ತುಲುವೆರೆ ಕಲ ಮಕ್ಕಳ ಗೀತೆ, ಕತೆ ಫಲಿತಾಂಶ

Upayuktha
0


ಮಂಗಳೂರು: ತುಲುವೆರೆ ಕಲ ಟ್ರಸ್ಟ್ (ರಿ.) ಮಂಗಳೂರು ಇದರ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ತುಳು ಮಕ್ಕಳ ಗೀತೆ ಸ್ಪರ್ಧೆಯಲ್ಲಿ ದಿವ್ಯಾ ರೈ ಪೆರುವಾಜೆ ಪ್ರಥಮ, ಪೆರ್ಮುಖ ಸುಬ್ರಹ್ಮಣ್ಯ ದ್ವಿತೀಯ, ಶಾರದಾ ತುಳುನಾಡ್ ತೃತೀಯ ಬಹುಮಾನ ಪಡೆದಿದ್ದಾರೆ.


ತುಳು ಮಕ್ಕಳ ಕತೆ ಸ್ಪರ್ಧೆಯಲ್ಲಿ ಬನಶ್ರೀ ಅವಿನಾಶ್ ಪ್ರಥಮ, ಪ.ರಾಮಕೃಷ್ಣ ಶಾಸ್ತ್ರಿ ದ್ವಿತೀಯ, ಸವಿತಾ ಎಸ್.ಭಟ್ ಅಡ್ವಾಯಿ ತೃತೀಯ ಬಹುಮಾನ ಪಡೆದಿದ್ದಾರೆ.


ಕವಿ, ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ ಹಾಗೂ ರಘು ಇಡ್ಕಿದು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಮೇ 31ರಂದು ನಡೆಯುವ ತುಲುವೆರೆ ಕಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುಮಾನ ಪ್ರದಾನಿಸಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top