ಚಿಣ್ಣರ ಪ್ರತಿಭೆಗಳಿಗೆ ಬೇಸಿಗೆ ಶಿಬಿರಗಳು ಪೂರಕ: ರವಿ ಅಲೆವೂರಾಯ

Upayuktha
0



ಮಂಗಳೂರು: "ವರ್ಷಪೂರ್ತಿ ಅಕಾಡೆಮಿಕ್ ಆಗಿಯೇ ತೊಡಗಿಸಿಕೊಳ್ಳುವ ವಿದ್ಯಾರ್ಥಿ ಮಿತ್ರರಿಗೆ ಬೇಸಿಗೆಯ ವಿಶೇಷ ಶಿಬಿರಗಳು ಚೇತೋಹಾರಿಯಾಗಿರುತ್ತವೆ. ಪ್ರತೀ ವಿದ್ಯಾರ್ಥಿಯಲ್ಲೂ ಭಿನ್ನ ಭಿನ್ನ ಪ್ರತಿಭೆಇರುತ್ತದೆ. ಅದಕ್ಕೆ ವೇದಿಕೆಗಳ ಅಗತ್ಯಇರುತ್ತದೆ. ಬೇಸಿಗೆ ಶಿಬಿರವನ್ನು ಸೇರಿಕೊಂಡಾಗ ಅನೇಕ ಸಂಪನ್ಮೂಲ ವ್ಯಕ್ತಿಗಳು ಕಲೆ, ಸಂಸ್ಕಾರ, ಸಂಸ್ಕೃತಿಗಳ ಪರಿಚಯ ಮಾಡಿಸುತ್ತಾರೆ. ಅವು ಎಳೆಯರ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುತ್ತವೆ. ಜೊತೆಯಲ್ಲಿ ಅವು ಮುಂದಿನ ಸುಧೃಡ ಬದುಕನ್ನು ಕಟ್ಟುವಲ್ಲಿ ಭದ್ರ ಬುನಾದಿಯೂ ಆಗಿರುತ್ತದೆ. ಇಂದಿನ ವೇಗದ ಜಗತ್ತಿಗೆ ಒಗ್ಗಿಕೊಳ್ಳುವಂತೆ ಆತ್ಮಸ್ಥೆರ್ಯವನ್ನು ವೃಧ್ಧಿಸಿಕೊಡುತ್ತದೆ. ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಂಡು ಪ್ರಬುದ್ಧರಾಗುತ್ತಾರೆ. ಯಕ್ಷ ಸುಧಾಂಶು ಸಂಘಟನೆಯು ದಿನಪೂರ್ತಿ ನಡೆಸುವ ಈ ಶಿಬಿರದ ಪ್ರಯೋಜನವನ್ನು ಹೆಚ್ಚಿನ ಎಳೆಯರು ಪಡೆಯುವಂತಾಗಲಿ" ಎಂದು ನವಭಾರತ ರಾತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವರ್ಕಾಡಿ ರವಿ ಅಲೆವೂರಾಯರು ನುಡಿದರು.


ಅವರು ಶಕ್ತಿ ನಗರದ ಹಂಸಧ್ವನಿ ಸಭಾಭವನದಲ್ಲಿ ಯಕ್ಷ ಸುಧಾಂಶು ಸಂಘಟನೆಯ ಆಶ್ರಯದಲ್ಲಿ ಜರಗುವ ಚಿಣ್ಣರ ಬಿಂಬ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.



ಚಿತ್ರನಟ ಚಂದ್ರಹಾಸ ಉಳ್ಳಾಲ್, ಬಹುಮುಖ ಪ್ರತಿಭೆ ವಿಸ್ಮಯ ವಿನಾಯಕ್, ಸಹಸ್ರಾರು ಮಕ್ಕಳ ಶಿಬಿರದ ಸಂಘಟಕ ಪ್ರಕಾಶ್ ಪೈ, ಚಿತ್ರ ಶಿಕ್ಷಕ ನವೀನ ಅಡ್ಕಾರ್, ಶಿಬಿರದ ನಿರ್ದೇಶಕಿ ಶ್ರೀಮತಿ ವನಶ್ರೀ ಭಟ್ ವೇದಿಕೆಯನ್ನು ಅಲಂಕರಿಸಿದ್ದರು.


ನವೀನ್ ಅಡ್ಕಾರ್ ರವರ ವಿಶೇಷ ಚಿತ್ರ ರಚನೆಯಿಂದ ಶಿಬಿರ ಮುಂದುವರಿಯಿತು. ನಿರ್ದೇಶಕ , ಭಾಗವತ ಸುಧಾಕರ ಸಾಲ್ಯಾನ್ ನಿರೂಪಿಸಿದರು. ಶ್ರೀಮತಿ ಲಕ್ಷೀ ಯಸ್. ಸಾಲ್ಯಾನ್ ರವರು ಧನ್ಯವಾದವೀಯುತ್ತಾ ಶಿಬಿರವು ಹದಿನೈದು ದಿನಗಳ ಕಾಲ ನಡೆಯಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top