ಟಿಸಿಎಸ್ ಟೆಕ್‍ಬೈಟ್ಸ್: ಮೈಟ್ ತಂಡಕ್ಕೆ ಪ್ರಶಸ್ತಿ

Upayuktha
0


ಮಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡಡ್ರ್ಸ್ (ಬೈಟ್ಸ್) ಜಂಟಿಯಾಗಿ ಆಯೋಜಿಸಿದ್ದ 17ನೇ ಆವೃತ್ತಿಯ ಮಂಗಳೂರು ವಲಯದ 'ಟಿಸಿಎಸ್ ಟೆಕ್ ಬೈಟ್ಸ್' ಐಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಂಗಳೂರು ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ (ಎಂಐಟಿಇ) ಕಾಲೇಜು ತಂಡ ಪ್ರಶಸ್ತಿ ಗಳಿಸಿದೆ.


ಅತ್ಯಂತ ವೇಗವಾಗಿ ಮತ್ತು ರೋಚಕವಾಗಿ ನಡೆದ ಹಲವು ಸುತ್ತುಗಳ ಸ್ಪರ್ಧೆಯಲ್ಲಿ ಮೂಡಬಿದರೆ ಎಂಐಟಿಇ ಕಾಲೇಜಿನ ಸುಶಾಂತ್ ವಿ.ಎನ್ ಮತ್ತು ಶುಭಂ ದಧಿಕ್ ವಿಜೇತರಾಗಿ ಹೊರಹೊಮ್ಮಿದರು. ನಿಟ್ಟೆ ಎನ್‍ಎಂಎಎಂ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸುಜ್ಞಾನ್ ಡಿ. ದೇವಾಡಿಗ ಮತ್ತು ಆದಿತ್ಯ ಭಟ್ ಕೆ. ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಂಗಳೂರು ವಲಯದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. 


ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‍ಮೆಂಟ್ ನಲ್ಲಿ ಈ ರಸಪ್ರಶ್ನೆಯ ಪ್ರಾಥಮಿಕ ಲಿಖಿತ ಪರೀಕ್ಷೆ ನಡೆಯಿತು. ಈ ಹಂತದಲ್ಲಿ ಆಯ್ಕೆಯಾದ ಅಗ್ರ ಆರು ತಂಡಗಳು ಅಂತಿಮ ಸುತ್ತಿನ ಸಂವಾದಾತ್ಮಕ ಕ್ವಿಜ್ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದವು. ಐದು ವಿಭಾಗಗಳಲ್ಲಿ ನಡೆದ ಈ ಕ್ವಿಜ್, ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನವನ್ನು ಪರೀಕ್ಷಿಸಿತು.


ಸಹ್ಯಾದ್ರಿ ಪ್ರಾಂಶುಪಾಲರಾದ ಡಾ. ಎಸ್.ಎಸ್. ಇಂಜಗನೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಮಂಗಳೂರು ಆವೃತ್ತಿಯ ವಿಜೇತ ತಂಡವು ಮೇ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಫೈನಲ್ಸ್‍ನಲ್ಲಿ ಮಂಗಳೂರನ್ನು ಪ್ರತಿನಿಧಿಸಲಿದೆ ಎಂದು ಟಿಸಿಎಸ್ ಬೆಂಗಳೂರು ವಲಯದ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮತ್ತು ಬೈಟ್ಸ್ ಅಧ್ಯಕ್ಷ ಪ್ರೊ. ಎಸ್. ಸಡಗೋಪನ್ ಹೇಳಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top