ದಾವಣಗೆರೆ: ನಗರದ ಶ್ರೀ ಗಾಯತ್ರಿ ಪರಿವಾರದಿಂದ ಪ್ರತೀ ತಿಂಗಳ ಹುಣ್ಣಿಮೆಯೆಂದು ನಡೆಸುವ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ, ಬುದ್ಧ ಹುಣ್ಣಿಮೆ ಅಂಗವಾಗಿ ದಿನಾಂಕ 01-05-2026 ರಂದು ಶುಕ್ರವಾರ ಬೆಳಿಗ್ಗೆ 7-00ಕ್ಕೆ ನಡೆಯಲಿದೆ ಎಂದು ಶ್ರೀ ಗಾಯಿತ್ರಿ ಪರಿವಾರದ ಮಾಜಿ ಅಧ್ಯಕ್ಷರಾದ ಡಾ. ರಮೇಶ್ ಪಟೇಲ್ ತಿಳಿಸಿದ್ದಾರೆ
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ನಡೆಯಲಿರುವ ಸಮಾರಂಭದ ಈ ಬಾರಿಯ ಪೂಜಾ ಸೇವಾಕರ್ತರಾದ ಬೇಳೂರು ಸಂತೋಷ್ಕುಮಾರ್ ಶೆಟ್ಟಿ ಮತ್ತು ಕುಟುಂಬ, ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷ್ಮಣ್ ರಾಯ್ಕರ್ ಮತ್ತು ಕುಟುಂಬ, ಶ್ರೀ ಗಾಯತ್ರಿ ಪರಿವಾರದ ಸಮಿತಿ ಸದಸ್ಯರಾದ ವಿ.ಕೃಷ್ಣಮೂರ್ತಿ ಮತ್ತು ಕುಟುಂಬ ಪುರುಷೋತ್ತಮ ಬೈ ಪಟೇಲ್ ಕುಟುಂಬದವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ನಿರಂತರವಾಗಿ ಪ್ರತೀ ಪೂರ್ಣಿಮೆ ಯಂದು ನಡೆಯುವ
ಕಾರ್ಯಕ್ರಮಕ್ಕೆ ಸಹಕರಿಸುತ್ತಿದ್ದಾರೆ.
ಭಕ್ತರು
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಾಗಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


