ಅಭಾಸಾಪ ಮಂಗಳೂರು ವತಿಯಿಂದ ಯುಗಾದಿ ವಿಷು ಕಣಿ ಸಂಭ್ರಮ

Upayuktha
0


ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಮಂಗಳೂರು ತಾಲೂಕು ಸಮಿತಿ ಹಾಗೂ ಥಿಯೋಫಿಕಲ್ ಸೊಸೈಟಿ ಮಂಗಳೂರು ಸಹಯೋಗದಲ್ಲಿ ಯುಗಾದಿ ಸಂಭ್ರಮ ವಿಷು- ಕಣಿ ಕಾರ್ಯಕ್ರಮವನ್ನು ಇಲ್ಲಿನ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ಥಿಯೋಸೋಫಿಕಲ್ ಸೊಸೈಟಿ ಅಧ್ಯಕ್ಷ ಹಾಗೂ ಅ ಭಾ ಸಾ ಪ ಮಂಗಳೂರು ಇದರ ಗೌರವಾಧ್ಯಕ್ಷ ವಿದ್ವಾನ್ ತುಪ್ಪೇಕಲ್ಲು ನರಸಿಂಹ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಯುಗಾದಿ ಹಬ್ಬದ ಮಹತ್ವ ಹಾಗೂ ವಿಷು- ಕಣಿ ಆಚರಣೆಯ ವಿಚಾರವಾಗಿ ಮಾತನಾಡಿದರು.


ಪತ್ರಕರ್ತ, ಅ ಭಾ ಸಾ ಪ ದ.ಕ ಜಿಲ್ಲೆ ನಿಕಟ ಪೂರ್ವ ಅಧ್ಯಕ್ಷ ಪಿ ಬಿ ಹರೀಶ್ ರೈ ಅವರು ಮಾತನಾಡಿ, ತಮ್ಮ ಬಾಲ್ಯದಲ್ಲಿ ಆಚರಿಸುತ್ತಿದ್ದ ಸೌರ ಯುಗಾದಿಯನ್ನು ನೆನಪಿಸಿಕೊಂಡರು. ಥಿಯೋಫಿಕಲ್ ಸೊಸೈಟಿ ಮಂಗಳೂರು ಇದರ ಕಾರ್ಯದರ್ಶಿ ಪ್ರೊ.ಕೃಷ್ಣಾನಂದ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ ಹಬ್ಬಗಳ ಆಚರಣೆ ನಮ್ಮನ್ನು ಪರಸ್ಪರ ಬೆಸೆದು ಬಾಳಲು ಕಲಿಸುತ್ತದೆ ಎಂದರು.


ಶ್ರೀಮತಿ ರವಿಕಲಾ ಸುಂದರ್ ಮತ್ತು ಶ್ರೀಮತಿ ಆಕೃತಿ ಭಟ್ ಪ್ರಾರ್ಥಿಸಿದರು. ಅ ಭಾ ಸಾ ಪ ಮಂಗಳೂರು ಸಮಿತಿ ಅಧ್ಯಕ್ಷರಾದ ಡಾ.ಮೀನಾಕ್ಷಿ ರಾಮಚಂದ್ರ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀಮತಿ ಚಂದ್ರಪ್ರಭ ದಿನಕರ್ ವಂದಿಸಿದರು. ಸದಸ್ಯರಾದ ಶ್ರೀಮತಿ ಯಶೋದ ಕುಮಾರಿ ಶ್ರೀಮತಿ ಉಷಾ ಅಮೃತ್ ಕುಮಾರ್, ಶ್ರೀಮತಿ ಬೀನಾ ಶ್ರೀ ನಿಶಾಂತ್ ಸಹಕರಿಸಿದರು. ಅಬಾಸಾಪ, ದ ಕ ಜಿಲ್ಲಾ ಕಾರ್ಯದರ್ಶಿ ಲತೇಶ್ ಹಾಗೂ ಥಿಯೋಸೊಫಿಕಲ್ ಸೊಸೈಟಿ ಸದಸ್ಯರು ಉಪಸ್ಥಿತರಿದ್ದರು. ಶೈಲಜಾ ಪುದುಕೋಳಿ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top