ಭಾರತ ಸ್ಕೌಟ್ ಮತ್ತು ಗೈಡ್ಸ್ ಶಿಬಿರಾರ್ಥಿಗಳಿಂದ ಚಾರಣ

Upayuktha
0

ಚಾರಣದಿಂದ ಪ್ರಕೃತಿ ಜ್ಞಾನ ಸಂಪಾದನೆ: ಎಸ್.ಎಸ್. ನಾರಾ

 



ಬಾಗಲಕೋಟೆ: ಚಾರಣದ ಮೂಲಕ ಬೆಟ್ಟ, ಗುಡ್ಡ, ಕಾಡುಗಳಲ್ಲಿ ಸುತ್ತಾಡುವುದರಿಂದ ಮನಸ್ಸು ಅರಳುತ್ತದೆ. ಚಾರಣದಿಂದ ಪ್ರಕೃತಿ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿದೆ ಎಂದು ಹಿರಿಯ ಸ್ಕೌಟ್ಸ್ ಲೀಡರ್ ಎಸ್.ಎಸ್. ನಾರಾ ಅವರು ಹೇಳಿದರು.


ಅವರು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಆಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ನಾಲ್ಕನೆಯ ದಿನವಾದ ಗುರುವಾರ ಮುಂಜಾನೆ ಮುಚಖಂಡಿಯ ಬೆಟ್ಟದಲ್ಲಿ ಶಿಬಿರಾರ್ಥಿಗಳಿಗೆ ಆಯೋಜಿಸಿದ ಚಾರಣದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಂದುವರಿದು ಮಾತನಾಡಿ, ಚಾರಣದಲ್ಲಿ ಬೆಟ್ಟ-ಗುಡ್ಡ ಹತ್ತಿಳಿಯುವುದರಿಂದ ಕಾಲು, ಹೃದಯ, ಶ್ವಾಸಕೋಶ ಗಟ್ಟಿಗೊಳ್ಳುತ್ತವೆ. ಇದರಿಂದ ಆರೋಗ್ಯ ಸಂಪಾದನೆ ಮಾಡಿಕೊಳ್ಳಲು ಸಾಧ್ಯವಿದೆ ಎಂದರು.


ಚಾರಣದಲ್ಲಿ ಪಾಲ್ಗೊಂಡಿದ್ದ ಡಾ. ಚಂದ್ರಶೇಖರ ಕಾಳನ್ನವರ ಮಾತನಾಡಿ, ಪ್ರಕೃತಿಯಲ್ಲಿ ಮನುಷ್ಯನಿಗೆ ಆರೋಗ್ಯಕರ ವಾತಾವರಣವಿದ್ದು, ಸಸ್ಯ, ಪ್ರಾಣಿ, ಶಿಲೆಗಳನ್ನು ನೇರವಾಗಿ ನೋಡುವ ಅವಕಾಶ ದೊರೆಯುತ್ತದೆ. ಬೆಟ್ಟಗಳನ್ನು ಸುತ್ತುವದರಿಂದ ಪರಿಸರ ಸಂರಕ್ಷಣೆಯ ಮನೋಭಾವನೆ ಬೆಳೆಯುತ್ತೆದೆ ಎಂದರು.


ರೋವರ್ ಲೀಡರ್ ಪ್ರೊ.ಪರಸಪ್ಪ ತಳವಾರ ಅವರು ಮಾತನಾಡಿ, ಚಾರಣಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿ ದೀಪವಾಗಿವೆ. ಸ್ನೇಹಭಾವನೆ, ಸಹಕಾರದಿಂದ ನಿರ್ಧಾರ ತೆಗೆದುಕೊಳ್ಳೋದು, ಬೇರೆಯವರಿಗೆ ಸಹಾಯ ಮಾಡುವುದು, ತೊಂದರೆಗಳನ್ನು ಪರಿಹರಿಸಿಕೊಳ್ಳುವ ತಾಳ್ಮೆ ಬರುತ್ತದೆ. ಚಾರಣದಿಂದ ನಾನು ಮಾಡಬಲ್ಲೆ ಅನ್ನುವ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದರು.


ರೇAಜರ್ ಲೀಡರ್ ಡಾ. ಸುಮಂಗಲಾ ಮೇಟಿ ಅವರು ಮಾತನಾಡಿ ಚಾರಣದಲ್ಲಿ ಸಾಂಸ್ಕೃತಿಕ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತವೆ. ಹಾಡು, ಮಾತು, ಹರಟೆ, ಏಕಾಭಿನಯ ಮೂಲಕ ಚಾರಣದಲ್ಲಿರುವವರ ಮನಸ್ಸು ಸಾಂಸ್ಕೃತಿಕವಾಗಿ ಅರಳಿಸುತ್ತವೆ ಎಂದರು. ಈ ಚಾರಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ರೇಂಜರ್ ಮತ್ತು ರೋವರ್ಸ್ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top