ಬೆಂಗಳೂರು: ಕರ್ನಾಟಕ ಕಲಾದರ್ಶಿನಿ (ರಿ) ತಂಡದ ಬೇಸಿಗೆ ಶಿಬಿರದ ಅಂಗವಾಗಿ ಬಾಲಕಲಾವಿದರಿಂದ ಹಿರಣ್ಯಾಕ್ಷ ವಧೆ- ಭಕ್ತ ಪ್ರಹ್ಲಾದ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಇತ್ತೀಚೆಗೆ ಗಿರಿನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಆಡಿತೋರಿಸಲಾಯಿತು.
ಬೇಸಿಗೆ ಶಿಬಿರ ಆಂಗವಾಗಿ ಯಕ್ಷಗುರು ಶ್ರೀನಿವಾಸ ಸಾಸ್ತಾನ ಅವರು ಪುಟಾಣಿಗಳಿಗೆ ಯಕ್ಷಗಾನ ತರಬೇತಿ ನೀಡಿ, ಈ ಪ್ರಸಂಗವನ್ನು ಆಯೋಜಿಸಿಕೊಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ರಾಮಚಂದ್ರಾಪರ ಮಠದ ಸಹಕಾರದಿಂದ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀರಾಮಸೇವಾಸಮತಿ ಅಧ್ಯಕ್ಷ ರಮೇಶ್ ಹೆಗಡೆ, ಯಕ್ಷಗಾನ ಕಲಾವಿದ ಸದಾನಂದ ಹೆಗಡೆ, ಯಕ್ಷಗಾನ ಗುರು ಹಾಗೂ ಕರ್ನಾಟಕ ಕಲಾದರ್ಶಿನಿ ತಂಡದ ಮುಖ್ಯಸ್ಥರಾದ ಶ್ರೀನಿವಾಸ ಸಾಸ್ತಾನ, ಕಲಾವಿದ ಮಟ್ಟಿ ರಾಮಚಂದ್ರ ರಾವ್ ಮತ್ತಿತರರು ಭಾಗವಹಿಸಿದ್ದರು.
ಯಕ್ಷಗಾನ ಕಾರ್ಯಕ್ರಮದಲ್ಲಿ ಬಾಲಕಲಾವಿದರಾದ ಶ್ರೇಯಸ್ ಸರಳಾಯ, ಧೃತಿ ಅಮ್ಮೆಂಬಳ, ಸೃಷ್ಟಿ ಚೇತನ್ ಜಯಂತ, ಆಯುಷ್ ಎಸ್, ಶ್ರೀವತ್ಸ ಸರಳಾಯ, ಇಶಾನಿ ಎಸ್, ಶ್ರೇಷ್ಠಾ ಚೇತನ್ ಜಯಂತ, ಕೃತಿ ಅಮ್ಮೆಂಬಳ, ಧನುಶ್, ಪರ್ಯಂತ್ ಪಾತ್ರಗಳನ್ನು ನಿರ್ವಹಿಸಿದ್ದರು.
ಹಿಮ್ಮೇಳದಲ್ಲಿ ಪ್ರಸನ್ನ ಹೆಗಡೆ (ಭಾಗವತ), ರಘು ಶರ್ಮ (ಮೃದಂಗ) ಮಂಜುನಾಥ ದೇವಾಡಿಗ (ಚೆಂಡೆ) ಭಾಗವಹಿಸಿದ್ದರು. ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆ ಕೆ. ಗೌರಿ ಕಾರ್ಯಕ್ರಮವನ್ನು ನಿರ್ವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

