ಉಜಿರೆ: ಪ್ರಾಕೃತ ಪರೀಕ್ಷೆಯಲ್ಲಿ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇ.100 ಫಲಿತಾಂಶ

Upayuktha
0



ಉಜಿರೆ, ಏಪ್ರಿಲ್ 13: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ ಇಲ್ಲಿ 2025–2026ನೇ ಸಾಲಿನ ಪ್ರಾಕೃತ ವಿಭಾಗದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.


ಕಾಲೇಜಿನ ಪ್ರಾಕೃತ ಅಧ್ಯಯನ ಕೇಂದ್ರದ ವತಿಯಿಂದ ನಡೆದ “ಪ್ರಾಕೃತ ಪ್ರಥಮ”, “ಪ್ರಾಕೃತ ಡಿಪ್ಲೋಮಾ” ಮತ್ತು “ಪ್ರಾಕೃತ ರತ್ನ” ಪರೀಕ್ಷೆಗಳಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ವಿಭಾಗದ ಶೈಕ್ಷಣಿಕ ಮಟ್ಟವನ್ನು ಪ್ರತಿಬಿಂಬಿಸಿದ್ದಾರೆ. ವಿದ್ಯಾರ್ಥಿಗಳು ವಿವಿಧ ಶ್ರೇಣಿಗಳಲ್ಲಿ ಉತ್ತೀರ್ಣರಾಗಿದ್ದು, ಕೆಲವರು ಪ್ರಥಮ ದರ್ಜೆಯಲ್ಲಿ ಸಾಧನೆ ಮಾಡಿದ್ದಾರೆ.


ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ ಹೀಗಿದೆ:

ಸುವಾಸಿನಿ ಬಿ (ಪ್ರಾಕೃತ ರತ್ನ, ಪ್ರಥಮ ದರ್ಜೆ), ಜ್ಯೋತಿ ಕುಮಾರಿ ಎನ್.ಎಸ್ (ಪ್ರಾಕೃತ ರತ್ನ, ಪ್ರಥಮ ದರ್ಜೆ), ದರ್ಶಲ್ (ಪ್ರಾಕೃತ ದ್ವಿತೀಯ, ಪ್ರಥಮ ದರ್ಜೆ), ಡಾ. ರವಿಶಂಕರ್ ಜಿ.ಕೆ (ಪ್ರಾಕೃತ ದ್ವಿತೀಯ, ಪ್ರಥಮ ದರ್ಜೆ), ಪ್ರಣವ ಕೃಷ್ಣ ಕೆ ಜಿ, ಭಾರ್ಗವಿ ಜೆ, ಅಕ್ಷತಾ ಜೈನ್, ವಿಜಯಲಕ್ಷ್ಮಿ ಭದ್ರಾಪುರ, ಮೌಲಿಕಾ (ಇವರು ಪ್ರಾಕೃತ ದ್ವಿತೀಯದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ).


ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರಾಕೃತ ಭಾಷೆಯ ಅಭಿವೃದ್ದಿಗೆ ಇದು ಉತ್ತೇಜನಕಾರಿಯಾಗಿದೆ ಎಂದು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top