ಸುರತ್ಕಲ್: ಪಣಿಯಾಡಿ ನೆನಪು ತುಳು ಕವಿಗೋಷ್ಠಿ

Upayuktha
0

ಸುರತ್ಕಲ್:  ತುಳುವರು ತಮ್ಮ ನಾಡು ನುಡಿ, ಸಾಹಿತ್ಯ ಸಂಸ್ಕೃತಿ ಗಳ ಕುರಿತು ಅಭಿಮಾನ ವಂತರಾಗಿ ದುಡಿಯ ಬೇಕಾಗಿದೆ. ಎಸ್. ಯು. ಪಣಿಯಾಡಿಯವರು ಹಾಕಿಕೊಟ್ಟ ತುಳುವ ಚಳುವಳದ ಆಶಯ ಗಳನ್ನು ಅರಿತು ಕೊಂಡು ಮುನ್ನಡೆ ಸ ಬೇಕು ಎಂದು ಹಿರಿಯ ಕನ್ನಡ ತುಳು ಸಾಹಿತಿ ಮತ್ತು ಪತ್ರಕರ್ತ ಯಶವಂತ ಬೋಳೂರು ನುಡಿದರು. ಅವರು ತುಳು ಚಳುವಳದ ನೇತಾರ ಸಾಹಿತಿ ಎಸ್. ಯು. ಪಣಿಯಾಡಿಯವರ ಜನ್ಮದಿನದ ನೆನಪಿನಲ್ಲಿ ಮಂಗಳೂರಿನ ಕವಿ ಮಿತ್ರರು ಸುಲ್ತಾನ ಬತ್ತೇರಿ ಯ ಬೋಳೂರು ಬೇ ಯಲ್ಲಿ ಹಮ್ಮಿಕೊಂಡಿದ್ದ ಪಣಿಯಾಡಿ ನೆನಪು ತುಳು ಕವಿಗೋಷ್ಠಿ ಮಾತುಕತೆಯಲ್ಲಿ ಮಾತನಾಡಿದರು.


ಸುರತ್ಕಲ್ ಗೋವಿಂದ ದಾಸ ಕಾಲೇಜುನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೃಷ್ಣ ಮೂರ್ತಿ ಪಿ. ಮಾತನಾಡಿ ಎಸ್.ಯು.ಪಣಿಯಾಡಿಯವರು ತುಳುವ ಮಹಾ ಸಭೆ, ತುಳುನಾಡ್ ಪ್ರೆಸ್, ತುಳುನಾಡ್ ಬ್ಯಾಂಕ್, ಅಂತರಂಗ ಪತ್ರಿಕೆಗಳನ್ನು ನಡೆಸುವ ಜೊತೆಗೆ ಸ್ವಾತಂತ್ರ್ಯ ಹೋರಾಟ ಮತ್ತು ತುಳು ಚಳುವಳಿ ಗಳನ್ನು ಮುನ್ನಡೆಸಿದವರು ಎಂದರು.


ಕನ್ನಡ ನವೋದಯ ಸಾಹಿತ್ಯ ಘಟ್ಟದ ಸಂದರ್ಭದಲ್ಲಿಯೇ ತುಳುಭಾಷೆಯಲ್ಲಿ ಸಾಹಿತ್ಯ ರಚನೆಯ ಕಾರ್ಯಕ್ಕೆ ಪಣಿಯಾಡಿಯವರು ಶ್ರಮಿಸಿದರು ಎಂದರು.


ಸಾಹಿತಿ ರಘು ಇಡ್ಕಿದು ಅವರು ತುಳುವ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾಗಿದ್ದ ನಾರಾಯಣ ಕಿಲ್ಲೆ ಯವರಕಾನಿಗೆ ಕವನ ಸಂಕಲನದ ತುಳುನಾಡ್ ಕವನ ಹಾಗು ಮಾಧವ ತಿಂಗಳಾಯರ ಜನ ಮರ್ಲ್ ನಾಟಕದ ಮಂಗಲ ಪದ್ಯ ವಾಚಿಸಿಪಣಿಯಾಡಿಯವರ ಕಾಲಘಟ್ಟದ ತುಳುನಸಾಹಿತ್ಯದ ವಿಶೇಷತೆಗಳನ್ನು ತಿಳಿಸಿದರು.


ಹಿರಿಯ ಕವಿ ಡಾ. ಸುರೇಶ ನೆಗಳಗುಳಿ, ಪಿಂಗಾ ರ ಪತ್ರಿಕೆಯ ಸಂಪಾದಕ ರೇಮಂಡ್ ಡಿಕುನಾ ತಾಕೊಡೆ, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣುರು,ತುಳುವೆರೆ ಕಲ ದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಸುಬ್ರಾಯ ಭಟ್, ವೆಂಕಟೇಶ್ ಗಟ್ಟಿ, ಸುಧಾನಾಗೇಶ್ ಕವಿತೆ ಗಳನ್ನು ವಾಚಿಸಿದರು.


ನಾಗೇಶ್, ದೇವದಾಸ ಬೋಳೂರು ಮತ್ತಿತರರು ಉಪಸ್ಥಿತ ರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top