ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಅಂತರದ ಜಯ

Upayuktha
0

ಬೆಂಗಳೂರು, ಏಪ್ರಿಲ್ 4: ಬೆಂಗಳೂರು ಎಫ್‌ಸಿ ತಂಡವು ಎಫ್‌ಸಿ ಗೋವಾ ವಿರುದ್ಧ ಸತತ ಮೂರನೇ ಹೊರಂಗಣ ಆಟದಲ್ಲಿ ಜಯ ದಾಖಲಿಸಿದೆ. ಸುನಿಲ್ ಛೇತ್ರಿ ಮತ್ತು ನಮ್ಗ್ಯಾಲ್ ಭೂಟಿಯಾ ಗೋಲುಗಳಿಸಿದ್ದಾರೆ. 


ಪಂದ್ಯ ಆರಂಭವಾದ ಕೆಲವೇ ಕ್ಷಣಗಳಲ್ಲಿ ಬೆಂಗಳೂರು ಎಫ್‌ಸಿ ಖಾತೆ ತೆರೆಯಿತು. 3ನೇ ನಿಮಿಷದಲ್ಲಿ ಆಶಿಕ್ ನೀಡಿದ 'ಥ್ರೂ ಬಾಲ್' ವಿಫಲವಾದರೂ, ಚೆಂಡು ಬಾಕ್ಸ್‌ನ ಮೇಲ್ಭಾಗದಲ್ಲಿದ್ದ ಸುನಿಲ್ ಛೇತ್ರಿ ಅವರ ಪಾಲಾಯಿತು. 


24ನೇ ನಿಮಿಷದಲ್ಲಿ ಆಶಿಕ್ ಗೋಲು ಗಳಿಸುವ ಸನಿಹ ಬಂದಿದ್ದರು. ಬ್ರಿಯಾನ್ ಎದುರಾಳಿ ಪಾಸ್ ಅನ್ನು ತಡೆದು ಆಶಿಕ್ ಅವರಿಗೆ ನೀಡಿದರು, ಎಡಭಾಗದಿಂದ ನುಗ್ಗಿದ ಆಶಿಕ್ ಚೆಂಡನ್ನು ಗೋಲು ಪೆಟ್ಟಿಗೆಯ ಹೊರಭಾಗಕ್ಕೆ ಬಾರಿಸಿದರು. 36ನೇ ನಿಮಿಷದಲ್ಲಿ ಎಫ್‌ಸಿ ಗೋವಾ ಕಾರ್ನರ್ ಮೂಲಕ ಚೆಂಡನ್ನು ಗೋಲ್ ಪೋಸ್ಟ್‌ಗೆ ಹೊಡೆದಾಗ ಬಿಎಫ್‌ಸಿ ರಕ್ಷಕರು ಒಗ್ಗಟ್ಟಿನಿಂದ ಹೋರಾಡಿ ಎರಡು ಪ್ರಮುಖ ಬ್ಲಾಕ್‌ಗಳ ಮೂಲಕ ಗೋಲು ತಪ್ಪಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ ಬೆಂಗಳೂರು 1-0 ಮುನ್ನಡೆ ಕಾಯ್ದುಕೊಂಡಿತು.


ದ್ವಿತೀಯಾರ್ಧದಲ್ಲಿ ಉಭಯ ತಂಡಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. 52ನೇ ನಿಮಿಷದಲ್ಲಿ ರಾಯನ್  ವಿಲಿಯಮ್ಸ್ ನೀಡಿದ ಪಾಸ್ ಅನ್ನು ಸುರೇಶ್ ಗೋಲು ಪೆಟ್ಟಿಗೆಯತ್ತ ಬಾರಿಸಿದರೂ ಗೋವಾ ಡಿಫೆಂಡರ್ ಅದನ್ನು ತಡೆದರು. ಕೊನೆಯ ಹಂತದಲ್ಲಿ ಗೋವಾ ನೀಡಿದ ಕ್ರಾಸ್ ಮೂಲಕ ಬಂದ ಹೆಡರ್ ಅನ್ನು ಬೆಂಗಳೂರಿನ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅದ್ಭುತವಾಗಿ ಡೈವ್ ಮಾಡುವ ಮೂಲಕ ತಡೆದರು.


ಪಂದ್ಯ ಮುಗಿಯುವ ಕೆಲವೇ ಕ್ಷಣಗಳ ಮೊದಲು, ಬದಲಿ ಆಟಗಾರರಾದ ಮೊನಿರುಲ್ ನೀಡಿದ ಪಾಸ್ ಅನ್ನು ಫನಾಯ್ ಸ್ವೀಕರಿಸಿ ಭೂಟಿಯಾ ಅವರಿಗೆ ನೀಡಿದರು. ಬಲ ತುದಿಯಲ್ಲಿದ್ದ ನಮ್ಗ್ಯಾಲ್ ಭೂಟಿಯಾ ಅದ್ಭುತ ಫಿನಿಶ್ ಮಾಡುವ ಮೂಲಕ ಬೆಂಗಳೂರು ಎಫ್‌ಸಿಗೆ 2-0 ಅಂತರದ ಭರ್ಜರಿ ಜಯ ತಂದುಕೊಟ್ಟರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top