ಅಂದಿನ ವಚನಗಳೆ ಇಂದಿನ ಶಾಸನಗಳು: ಪ್ರೇಮಕ್ಕ ಅಂಗಡಿ

Upayuktha
0


ಜಮಖಂಡಿ: ದೇವನ ಪಿತೃತ್ವ ಹಾಗೂ ಮನುಕುಲದ ಭ್ರಾತೃತ್ವ ಸಾರುವುದು 12ನೇ ಶತಮಾನದ ವಚನ ಚಳವಳಿಯ ಉದ್ದೇಶವಾಗಿತ್ತು. ಅಂತೆಯೇ ಅಂದಿನ ವಚನಗಳೆ ಇಂದಿನ ಶಾಸನಗಳಾಗಿವೆ. ಅನುಭವ ಮಂಟಪವೆ ವಿಶ್ವದ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎನಿಸಿಕೊಂಡಿದೆ ಎಂದು ಬೈಲಹೊಂಗಲದ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ, ಶರಣೆ ಪ್ರೇಮಕ್ಕ ಅಂಗಡಿ ಹೇಳಿದರು.


ಬಸವ ಜಯಂತಿ ನಿಮಿತ್ತ ನಗರದ ಐತಿಹಾಸಿಕ ಓಲೆಮಠದ ಆಶ್ರಯದಲ್ಲಿ ಬುಧವಾರ ಸಂಜೆ ನಡೆದ ಆರು ದಿನಗಳ ಓಲೆಮಠದ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ‘ವಚನ ಚಳವಳಿಯ ಸಮಗ್ರ ಚಿಂತನೆ’ ಕುರಿತು ಅನುಭಾವ ಹಂಚಿಕೊಂಡರು.


ಧಾರ್ಮಿಕ ಕ್ಷೇತ್ರದಿಂದ ನಡೆದಿದ್ದ ಅನ್ಯಾಯವನ್ನು ಸರಿಪಡಿಸಲು ಸಮಾನತೆಯ ಸಂಕೇತವಾಗಿ ಎಲ್ಲರಿಗೂ ಇಷ್ಟಲಿಂಗ ನೀಡಲಾಯಿತು. ಕುಳಿತು ಉಣ್ಣದೆ ಸತ್ಯಶುದ್ಧ ಕಾಯಕ ಮಾಡಿಯೆ ಉಣಬೇಕು. ಸತ್ಯಶುದ್ಧ ಕಾಯಕದಿಂದ ಬಂದುದರಲ್ಲಿ ಒಂದಿಷ್ಟು ದಾಸೋಹ ಮಾಡಬೇಕು ಎಂಬುದು ವಚನ ಚಳವಳಿಯ ಸಂದೇಶವಾಗಿತ್ತು ಎಂದರು.


ಮರೇಗುದ್ದಿಯ ವಿಜಯ ಮಹಾಂತೇಶ್ವರ ಮಠದ ಮಹಾಂತ ಮಹಾಸ್ವಾಮಿಗಳು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಷಟ್‌ಸ್ಥಲಧ್ವಜ ಶರಣ ಸಂಸ್ಕೃತಿಯ ಸಂಕೇತವಾಗಿದೆ. ಬದ್ಧತೆಯಿಂದ ಬದುಕುವುದೆ ಶರಣ ಸಂಸ್ಕೃತಿ ಎಂದು ಆಶೀರ್ವಚನ ನೀಡಿದರು.


ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಾದಿ ಶಿವಶರಣರು ವಚನಗಳ ಮೂಲಕ ಮಾಡಿದ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ. ವಚನಗಳು ಎಂದರೆ ತೂಕದ ಮಾತುಗಳು. ತೂಕದ ಮಾತುಗಳಿಂದ ಸಮಾಜ ಸನ್ಮಾರ್ಗದಲ್ಲಿ ಸಾಗಲು ಸಾಧ್ಯ ಎಂದರು.


ಮುತ್ತಿನಕಂತಿ ಹಿರೇಮಠದ ಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಿನ್ನಾಭಿಪ್ರಾಯ ಮರೆತು ಧರ್ಮದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿ ನಿಲ್ಲಬೇಕು. ದೇಶ ಉಳಿದರೆ ಧರ್ಮ ಉಳಿಯುತ್ತದೆ. ಧರ್ಮ ಉಳಿದರೆ ಮನುಕುಲ ಉಳಿಯುತ್ತದೆ. ಆದ್ದರಿಂದ ಎಲ್ಲರೂ ದೇಶದ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.


ಹಿರಿಯ ವಕೀಲ ಎನ.ಎಸ್. ದೇವರವರ ಮಾತನಾಡಿದರು. ಶೂರ್ಪಾಲಿಯ ಸಾರಂಗ ಮಠದ ಮಾತೋಶ್ರೀ ಸುನಂದಮ್ಮತಾಯಿ ಸಾನ್ನಿಧ್ಯ ವಹಿಸಿದ್ದರು. ಪೌರಕಾರ್ಮಿಕರು ಸಾಮೂಹಿಕವಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದು ವಿಶೇಷವಾಗಿತ್ತು.


ವಿಧಾನ ಪರಿಷತ್ ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ, ವಕೀಲ ಟಿ.ಪಿ. ಬಾಂಗಿ, ತಾಲ್ಲೂಕು ಗಾಣಿಗ ಸಮಾಜದ ಅಧ್ಯಕ್ಷ ಕೆ.ಕೆ. ತುಪ್ಪದ, ಕುಂಬಾರ ಸಮಾಜದ ಅಧ್ಯಕ್ಷ ಬಸವರಾಜ ಹೊಳೆಪ್ಪಗೋಳ, ರೈತ ಮುಖಂಡ ಬಿ.ಎಸ್. ಸಿಂಧೂರ, ಕಾನಿಪ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ, ಮಹಾಪ್ರಸಾದದ ದಾಸೋಹಿ ಪ್ರೊ.ಬಸವರಾಜ ಕಡ್ಡಿ, ಶ್ರೀಕಾಂತ ಘಾಟಗೆ, ಸವಿತಾ ಅಂಗಡಿ, ದಾಕ್ಷಾಯಿಣಿ ಹುಲಗನ್ನವರ, ಮೇಘಾ ಮಹಾಬಳಶೆಟ್ಟಿ, ಡಾ.ನೇಹಾ ಲಾಡ, ಶೋಭಾ ಬಿರಾದಾರ, ನಿವೃತ್ತ ಶಿಕ್ಷಕಿ ಶೋಭಾ ಕಾಗಿ, ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ ಇದ್ದರು.


ಸಾನಿಯಾ ಹುನಗುಂದ ಭರತ ನಾಟ್ಯ ಪ್ರದರ್ಶಿಸಿದರು. ಶಿಕ್ಷಕ ಶಂಕರ ಲಮಾಣಿ, ಶಿಕ್ಷಕಿ ಸರಿತಾ ಶಿರಗುಪ್ಪಿ ನಿರೂಪಿಸಿದರು. ಓಲೆಮಠದ ಆನಂದ ದೇವರು ಶ್ರೀಗಳು ಶರಣು ಸಮರ್ಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top