ್ ಸಂಸ್ಥೆಗೆ ಸೇರಿದ ಆಸ್ತಿಯ ಅತಿಕ್ರಮಣ: ದೂರು ದಾಖಲು

Upayuktha
0



ಮಂಗಳೂರು: ಮಹಾಬಲೇಶ್ವರ ಪ್ರಮೋಟರ್ಸ್‌ ಆಂಡ್ ಬಿಲ್ಡರ್ಸ್ ಸಂಸ್ಥೆಗೆ ಸೇರಿರುವ ಸ.ನಂ. 157-1ಪಿ ಮತ್ತು 270-1 ಬಿಪಿ ಜಾಗದಲ್ಲಿ ಅಕ್ರಮ ಪ್ರವೇಶ ಬೆದರಿಕೆ ಮತ್ತು ಅತಿಕ್ರಮಣಕ್ಕೆ ಸಂಬಂಧಪಟ್ಟ ಹಾಗೆ ವಾಮಂಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಕುರಿತಂತೆ.


ಮಂಗಳೂರು ಎ.14: ಮಹಾಬಲೇಶ್ವರ ಪ್ರಮೋಟರ್ಸ್ ಆಂಡ್ ಬಿಲ್ಡರ್ಸ್ ಸಂಸ್ಥೆಗೆ ಸೇರಿರುವ ಸ.ನಂ. 157-1ಪಿ ಮತ್ತು 270-1ಬಿಪಿ ಜಾಗದಲ್ಲಿ ಅಕ್ರಮ ಪ್ರವೇಶ ಬೆದರಿಕೆ ಮತ್ತು ಅತಿಕ್ರಮಣಕ್ಕೆ ಸಂಬಂಧಪಟ್ಟ ಹಾಗೆ ವಾಮಂಜೂರು ಪೋಲೀಸ್ ಠಾಣೆಯಲ್ಲಿ ಮಹಾಬಲೇಶ್ವರ ಸಂಸ್ಥೆಯ ಎಕ್ಸಿಕೂಟಿವ್ ಡೈರೆಕ್ಟರ್ ಸಂಜಿತ್ ನಾಯಕ್ ಅವರು ಗಿರಿಧರ್ ಶೆಟ್ಟಿ ಸಾಗರ್ ಕನ್‌ಸ್ಟ್ರಕ್ಷನ್, ಸುರೇಶ್ ಶೆಟ್ಟಿ ಶಕ್ತಿನಗರ, ಸುಧೀರ್ ಶೆಟ್ಟಿ, ಜಯರಾಮ್ ಶೆಟ್ಟಿ, ಇವರ ಮೇಲೆ ದೂರು ನೀಡಿರುತ್ತಾರೆ.


ದಿನಾಂಕ 12.04.2026ರಂದು ನಾನು ನಡೆದು ಹೋಗುವ ವೇಳೆ ನಮ್ಮ ಆಸ್ತಿ ಅತಿಕ್ರಮಣವಾಗಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಈ ಸಂದರ್ಭದಲ್ಲಿ ಉತ್ತರ- ಪೂರ್ವ ಭಾಗದಲ್ಲಿ ನಾವು ನಿರ್ಮಿಸಿರುವ ಕಂಪೌಂಡ್ ಗೋಡೆಯನ್ನು ಒಡೆದಿದ್ದು ಕಂಡು ಬಂದಿತ್ತು.


ಇದಲ್ಲದೆ ಅಗೆಯುವ ಕಾರ್ಯ ನಡೆದಿದ್ದು ಪೂರ್ವ ಭಾಗದಲ್ಲಿ ಅರ್ಧ ಕೊಠಡಿಯನ್ನು ನಿರ್ಮಾಣ ಮಾಡಿರುತ್ತಾರೆ. ದಿನಾಂಕ 13.04.2026ರಂದು ಬೆಳಿಗ್ಗೆ ಸುಮಾರು 09:00 ಗಂಟೆಗೆ ನಮ್ಮ ಕಾರ್ಮಿಕರು ಮತ್ತು ಮೇಲ್ವಿಚಾರಕರು ಕಂಪೌಂಡ್ ಗೋಡೆಯನ್ನು ಮರು ನಿರ್ಮಿಸಲು ಬಂದಾಗ ಶಕ್ತಿನಗರದ ಸುರೇಶ್ ಶೆಟ್ಟಿಯವರು ವಾಹನವನ್ನು ಅಡ್ಡವಾಗಿ ನಿಲ್ಲಿಸಿ ಜಾಗಕ್ಕೆ ಪ್ರವೇಶವನ್ನು ತಡೆದಿರುತ್ತಾರೆ. ನಾನು 10:00 ಗಂಟೆಗೆ ಸ್ಥಳಕ್ಕೆ ಬಂದಾಗ ನನಗೆ ನಿಂದನೆ, ಬೆದರಿಕೆ ಹಾಗೂ ಭಯ ಹುಟ್ಟಿಸುವ ವರ್ತನೆಯನ್ನು ಮಾಡಿರುತ್ತಾರೆ. ಅದರಲ್ಲಿ ಒಬ್ಬ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಲ್ಯಾಟರೇಟ್ ಕಲ್ಲನ್ನು ನನ್ನ ಬಲ ಕಾಲಿನ ಮೇಲೆ ಉರುಳಿಸಿ ಗಾಯ ಪಡಿಸಲು ಪ್ರಯತ್ನಿಸಿದ್ದರು. ಉತ್ತರ- ಪೂರ್ವ ಭಾಗದ ಕಂಪೌಂಡ್ ಗೋಡೆಯ ಧ್ವಂಸ, ಬೆದರಿಕೆ, ಅಕ್ರಮ ಪ್ರವೇಶ ಮತ್ತು ಅಕ್ರಮ ನಿರ್ಮಾಣದ ವಿರುದ್ಧ ಸೂಕ್ತಿ ಕ್ರಮ ಕೈಗೊಳ್ಳಬೇಕೆಂದು ಸಂಜಿತ್ ನಾಯಕ್ ದೂರು ನೀಡಿರುತ್ತಾರೆ.


ದೂರು ಸ್ವೀಕರಿಸಿದ ವಾಮಂಜೂರು ಠಾಣೆಯ ಪೋಲೀಸ್ ಅಧಿಕಾರಿಗಳು ಭಾರತೀಯ ನ್ಯಾಯಸಂಹಿತೆ (ಬಿಎನ್‌ಎಸ್) ಕಾಯ್ದೆ 2023ರ ಪ್ರಕಾರ ಸೆಕ್ಷನ್329(3), 324(4), 351,3(5)ರ ಪ್ರಕಾರ ಎಫ್.ಐ.ಆರ್ ದಾಖಲು ಮಾಡಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top