ಸಿದ್ಧರಬೆಟ್ಟದಲ್ಲಿ ಚಾರಣ ಮತ್ತು ಸ್ವಚ್ಛತಾ ಅಭಿಯಾನ ಏಪ್ರಿಲ್ 26ರಂದು

Upayuktha
0


ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟದಲ್ಲಿ ಏಪ್ರಿಲ್ 26, 2026ರಂದು ಭಾನುವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ “ಸಿದ್ಧರಬೆಟ್ಟ ಚಾರಣ ಮತ್ತು ಸ್ವಚ್ಛತಾ ಅಭಿಯಾನ”ವನ್ನು ಭಾವೈಕ್ಯ ಯುವಜನ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದೆ.


ಯೂಥ್ ಫಾರ್ ಸೇವಾ ತುಮಕೂರ್ ಚಾಪ್ಟರ್, ಕನಸು ಸಂಘಟನೆ, ಭಾವೈಕ್ಯ ಯುವಜನ ಸಂಘ, ಕಲಾ ಕಲ್ಪಂ ಸಂಸ್ಥೆ-  ಹೀಗೆ ಹಲವು ಸಮಾನ ಮನಸ್ಕ ಸಂಘ ಸಂಸ್ಥೆಗಳು ಜೊತೆಗೂಡಿ ಇದನ್ನು ಆಯೋಜಿಸುತ್ತಿದ್ದಾರೆ.


ಈ ಕಾರ್ಯಕ್ರಮದ ಮೂಲಕ ಸಿದ್ಧರಬೆಟ್ಟದ ನೈಸರ್ಗಿಕ ಸೌಂದರ್ಯವನ್ನು ಕಾಪಾಡುವುದು ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಯುವಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಚಾರಣದ ಜೊತೆಗೆ ಬೆಟ್ಟದ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.


ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಘಟಕರು ಆಹ್ವಾನಿಸಿದ್ದು, ಭಾಗವಹಿಸುವವರು ಬೇಸಿಗೆಯ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಚಾರಣಕ್ಕೆ ಅನುಕೂಲವಾಗುವ ಪಾದರಕ್ಷೆಗಳನ್ನು ಬಳಸುವಂತೆ ಸೂಚಿಸಿದ್ದಾರೆ. ಜೊತೆಗೆ ನೀರಿನ ಬಾಟಲ್, ಟೋಪಿ ಸೇರಿದಂತೆ ಅಗತ್ಯವಿರುವ ವೈಯಕ್ತಿಕ ಸಾಮಗ್ರಿಗಳನ್ನು ತರಲು ಮನವಿ ಮಾಡಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ 63641 05204 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.


ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಭಾವೈಕ್ಯ ಯುವಜನ ಸಂಘ ಮನವಿ ಮಾಡಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top